ಜಮ್ಮು-ಕಾಶ್ಮೀರ ಬಗ್ಗೆ ಪೋಸ್ಟ್ ಮಾಡುವ ಮುನ್ನ ಎಚ್ಚರ..!

ಸಾರ್ವಜನಿಕರ ಅಭಿಪ್ರಾಯ ಹಾಗೂ ಇನ್ನಿತರ ಯಾವುದೇ ಅನಗತ್ಯ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ರವಾನಿಸಬೇಡಿ. ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಕೆಡುವುದಲ್ಲದೇ, ಉದ್ವಿಗ್ನತೆ ಸೃಷ್ಟಿಯಾಗುತ್ತದೆ.

zahir | news18-kannada
Updated:August 5, 2019, 5:36 PM IST
ಜಮ್ಮು-ಕಾಶ್ಮೀರ ಬಗ್ಗೆ ಪೋಸ್ಟ್ ಮಾಡುವ ಮುನ್ನ ಎಚ್ಚರ..!
ಸಾಂದರ್ಭಿಕ ಚಿತ್ರ
  • Share this:
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ಹಾಗೂ 35ಎ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಸರಕಾರದ ದಿಟ್ಟ ನಿರ್ಧಾರವನ್ನು ಮಿತ್ರಪಕ್ಷ ಜೆಡಿಯು ವಿರೋಧಿಸಿದ್ದರೆ, ಬಿಎಸ್ಪಿ ಸೇರಿದಂತೆ ಕೆಲ ವಿರೋಧ ಪಕ್ಷಗಳು ಬೆಂಬಲಿಸಿವೆ. ಇದರ ನಡುವೆ ಮೋದಿ ಸರ್ಕಾರದ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧಗಳು ವ್ಯಕ್ತವಾಗುತ್ತಿವೆ.

ಫೇಸ್​ಬುಕ್, ವಾಟ್ಸ್​ಆ್ಯಪ್ ಮತ್ತು ಟ್ವಿಟರ್​ನಲ್ಲಿ ಜಮ್ಮು-ಕಾಶ್ಮೀರ ಮತ್ತು ಆರ್ಟಿಕಲ್ 370 ಕುರಿತಾದ ಪೋಸ್ಟ್​ಗಳನ್ನು ಹರಿಬಿಡಲಾಗುತ್ತಿದೆ. ಇದರಲ್ಲಿ ಕೆಲವೊಂದು ಹೊಸ ನಿರ್ಧಾರದ ಪರವಾಗಿದ್ದರೆ, ಮತ್ತೆ ಕೆಲವು ಸುಳ್ಳು ಸುದ್ದಿಗಳು ಹರಿದಾಡಲಾರಂಭಿಸಿದೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ನೋಯ್ಡಾ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ದೀಕ್ಷಿತ್, ಯಾವುದೇ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಕ್ಕಿಂತ ಮುಂಚಿತವಾಗಿ ಅಂತಹ ಸುದ್ದಿಗಳು ನಿಜವೇ ಎಂದು ದೃಢಪಡಿಸಿಕೊಳ್ಳಿ. ಯಾವುದೇ ಮಾಹಿತಿಯಿಲ್ಲದೆ ಮೆಸೇಜ್​ಗಳನ್ನು ರವಾನಿಸಬೇಡಿ ಎಂದು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಕುರಿತಾದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ರೀತಿಯ ಸುದ್ದಿಗಳನ್ನು ರವಾನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಪ್ರಭಾತ್ ದೀಕ್ಷಿತ್ ಎಚ್ಚರಿಸಿದ್ದಾರೆ.

"ಸಾರ್ವಜನಿಕರ ಅಭಿಪ್ರಾಯ ಹಾಗೂ ಇನ್ನಿತರ ಯಾವುದೇ ಅನಗತ್ಯ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ರವಾನಿಸಬೇಡಿ. ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಕೆಡುವುದಲ್ಲದೇ, ಉದ್ವಿಗ್ನತೆ ಸೃಷ್ಟಿಯಾಗುತ್ತದೆ. ಈ ರೀತಿಯ ಸುದ್ದಿಗಳನ್ನು ಫಾವರ್ಡ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು" ನೋಯ್ಡಾ ಜಿಲ್ಲಾ ಮಾಹಿತಿ ಅಧಿಕಾರಿ ರಾಕೇಶ್ ಚೌಹಾನ್ ಅವರು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಬರುವಂತಹ ನಿರಾಧಾರ ಸುದ್ದಿಗಳನ್ನು ಕೂಲಂಕುಶವಾಗಿ ಪರಿಶೀಲಿಸದೆ ಫಾರ್ವರ್ಡ್​ ಮಾಡಬೇಡಿ. ವಿಧಿ 370 ಹಾಗೂ ಕಾಶ್ಮೀರದ ಕುರಿತಾದ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇಂತಹ ದೇಶ ವಿರೋಧಿ ಮೆಸೇಜ್​ಗಳು ಹಾಗೂ ಕಾನೂನು ವಿರೋಧಿ ಸಂದೇಶಗಳು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸೋಮವಾರ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ 370 ವಿಧಿ ರದ್ಧತಿ ಮಸೂದೆಯನ್ನು ಮಂಡಿಸಿತು. ಇದರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದೆ. ಹೀಗಾಗಿ ಸಂವಿಧಾನದ 370ನೇ ವಿಧಿಯ ಎಲ್ಲಾ ಷರತ್ತುಗಳು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.

ಈ ಮೂಲಕ ಕಳೆದ 6 ದಶಕಗಳಿಂದ ಭಾರತದಲ್ಲಿ ನಿರಂತರವಾಗಿ ಚರ್ಚಾಸ್ಫದವಾಗಿದ್ದ ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ಹಾಗೂ 35ಎ  ಕಲಂಗಳಿಗೆ ತಿಲಾಂಜಲಿ ಹಾಡಲಾಯಿತು.
ಇದನ್ನೂ ಓದಿ : ಕಾಶ್ಮೀರದ ವಿಶೇಷ ಸವಲತ್ತಿಗೆ ಕತ್ತರಿ; ಏನಿದು ಕಲಂ 370? ಇದರ ಹಿನ್ನೆಲೆ, ಇತಿಹಾಸವೇನು? ರದ್ದುಗೊಳಿಸಿದರೆ ಆಗುವ ಪರಿಣಾಮವೇನು? ಇಲ್ಲಿದೆ ಮಾಹಿತಿ

First published:August 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading