HOME » NEWS » National-international » DONALD TRUMP WILL RAISE THE ISSUE OF RELIGIOUS FREEDOM WITH MODI SAYS WHITE HOUSE SNVS

ಟ್ರಂಪ್ ಭೇಟಿ ವೇಳೆ ಧಾರ್ಮಿಕ ಸ್ವಾತಂತ್ರ್ಯ ವಿಚಾರದ ಪ್ರಸ್ತಾಪ ಸಾಧ್ಯತೆ

ಟ್ರಂಪ್ ಭಾರತ ಭೇಟಿಗೂ ಮುನ್ನ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ಭಾರತದಲ್ಲಿನ ಸಿಎಎ, ಎನ್​ಆರ್​ಸಿ ಕುರಿತು ಎಚ್ಚರಿಕೆ ನೀಡುವ ವರದಿಯನ್ನು ಪ್ರಕಟಿಸಿದೆ. ಸಿಎಎ, ಎನ್​ಆರ್​​ಸಿಯಿಂದ ಭಾರತದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಈ ವರದಿ ಆತಂಕ ವ್ಯಕ್ತಪಡಿಸಿದೆ.

Vijayasarthy SN | news18
Updated:February 22, 2020, 1:40 PM IST
ಟ್ರಂಪ್ ಭೇಟಿ ವೇಳೆ ಧಾರ್ಮಿಕ ಸ್ವಾತಂತ್ರ್ಯ ವಿಚಾರದ ಪ್ರಸ್ತಾಪ ಸಾಧ್ಯತೆ
ಟ್ರಂಪ್ ಅವರನ್ನು ಭಾರತದಲ್ಲಿ ಸ್ವಾಗತಿಸುವ ಕಮಾನುಗಳು
  • News18
  • Last Updated: February 22, 2020, 1:40 PM IST
  • Share this:
ವಾಷಿಂಗ್ಟನ್(ಫೆ. 22): ಭಾರತದಲ್ಲಿ ಸಿಎಎ, ಎನ್​ಆರ್​ಸಿ ವಿರೋಧಿ ಹೋರಾಟಗಳು ತಾರಕಕ್ಕೇರುತ್ತಿರುವ ಹೊತ್ತಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭೇಟಿ ಮಾಡುತ್ತಿದ್ದರೆ. ಟ್ರಂಪ್ ಈ ವೇಳೆ ಧಾರ್ಮಿಕ ಸ್ವಾತಂತ್ರ್ಯ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ. ಭಾರತದ ಪ್ರಜಾತಾಂತ್ರಿಕ ಸಂಪ್ರದಾಯ ಮತ್ತು ಪ್ರಜಾತಾಂತ್ರಿಕ ಸಂಸ್ಥೆಗಳ ಬಗ್ಗೆ ಅಮೆರಿಕಕ್ಕೆ ಅತೀವ ಗೌರವ ಇದೆ. ಇವುಗಳ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಭಾರತಕ್ಕೆ ಪ್ರೇರೇಪಣೆ ನೀಡಲಾಗುವುದು ಎಂದು ವೈಟ್​ಹೌಸ್ ಹೇಳಿದೆ.

“ಪ್ರಜಾಪ್ರಭುತ್ವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಟ್ರಂಪ್ ಅವರು ಖಾಸಗಿಯಾಗಿ ಮೋದಿ ಜೊತೆ ಮಾತನಾಡುವುದು ನಿಶ್ಚಿತ. ಹಾಗೆಯೇ, ಸಾರ್ವಜನಿಕವಾಗಿಯೂ ಅವರು ಈ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ. ಧಾರ್ಮಿಕ ಸ್ವಾತಂತ್ರ್ಯದ ವಿಚಾರವನ್ನಂತೂ ಅವರು ನಿಶ್ಚಿತವಾಗಿ ಪ್ರಸ್ತಾಪಿಸುತ್ತಾರೆ” ಎಂದು ಅಮೆರಿಕ ಅಧ್ಯಕ್ಷರ ಕಾರ್ಯಾಲಯದಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಟ್ರಂಪ್ ಭೇಟಿಗೆ ಮುನ್ನ ಯಮುನೆಯ ಕೊಳಕು ನೀಗಿಸಲು ಹೊಸ ನೀರು ಹರಿಸಿದ ಯೋಗಿ ಸರ್ಕಾರ

ಭಾರತದ ಮಾಧ್ಯಮಗಳೊಂದಿಗೆ ಕಾನ್ಫೆರೆನ್ಸ್ ಕಾಲ್ ಮೂಲಕ ಮಾತನಾಡಿದ ವೈಟ್ ಹೌಸ್ ಅಧಿಕಾರಿ, ಸಿಎಎ, ಎನ್​ಆರ್​ಸಿ ವಿಚಾರದ ಬಗ್ಗೆ ಅಮೆರಿಕ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತನಾಡುತ್ತಾರಾ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದಾರೆ.

“ನೀವು ಪ್ರಸ್ತಾಪಿಸಿದ ಕೆಲ ವಿಚಾರಗಳ ಬಗ್ಗೆ ನಮಗೂ ಆತಂಕವಿದೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ಅಧ್ಯಕ್ಷರು ಈ ವಿಚಾರದ ಬಗ್ಗೆ ಮಾತನಾಡಬಹುದು. ಭಾರತದಲ್ಲಿರುವ ಪ್ರಜಾತಂತ್ರ ಪರಂಪರೆ ಮತ್ತು ಧಾರ್ಮಿಕ ಸ್ವಾತಂತ್ರ್ಯದತ್ತ ಇಡೀ ವಿಶ್ವದ ಕಣ್ಣು ನೆಟ್ಟಿರುವುದನ್ನು ತಿಳಿಸಿಕೊಡಲಿದ್ಧಾರೆ” ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ವಿಶ್ವದ ನಾಲ್ಕು ಪ್ರಮುಖ ಧರ್ಮಗಳ ಉಗಮ ಸ್ಥಳವಾಗಿದೆ. ಇಲ್ಲಿ ಧರ್ಮ, ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಶ್ರೀಮಂತವಾಗಿದೆ ಎಂದವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಟ್ರಂಪ್ ಭಾರತದ ಭೇಟಿ, ವ್ಯಾಪಾರ ವೃದ್ಧಿಗೆ ಮಾತುಕತೆ; ದೇಶದ ಡೈರಿ ಉತ್ಪನ್ನಗಳಿಗೆ ತೆರೆಯಲಿದೆಯೇ ಅಮೆರಿಕ ಬಾಗಿಲು?ಇದೇ ವೇಳೆ, ಟ್ರಂಪ್ ಭಾರತ ಭೇಟಿಗೂ ಮುನ್ನ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ಭಾರತದಲ್ಲಿನ ಸಿಎಎ, ಎನ್​ಆರ್​ಸಿ ಕುರಿತು ಎಚ್ಚರಿಕೆ ನೀಡುವ ವರದಿಯನ್ನು ಪ್ರಕಟಿಸಿದೆ. ಸಿಎಎ, ಎನ್​ಆರ್​​ಸಿಯಿಂದ ಭಾರತದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಈ ವರದಿ ಆತಂಕ ವ್ಯಕ್ತಪಡಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆ. 23ರಿಂದ 26ರವರೆಗೆ ಭಾರತದಲ್ಲಿ ಇರಲಿದ್ದಾರೆ. ಈ ವೇಳೆ ಕೆಲ ಪ್ರಮುಖ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿಹಾಕುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವುದರಿಂದ ಟ್ರಂಪ್ ಅವರ ಭಾರತ ಭೇಟಿ ತುಸು ಮಹತ್ವ ಹೊಂದಿದೆ. ಅಮೆರಿಕದಲ್ಲಿ ಭಾರತ ಮೂಲದ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬಹುತೇಕ ಎನ್​ಆರ್​ಐಗಳು ಮೋದಿ ಅಭಿಮಾನಿಗಳೆನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಭಾರತ ಭೇಟಿಯು ತಮ್ಮ ದೇಶದಲ್ಲಿರುವ ಭಾರತೀಯರ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎಂಬುದು ಟ್ರಂಪ್ ಲೆಕ್ಕಾಚಾರ ಇದ್ದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

(ವರದಿ: ಪಿಟಿಐ ಸುದ್ದಿ ಸಂಸ್ಥೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 22, 2020, 1:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories