ಚೀನೀಯರ ಸೌಂದರ್ಯ ಹಪಾಹಪಿಗೆ ಆಫ್ರಿಕಾದಿಂದ ಕತ್ತೆಗಳು ಕಣ್ಮರೆ..!


Updated:June 15, 2018, 6:59 PM IST
ಚೀನೀಯರ ಸೌಂದರ್ಯ ಹಪಾಹಪಿಗೆ ಆಫ್ರಿಕಾದಿಂದ ಕತ್ತೆಗಳು ಕಣ್ಮರೆ..!

Updated: June 15, 2018, 6:59 PM IST
- ನ್ಯೂಸ್18 ಕನ್ನಡ

ನೈರೋಬಿ: ಕೆಲವರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹರಸಾಹಸ ಪಟ್ಟರೆ ಮತ್ತೆ ಕೆಲವರಿಗೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಮಾರ್ಗದ ಬಗ್ಗೆ ಯೋಚನೆ. ಅದಕ್ಕಾಗಿ ಏನೇನೋ ಪ್ಲಾನ್​ಗಳನ್ನು ಮಾಡುವವರೂ ಇದ್ದಾರೆ, ಲಕ್ಷಾಂತರ ರೂ. ವೆಚ್ಚ ಮಾಡುವವರೂ ಇದ್ದಾರೆ. ಆದರೆ, ಚೀನಾದವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಕತ್ತೆಯ ಚರ್ಮವೇ ಬೇಕಂತೆ! ಚೀನಾದವರ ತೃಪ್ತಪಡಿಸಲಾರದ ಹಸಿವಿಗೆ ಆಹಾರವಾಗುತ್ತಿರುವುದು ಉಹ್​-ಜೀ-ಓ ಎಂದು ಕರೆಯಲ್ಪಡುವ ಕತ್ತೆಯ ಚರ್ಮವನ್ನು ಬೇಯಿಸಿ ಮಾಡಲಾಗುವ ಪದಾರ್ಥಗಳಂತೆ. ಇದು ಆರೋಗ್ಯಕ್ಕೆ ಬಹಳ ಉಪಯುಕ್ತವೆಂದು ತಿಳಿದ ಬಳಿಕ ಚೀನೀಯರು ಕತ್ತೆಗಳ ಬೆನ್ನತ್ತಿ ಹೋಗುತ್ತಿದ್ದಾರಂತೆ.

ಕೀನ್ಯಾದ ನೈರೋಬಿಯ ಮೈದಾನಗಳಲ್ಲಿ ಮೇಯುತ್ತಿದ್ದ ಕತ್ತೆಗಳು ಅತ್ತಿತ್ತ ನೋಡುವಷ್ಟರಲ್ಲಿಯೇ ಕಣ್ಮರೆಯಾದ ಬಗ್ಗೆ ಹೇಳುವ ಕತ್ತೆಗಳ ಮಾಲೀಕ ಜೋಸೆಫ್​ ಕಮೊಂಜೋ ಕರಿಕಿ ಎಲ್ಲ ಕಡೆ ಹುಡುಕಾಡಿದರೂ ಕತ್ತೆಗಳು ಸಿಗಲಿಲ್ಲ. ಕತ್ತೆಗಳ ಚರ್ಮದ ಬ್ಲಾಕ್​ ಮಾರ್ಕೆಟ್​ ಬಗ್ಗೆ ಕೇಳಿದ್ದ ಜೋಸೆಫ್​ಗೆ ಕೆಲ ಕ್ಷಣಗಳಲ್ಲೇ ಪರಿಸ್ಥಿತಿಯ ಅರಿವಾಗಿತ್ತು.

ಆಫ್ರಿಕಾ, ಆಸ್ಟ್ರೇಲಿಯ, ದಕ್ಷಿಣ ಅಮೆರಿಕದಿಂದ ಕತ್ತೆಯ ಚರ್ಮಗಳನ್ನು ತರಿಸಿಕೊಳ್ಳುವ ಚೀನಾದವರು ದುಬಾರಿ ಬೆಲೆಗೆ ಮಾರುತ್ತಾರೆ. ಇದರಿಂದ ಕತ್ತೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಅವುಗಳ ಚರ್ಮ ಸುಲಿದು  ಹಿಂಸಾತ್ಮಕವಾಗಿ ಬಳಸಿಕೊಳ್ಳುವುದರಿಂದ ಈಗಾಗಲೇ ಆಫ್ರಿಕದಾದ್ಯಂತ ಈ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ.

ಈ ರೀತಿಯ ಕತ್ತೆಗಳ ಬ್ಲಾಕ್​ ಮಾರ್ಕೆಟ್​ ವಿರುದ್ಧವಾಗಿ ಧ್ವನಿಯೆತ್ತಲು ಜೋಸೆಫ್​ ಸ್ವಾಹಿಲಿಯಲ್ಲಿ ಕರಿಕಿ ಟೇಕ್​ ಕೇರ್​ ಆಫ್​ ಯುವರ್​ ಡಾಂಕಿ ಎಂಬ ಅಭಿಯಾನ ಕೈಗೊಂಡಿದ್ದಾರೆ. ಈ ಮೂಲಕ ಕತ್ತೆ ಕಳ್ಳರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ಕಥೆಯ ರೂಪದಲ್ಲಿ ಕತ್ತೆಗಳನ್ನು ಪರಿಚಯಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂಬುದು ಜೋಸೆಫ್​ ಅವರ ಆತಂಕ.

ಈಗಾಗಲೇ ಆಫ್ರಿಕಾದ 14 ಸರ್ಕಾರಗಳು ಕತ್ತೆಯ ಚರ್ಮವನ್ನು ಬೇರೆ ದೇಶಕ್ಕೆ ರಫ್ತು ಮಾಡುವುದಕ್ಕೆ ನಿರ್ಬಂಧ ಹೇರಿವೆ. ಕೀನ್ಯಾದಲ್ಲಿ ಕಳೆದ 9 ವರ್ಷಗಳಿಂದೀಚೆಗೆ ಕತ್ತೆಗಳ ಸಂಖ್ಯೆಯಲ್ಲಿ ಬಹಳ ಇಳಿಮುಖವಾಗಿದ್ದು, 1.8 ಮಿಲಿಯನ್​ ಇದ್ದ ಕತ್ತೆಗಳ ಸಂಖ್ಯೆ ಇದೀಗ 1.2ಗೆ ಇಳಿದಿದೆ.

ಬಹುತೇಕರಿಗೆ ಕತ್ತೆಗಳನ್ನು ಮಾರಲು ಇಚ್ಛಿಸುವುದಿಲ್ಲ. ಕೆಲವರಿಗೆ ಮಾರಲು ಮನಸಿದ್ದರೂ ಅವರ ಬಳಿ ಕತ್ತೆಗಳು ಉಳಿದಿಲ್ಲ. ಹಾಗಾಗಿ, ಬ್ರೋಕರ್​ ಅಥವಾ ಕಳ್ಳರ ಮೂಲಕ ಕತ್ತೆಗಳನ್ನು ಪಡೆಯಲಾಗುತ್ತಿದೆ. ಅವುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
Loading...

ಯಾಕಿಷ್ಟು ಡಿಮ್ಯಾಂಡ್​?
ಕತ್ತೆಗಳ ಬೇಯಿಸಿದ ಚರ್ಮದಿಂದ ಮಾಡುವ ಪದಾರ್ಥವನ್ನು ತಿನ್ನುವುದರಿಂದ ಆಯಸ್ಸು ಹೆಚ್ಚುತ್ತದೆ, ತೂಕ ಕಡಿಮೆಯಾಗುತ್ತದೆ, ದೇಹಕ್ಕೆ ಹೆಚ್ಚಿನ ಶಕ್ತಿ ರವಾನೆಯಾಗುತ್ತದೆ. ಹಾಗಾಗಿ, ಕತ್ತೆಗಳಿಗೂ ಡಿಮ್ಯಾಂಡ್​ ಬಂದಿದೆಯಂತೆ. ಪ್ರತಿವರ್ಷ ಜಗತ್ತಿನ 44 ಮಿಲಿಯನ್​ ಕತ್ತೆಗಳಲ್ಲಿ 2 ಮಿಲಿಯನ್​ ಕತ್ತೆಗಳನ್ನು ಅವುಗಳ ಚರ್ಮಕ್ಕಾಗಿ ಕೊಲ್ಲಲಾಗುತ್ತಿದೆ ಎನ್ನುತ್ತದೆ ಡಾಂಕಿ ಸ್ಯಾಂಕ್ಚುವರಿಯ ವರದಿ.
First published:June 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ