ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು ಎನ್ನುವುದಕ್ಕೆ ಸಾಕ್ಷಿಗಳಿಲ್ಲ- ಮುಲ್ಲರ್​ ವರದಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಗೆಲ್ಲಲು ರಷ್ಯಾ ಪ್ರಭಾವ ಬೀರಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಹಾಗಾಗಿ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶ ಹೊರಡಿಸಲಾಗಿತ್ತು.

news18
Updated:March 25, 2019, 9:08 AM IST
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು ಎನ್ನುವುದಕ್ಕೆ ಸಾಕ್ಷಿಗಳಿಲ್ಲ- ಮುಲ್ಲರ್​ ವರದಿ
ಡೊನಾಲ್ಡ್​ ಟ್ರಂಪ್​
  • News18
  • Last Updated: March 25, 2019, 9:08 AM IST
  • Share this:
ವಾಷಿಂಗ್ಟನ್ (ಮಾ.25)​:  2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು ಎನ್ನುವ ಆರೋಪವನ್ನು ಸಾಬೀತು ಪಡಿಸುವ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂದು ರಾಬರ್ಟ್​​ ಮುಲ್ಲರ್​ ವರದಿ ಹೇಳಿದೆ.

ಹಾಗಂದ ಮಾತ್ರಕ್ಕೆ ಇದೇ ವರದಿ ಅಂತಿಮವಲ್ಲ ಎಂದು ಮಲ್ಲರ್​ ಹೇಳಿದ್ದಾರೆ. “ಅಧ್ಯಕ್ಷೀಯ ಚುನಾವಣೆ ಮೇಲೆ ರಷ್ಯಾ ಪ್ರಭಾವ ಬೀರಿತ್ತು ಎಂಬುದನ್ನು ಸಾಬೀತು ಪಡಿಸಲು ಸದ್ಯ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಈ ವರದಿಯಲ್ಲಿ ಡೊನಾಲ್ಡ್​​ ಟ್ರಂಪ್​ ತಪ್ಪು ಮಾಡಿದ್ದಾರೆ ಎಂದಾಗಲೀ ಅಥವಾ ಅವರು ದೋಷಮುಕ್ತ ಎಂದಾಗಲೀ ನಾವು ಘೋಷಿಸುತ್ತಿಲ್ಲ," ಎಂದಿದ್ದಾರೆ ಮುಲ್ಲರ್​.

ಮುಲ್ಲರ್‌ ಅವರ ತನಿಖೆ ಕಾನೂನಿಗೆ ವಿರುದ್ಧ ಎಂದು ಕಳೆದ ಎರಡು ವರ್ಷಗಳಿಂದ ಡೊನಾಲ್ಡ್‌ ಟ್ರಂಪ್​ ಹೇಳುತ್ತಾ ಬಂದಿದ್ದಾರೆ. ಸಂಪೂರ್ಣ ದೋಷಮುಕ್ತ ಎಂದು ಘೋಷಿಸುವ ಮೊದಲೇಇದು ನಮಗೆ ಸಿಕ್ಕ ಜಯ ಎಂದು ಟ್ರಂಪ್​ ಹೇಳಿಕೊಂಡಿದ್ದಾರೆ. “ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಪ್ರಭಾವ ಬೀರಿದೆ ಎನ್ನುವ ಅನುಮಾನದ ಕಾರ್ಮೋಡ ಇಷ್ಟು ದಿನ ಇತ್ತು. ಕೊನೆಗೂ ಈ ಕಾರ್ಮೋಡ ಸರಿದಿದೆ. ಕೊನೆಗೂ ಸತ್ಯಕ್ಕೆ ಜಯ ಸಂದಿದೆ,” ಎಂದು ಟ್ರಂಪ್​ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಗೆಲ್ಲಲು ರಷ್ಯಾ ಪ್ರಭಾವ ಬೀರಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಹಾಗಾಗಿ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶ ಹೊರಡಿಸಲಾಗಿತ್ತು.

ಇದನ್ನೂ ಓದಿ: ಶೀಘ್ರದಲ್ಲೇ ಭಾರತ-ಪಾಕ್​ನಿಂದ ಸಮಾಧಾನಕರ ಸುದ್ದಿ ಸಿಗಲಿದೆ- ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​

First published: March 25, 2019, 9:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading