ಸಂಖ್ಯೆಯ ಬಗ್ಗೆ ಚಿಂತಿಸಬೇಡಿ, ಸದನದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಿ; ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಸಲಹೆ

ಈ ಬಾರಿಯ ಸಂಸತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆ ಆಗಿದ್ದಾರೆ ಎಂದು ಹೇಳಿದ ಮೋದಿ, ನನ್ನ ಅನುಭವದಲ್ಲಿ ಹೇಳುವುದಾದರೆ ಸಂಸತ್ತಿನ ಕಾರ್ಯಕಲಾಪಗಳು ಸರಾಗವಾಗಿ ನಡೆದುಕೊಂಡು ಹೋದಾಗ ಮಾತ್ರ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯ ಎಂದರು.

HR Ramesh | news18
Updated:June 17, 2019, 12:14 PM IST
ಸಂಖ್ಯೆಯ ಬಗ್ಗೆ ಚಿಂತಿಸಬೇಡಿ, ಸದನದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಿ; ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಸಲಹೆ
ಪ್ರಧಾನಿ ನರೇಂದ್ರ ಮೋದಿ
  • News18
  • Last Updated: June 17, 2019, 12:14 PM IST
  • Share this:
ನವದೆಹಲಿ: ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರಾಮುಖ್ಯತೆ ಬಗ್ಗೆ ಪ್ರಧಾನಿ ಮೋದಿ ಸೋಮವಾರ ಮಾತನಾಡಿದ್ದಾರೆ. ವಿರೋಧ ಪಕ್ಷಗಳು ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಸದನದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ.

17ನೇ ಲೋಕಸಭೆಯ ಬಜೆಟ್​ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಇದಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಕ್ರಿಯಾಶೀಲವಾಗಿರಬೇಕು. ವಿರೋಧ ಪಕ್ಷಗಳು ಸಂಖ್ಯೆಯ ಬಗ್ಗೆ ಚಿಂತೆ ಮಾಡಬಾರದು. ಸದನದಲ್ಲಿ ವಿರೋಧ ಪಕ್ಷಗಳು ಮುಕ್ತವಾಗಿ ಮಾತನಾಡಲಿವೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ನಾವು ಸಂಸತ್ತಿಗೆ ಬಂದಾಗ ಪಕ್ಷ, ವಿಪಕ್ಷ ಎಂಬುದನ್ನು ಮರೆತುಬಿಡಬೇಕು. ನಾವು ಕೇವಲ ನಿಷ್ಪಕ್ಷದ ಬಗ್ಗೆ ಚಿಂತಿಸಬೇಕು. ದೇಶದ ಅಭಿವೃದ್ಧಿ ವಿಚಾರವಾಗಿಯಷ್ಟೇ ಉತ್ಸಾಹ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಎಲ್ಲ ಸಂಸದರಿಗೆ ಕರೆ ನೀಡಿದರು.

ಈ ಬಾರಿಯ ಸಂಸತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆ ಆಗಿದ್ದಾರೆ ಎಂದು ಹೇಳಿದ ಮೋದಿ, ನನ್ನ ಅನುಭವದಲ್ಲಿ ಹೇಳುವುದಾದರೆ ಸಂಸತ್ತಿನ ಕಾರ್ಯಕಲಾಪಗಳು ಸರಾಗವಾಗಿ ನಡೆದುಕೊಂಡು ಹೋದಾಗ ಮಾತ್ರ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯ ಎಂದರು.
Loading...

First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...