ನವದೆಹಲಿ(26): ಮೇಜರ್ ಸಂದೀಪ್ ಉನ್ನಿಕೃಷ್ಣನ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಈ ಹುತಾತ್ಮ ಯೋಧನ ಹೆಸರು ಕೇಳಿದ ಕೂಡಲೇ ದೇಶದ ಪ್ರತಿಯೊಬ್ಬ ಭಾರತೀಯನ ಮೈಯೆಲ್ಲಾ ರೋಮಾಂಚನ ಆಗುತ್ತದೆ. ದುರಂತ ಅಂದರೆ, 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೇ ಎದುರಾಳಿಗಳನ್ನು ನೆಲಕ್ಕೆ ಹೊಡೆದುರುಳಿಸಿದ ಸಂದೀಪ್ ಉನ್ನಿಕೃಷ್ಣನ್ ಅದೇ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ, ಹುತಾತ್ಮರಾದರು.
ಮುಂಬೈನಲ್ಲಿ ತಾಜ್ ವೆಸ್ಟ್ ಹೋಟೆಲ್ ಮೇಲೆ ಉಗ್ರರು ನಡೆಸಿದ ದಾಳಿಗೆ ಇಂದಿಗೆ ಹತ್ತು ವರ್ಷ. ಸಂದೀಪ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ 10 ವರುಷಗಳೇ ಕಳೆದವು. ಎನ್‌ಎಸ್‌ಜಿ ಕಮಾಂಡೊ ಹಾಗೂ ಮೇಜರ್ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಅವರು, ಮುಂಬೈ ದಾಳಿಯಲ್ಲಿ ಉಗ್ರರೊಂದಿಗೆ ಸೆಣಸಾಡಿ ದೇಶಕ್ಕಾಗಿ ಮಡಿದಿದ್ದಾರೆ.
ಅವತ್ತು, ತಾಜ್ ಹೋಟೆಲ್ಗೆ ಉಗ್ರರು ದಾಳಿ ನಡೆಸಿದರು. ಹೋಟೆಲ್ಗೆ ಮುತ್ತಿಗೆ ಹಾಕಿ ಸಿಕ್ಕ ಸಿಕ್ಕ ಕಡೆ ಗುಂಡು ಹಾರಿಸಿದ ಉಗ್ರರು 166 ಜನರನ್ನು ಬಲಿ ತೆಗೆದುಕೊಂಡರು. 26/11 ನ ಸಂಪೂರ್ಣ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ್ದ ಸಂದೀಪ್ ಉನ್ನಿಕೃಷ್ಣನ್ ನೇತೃತ್ವದ ಪಡೆ ಕಾರ್ಯಾಚರಣೆ ಆಂರಭಿಸಿತು. ಉಗ್ರರು ನೂರಾರು ಜನರನ್ನು ಕೊಂದಿದ್ದಷ್ಟೇ ಅಲ್ಲದೇ, ಹೋಟೆಲ್ಲಿನಲ್ಲಿದ್ದವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು.
ಇದನ್ನೂ ಓದಿ: 26/11 ಮುಂಬೈ ದಾಳಿಗೆ ಹತ್ತು ವರ್ಷ; ಭಯೋತ್ಪಾದನೆ ದಮನಕ್ಕೆ ಪಾಕಿಸ್ತಾನ ಸೇರಿ ಇತರೆ ದೇಶಗಳನ್ನು ಮಾತುಕತೆಗೆ ಕರೆದ ಅಮೆರಿಕ
ಅದೊಂದು ಭಯಾನಕ ಕಾರ್ಯಾಚರಣೆಯಾಗಿತ್ತು. ಕೇವಲ ಉಗ್ರರನ್ನು ಸೆದೆಬಡೆಯುವುದಷ್ಟೇ ಸಂದೀಪ್ ಗುರಿಯಾಗಿರಲಿಲ್ಲ ಜೊತೆಗೆ ಜನರ ಪ್ರಾಣ ರಕ್ಷಣೆಯೂ ಅವರ ಹೊಣೆಯಾಗಿತ್ತು. ಅಂದು ಮುಂಬೈನಲ್ಲಿರುವ ತಾಜ್ ಹೋಟೆಲ್ ಉಗ್ರರೊಂದಿಗೆ ಭಾರತದ ಭದ್ರತಾ ಪಡೆ ಪ್ರದರ್ಶಿಸಿದ ಸಾಹಸವನ್ನು ಮರೆಯಲು ಸಾಧ್ಯವೇ ಇಲ್ಲ. ಅಂದಿನ 26/11 ಎನ್ನುವ ದಿನಾಂಕ ಮಾತ್ರ ಇತಿಹಾಸದ ಪುಟದಲ್ಲಿ ದಾಖಲಾಗಿ ಹೋಗಿತ್ತು.
ಮೊದಲಿಗೆ ಆರನೇ ಮಹಡಿಯಲ್ಲಿದ್ದ ಹದಿನಾಲ್ಕು ಒತ್ತೆಯಾಳುಗಳನ್ನು ಸಂದೀಪ್ ತಂಡ ರಕ್ಷಿಸಿತ್ತು. ಅಷ್ಟರಲ್ಲೇ ಸಂದೀಪ್ ತಂಡದ ಇರುವಿಕೆಯನ್ನು ಗಮನಿಸಿದ ಉಗ್ರರು ಬಾಂಬುಗಳನ್ನು ಸಿಡಿಸ ತೊಡಗಿದರು. ಬಾಂಬು ಸಿಡಿಯುವಷ್ಟರಲ್ಲಿ ಮೇಜರ್ ಸಂದೀಪ್ ತಂಡ ಸಿಬ್ಬಂದಿಗೆ ಗಂಭೀರ ಗಾಯಗಳಾದವು. ಇದೇ ಅವಕಾಶ ಬಳಸಿಕೊಂಡ ಉಗ್ರನೋರ್ವ ಸಂದೀಪ್ ಅವರನ್ನು ಹಿಂಬಾಲಿಸಿದರು. ಈ ವೇಳೆ ಉಗ್ರರನ್ನು ಹೊಡೆಯಲು ಮುಂದಾದ ಮತ್ತೋರ್ವ ಯೋಧನಿಗೆ ಸಂದೀಪ್ "ನೀವ್ಯಾರು ಮೇಲೆ ಬರಬೇಡಿ, ನಾನೇ ಇವರನ್ನು ಹೊಡೆದುರುಳಿಸುತ್ತಾನೆ," ಎಂದು ಹೇಳಿದರು. ಇಂದಿಗೆ ಸಂದೀಪ್ ಅವರ ಈ ಮಾತುಗಳ ಎಲ್ಲರ ಕಿವಿಗಳಲ್ಲೂ ಝೇಂಕರಿಸುತ್ತಿದೆ.
ಇದನ್ನೂ ಓದಿ: ಕಂಠೀರವ ಸ್ಟುಡಿಯೋದಲ್ಲಿ ಇಂದು ಅಂಬಿ ಅಂತ್ಯಕ್ರಿಯೆ: ಸರ್ಕಾರದಿಂದ ಸಕಲ ಸಿದ್ಧತೆ
ಈ ಬಗ್ಗೆ ಮಾತಾಡಿದ ಸಂದೀಪ್ ಅವರ ತಂದೆ, "ನನ್ನ ಮಗನಿಗೆ ಎಲ್ಲ ವಿಷಯದಲ್ಲಿಯೂ ಅವನೇ ಗೆಲ್ಲಬೇಕೆಂಬ ಅಚಲ ಗುಣವಿತ್ತು. ಕ್ರೆಕೆಟಿಗ ಸಚಿನ್ ತೆಂಡುಲ್ಕರ್ ಅವರನ್ನು ಇಷ್ಟಡುತ್ತಿದ್ದರು. ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಲೇಬೇಕು ಎಂದು ಹೇಳುತ್ತಿದ್ದ. ಒಂದು ವೇಳೆ ಸೋತರೆ ಭಾರೀ ಬೇಸರಗೊಳ್ಳುತ್ತಿದ್ದ. ಅವನು ದೇಶಕಂಡ ಅಪ್ರತಿಮ ವೀರಯೋಧ ಎಂಬ ಹೆಮ್ಮೆ ನನಗಿದೆ," ಎಂದು ಮಗನ ಬಗ್ಗೆ ಹೆಮ್ಮೆ ಮತ್ತು ಅಭಿಮಾನದಿಂದ ಹೇಳುತ್ತಾರೆ.
ಸಂದೀಪ್ ಅವರಿಗೆ ದೈರ್ಯದ ಜೊತೆಗೆ ಸಹಾಯ ಮನೋಭಾವವೂ ಇತ್ತು. ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಹೆಚ್ಚಿನ ಹಣದ ಪಾಲು ಅನಾಥಾಶ್ರಮಗಳಿಗೆ ಮೀಸಲಿಡುತ್ತಿದ್ದರು. ಒಮ್ಮೆ ಅವರು ಬ್ಯಾಂಕ್ ಖಾತೆ ಪರಿಶೀಲಿಸಿದ್ಧಾಗ ಕೇವಲ ನಾಲ್ಕು ಸಾವಿರ ಇತ್ತು. ಅಲ್ಲಿಯವರೆಗೂ ತಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿತ್ತು ಎಂಬುದರ ಬಗ್ಗೆ ಮಾಹಿತಿಯೇ ಇರಲಿಲ್ಲ, ಅಲ್ಲದೇ ಅದರ ಗೋಜಿಗೆ ಹೋಗುತ್ತಿರಲಿಲ್ಲವಂತೆ.
-----------------
ಅಂಬರೀಶ್ ಅವರ ಅಂತಿಮ ದರ್ಶನಕ್ಕೆಂದು ದುಬೈನಿಂದ ಬೆಂಗಳೂರಿಗೆ ಬಂದಿಳಿದ ನಟ ದರ್ಶನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ