ದೆಹಲಿ ಹಿಂಸಾಚಾರ; ಬೇಜವಾಬ್ದಾರಿ ಹೇಳಿಕೆ ನೀಡದಂತೆ ಇಸ್ಲಾಮಿಕ್ ಸಂಘಟನೆಗಳಿಗೆ ಸೂಚನೆ ನೀಡಿದ ಕೇಂದ್ರ ಸರ್ಕಾರ

ದೆಹಲಿಯಲ್ಲಿ ಕಳೆದ ಸೋಮವಾರ ಸಂಜೆ ಆರಂಭವಾದ ಗಲಭೆಗೆ ಈವರೆಗೆ ಸುಮಾರು 37 ಜನ ಜೀವ ಕಳೆದುಕೊಂಡಿದ್ದರೆ, 200ಕ್ಕೂ ಹೆಚ್ಚು ಜನ ಗಂಭೀರ ಗಾಯಕ್ಕೊಳಗಾಗಿದ್ದಾರೆ. ನಾಲ್ಕು ದಿನವಾದರೂ ಗಲಭೆಯನ್ನು ತಡೆಗಟ್ಟಲು ದೆಹಲಿ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ, ಪರಿಣಾಮ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಮತ್ತು ಜನಜೀವನ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ.

MAshok Kumar | news18-kannada
Updated:February 27, 2020, 8:13 PM IST
ದೆಹಲಿ ಹಿಂಸಾಚಾರ; ಬೇಜವಾಬ್ದಾರಿ ಹೇಳಿಕೆ ನೀಡದಂತೆ ಇಸ್ಲಾಮಿಕ್ ಸಂಘಟನೆಗಳಿಗೆ ಸೂಚನೆ ನೀಡಿದ ಕೇಂದ್ರ ಸರ್ಕಾರ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್​ ಕುಮಾರ್.
  • Share this:
ನವ ದೆಹಲಿ (ಫೆಬ್ರವರಿ 27); ದೆಹಲಿ ಹಿಂಸಾಚಾರದ ಕುರಿತು ಕೆಲವು ಮುಸ್ಲಿಂ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದ ಬೆನ್ನಿಗೆ ಎಚ್ಚೆತ್ತಿರುವ ಕೇಂದ್ರ ಸರ್ಕಾರ, “ಇಂತಹ ಪ್ರಕ್ಷುಬ್ಧ ಸಮಯದಲ್ಲಿ ಯಾವುದೇ ಬೇಜವಾಬ್ದಾರಿ ಹೇಳಿಕೆ ನೀಡದಂತೆ” ಇಸ್ಲಾಮಿಕ್ ಸಹಕಾರ ಸಂಘಟನೆಗಳನ್ನು ಒತ್ತಾಯಿಸಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, "ಕಾನೂನು ಜಾರಿ ಸಂಸ್ಥೆಗಳು ಇನ್ನೂ ಈ ನೆಲದ ಮೇಲೆ ಇದ್ದು, ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡದಂತೆ ನಾನು ಇಸ್ಲಾಮಿಕ್ ಸಹಕಾರ ಸಂಘಟನೆಗಳಲ್ಲಿ(ಒಐಸಿ) ವಿನಂತಿಸುತ್ತೇನೆ. ಏಕೆಂದರೆ ಇಂತಹ ಹೇಳಿಕೆಗಳು ಪರಿಹಾರಕ್ಕಿಂತ ಹೆಚ್ಚು ಸಮಸ್ಯೆಗಳನ್ನೇ ಸೃಷ್ಟಿಸುತ್ತವೆ”ಎಂದು ತಿಳಿಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಸಹ ಶಾಂತಿ ಮತ್ತು ಸಹೋದರತ್ವಕ್ಕಾಗಿ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ. ದೆಹಲಿ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ತನಿಖೆ ನಡೆಯುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ (ಒಐಸಿ) ಇಸ್ಲಾಮಿಕ್ ಸಹಕಾರ ಸಂಘಟನೆ ತಾನು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, “ಇತ್ತೀಚೆಗೆ ಭಾರತದಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ಈ ಹಿಂಸಾಚಾರದಲ್ಲಿ ಮುಗ್ಧ ಜನರು ಸಾವನ್ನಪ್ಪುತ್ತಿದ್ದಾರೆ, ಮಸೀದಿಗಳನ್ನು ಧ್ವಂಸ ಮಾಡಲಾಗುತ್ತಿದೆ, ಮುಸ್ಲಿಮರ ಒಡೆತನದ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ, ವಿಧ್ವಂಸಕ ಕೃತ್ಯಗಳನ್ನು ಎಸಗಲಾಗುತ್ತಿದೆ. ಇದೊಂದು ಘೋರ ಹಿಂಸಾಚಾರ” ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

ದೆಹಲಿಯಲ್ಲಿ ಕಳೆದ ಸೋಮವಾರ ಸಂಜೆ ಆರಂಭವಾದ ಗಲಭೆಗೆ ಈವರೆಗೆ ಸುಮಾರು 37 ಜನ ಜೀವ ಕಳೆದುಕೊಂಡಿದ್ದರೆ, 200ಕ್ಕೂ ಹೆಚ್ಚು ಜನ ಗಂಭೀರ ಗಾಯಕ್ಕೊಳಗಾಗಿದ್ದಾರೆ. ನಾಲ್ಕು ದಿನವಾದರೂ ಗಲಭೆಯನ್ನು ತಡೆಗಟ್ಟಲು ದೆಹಲಿ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ, ಪರಿಣಾಮ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಮತ್ತು ಜನಜೀವನ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ.

ಇದನ್ನೂ ಓದಿ : ದೆಹಲಿ ಗಲಭೆಯ ಹಿಂದೆ ಆಪ್ ಕಾರ್ಯಕರ್ತರ ಕೈವಾಡ ಇದ್ದದ್ದೇ ಆದರೆ ಎರಡರಷ್ಟು ಶಿಕ್ಷೆಯಾಗಲಿ; ಕೇಜ್ರಿವಾಲ್
First published: February 27, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading