HOME » NEWS » National-international » DONALD TRUMP TESTS POSITIVE FOR COVID 19 ALONG WITH FIRST LADY MELANIA RMD

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಕೊರೋನಾ ಪಾಸಿಟಿವ್​

ಅಮೆರಿಕದಲ್ಲಿ ನಿತ್ಯವೂ ಕೊರೋನಾ ಪ್ರಕರಣ ಹೆಚ್ಚುತ್ತಲೇ ಇದೆ. ಅಮೆರಿಕದಲ್ಲಿ ಈವರೆಗೆ 74 ಲಕ್ಷ ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 2.12 ಲಕ್ಷ ಜನರು ಮೃತಪಟ್ಟಿದ್ದಾರೆ. 47  ಲಕ್ಷ ಜನರು ಚೇತರಿಕೆ ಕಂಡಿದ್ದಾರೆ.

news18-kannada
Updated:October 2, 2020, 11:52 AM IST
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಕೊರೋನಾ ಪಾಸಿಟಿವ್​
ಡೊನಾಲ್ಡ್‌ ಟ್ರಂಪ್‌.
  • Share this:
ವಾಷ್ಟಿಂಗ್ಟನ್​ (ಅಕ್ಟೋಬರ್ 2):  ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ಜೋರಾಗುತ್ತಿದೆ. ನಿತ್ಯವೂ ಪ್ರಚಾರದಲ್ಲಿ ತೊಡಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಈಗ ಕೊರೋನಾ ಪಾಸಿಟಿವ್​ ಬಂದಿದೆ. ಹೀಗಾಗಿ ಅವರು ಕ್ವಾರಂಟೈನ್​ ಆಗಿದ್ದಾರೆ. ಈ ಬೆಳವಣಿಗೆಯಿಂದ ಅವರ ಚುನಾವಣಾ ಪ್ರಚಾರಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಇನ್ನು ಡೊನಾಲ್ಡ್​ ಟ್ರಂಪ್​ ಪತ್ನಿ ಮೆಲಾನಿಯಾ ಟ್ರಂಪ್​ಗೂ ಕೊರೋನಾ ಪಾಸಿಟಿವ್​ ಬಂದಿದೆ. ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ರಿಪಬ್ಲಿಕನ್​ ಪಾರ್ಟಿಯಿಂದ ಎರಡನೇ ಬಾರಿಗೆ ಕಣಕ್ಕೆ ಇಳಿಯುತ್ತಿದ್ದಾರೆ. ಮತದಾರರನ್ನು ಸೆಳೆಯಲು ಅವರು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ನವೆಂಬರ್​ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹೀಗಾಗಿ ಟ್ರಂಪ್​ ಕೊನೆಯ ಹಂತದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹೀಗಿರುವಾಗಲೇ ಅವರಿಗೆ ಕೊರೋನಾ ಪಾಸಿಟಿವ್​ ಬಂದಿದ್ದು, ಮನೆಯಲ್ಲೇ ಕ್ವಾರಂಟೈನ್​ ಆಗಬೇಕಾದ ಪರಿಸ್ಥಿತಿ ಬಂದೊದಗಿದೆ.

ಟ್ರಂ​ಪ್​ ಆಪ್ತ ಹೋಪ್​ ಹಿಕ್ಸ್​ಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅವರು ಈ ವಾರ ಟ್ರಂಪ್​ ಜೊತೆ ಸಾಕಷ್ಟು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹೀಗಾಗಿ, ಟ್ರಂಪ್​ ಹಾಗೂ ಮಿಲೇನಿಯಾ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಡೊನಾಲ್ಡ್​ ಟ್ರಂಪ್​, ನನಗೆ ಹಾಗೂ ಮಿಲೇನಿಯಾಗೆ ಕೊರೋನಾ ಪಾಸಿಟಿವ್​ ಬಂದಿದೆ. ನಾವು ಕೆಲ ದಿನಗಲ ಕಾಲ ಕ್ವಾರಂಟೈನ್​ನಲ್ಲಿರುತ್ತೇವೆ. ಶೀಘ್ರವೇ ನಾವು ಗುಣಮುಖರಾಗುತ್ತೇವೆ, ಎಂದಿದ್ದಾರೆ.

ಅಮೆರಿಕದಲ್ಲಿ ನಿತ್ಯವೂ ಕೊರೋನಾ ಪ್ರಕರಣ ಹೆಚ್ಚುತ್ತಲೇ ಇದೆ. ಅಮೆರಿಕದಲ್ಲಿ ಈವರೆಗೆ 74 ಲಕ್ಷ ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 2.12 ಲಕ್ಷ ಜನರು ಮೃತಪಟ್ಟಿದ್ದಾರೆ. 47  ಲಕ್ಷ ಜನರು ಚೇತರಿಕೆ ಕಂಡಿದ್ದಾರೆ. ಅಮೆರಿಕದಲ್ಲಿ ಕೊರೋನಾ ನಿಯಂತ್ರಿಸಲು ಟ್ರಂಪ್​ ವಿಫಲವಾಗಿದ್ದು, ಈ ಬಗ್ಗೆ ಭಾರೀ ಆಕ್ರೋಶ ಕೇಳಿ ಬಂದಿದೆ. ಇದು ಅವರ ಚುನಾವಣೆಗೆ ಭಾರೀ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ
Published by: Rajesh Duggumane
First published: October 2, 2020, 11:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories