ಅಫ್ಘಾನಿಸ್ತಾನ ಗ್ರಂಥಾಲಯಕ್ಕೆ ಮೋದಿ ನೆರವು; ‘ಇಲ್ಲಿ ಪುಸ್ತಕ ಓದುವ ಸಂಸ್ಕೃತಿ ಯಾರಿಗಿದೆ?’ ಎಂದ ಟ್ರಂಪ್!

ಈ ಯೋಜನೆಯಡಿ ಕಾಬೂಲ್‌ನಲ್ಲಿ ಉತ್ತಮ ಹೈಸ್ಕೂಲ್ ನಿರ್ಮಾಣ ಮತ್ತು ಪ್ರತಿ ವರ್ಷ 100 ಅಪ್ಘಾನ್ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಉದ್ದೇಶಿಸಲಾಗಿತ್ತು. 2015ರಲ್ಲಿ ಭಾರತದ ನೆರವಿನಡಿ ನಿರ್ಮಿಸಿದ ಅಪ್ಘಾನ್ ಪಾರ್ಲಿಮೆಂಟ್ ಕಟ್ಟಡ ಉದ್ಘಾಟಿಸುವ ವೇಳೆ ಮೋದಿ, ಅಲ್ಲಿನ ಯುವಕರಿಗೆ ಅತ್ಯಾಧುನಿಕ ಶಿಕ್ಷಣ ಹಾಗೂ ವೃತ್ತಿಪರ ಕೌಶಲ್ಯ ಒದಗಿಸುವ ಮೂಲಕ ಸಬಲೀಕರಿಸಲು ಭಾರತ ನೆರವಾಗಲಿದೆ ಎಂದು ಹೇಳಿದ್ದರು.

Ganesh Nachikethu
Updated:January 3, 2019, 11:58 AM IST
ಅಫ್ಘಾನಿಸ್ತಾನ ಗ್ರಂಥಾಲಯಕ್ಕೆ ಮೋದಿ ನೆರವು; ‘ಇಲ್ಲಿ ಪುಸ್ತಕ ಓದುವ ಸಂಸ್ಕೃತಿ ಯಾರಿಗಿದೆ?’ ಎಂದ ಟ್ರಂಪ್!
ಮೋದಿ, ಟ್ರಂಪ್​​
  • Share this:
ನವದೆಹಲಿ(ಜ.03): ಅಫ್ಘಾನಿಸ್ತಾನದಲ್ಲಿ ಆಧುನಿಕ ಗ್ರಂಥಾಲಯವೊಂದರ ನಿರ್ಮಾಣಕ್ಕೆ ಭಾರತ ನೆರವು ನೀಡಲು ಮುಂದಾಗಿದೆ. ಈ ಗ್ರಂಥಾಲಯದಿಂದ ಯಾವುದೇ ಪ್ರಯೋಜನವಿಲ್ಲ. ಇಲ್ಲಿ ಗ್ರಂಥಾಲಯಕ್ಕೆ ಹೋಗಿ ಓದುವ ಸಂಸ್ಕೃತಿ ಯಾರಿಗೆ? ಎಂದು ಭಾರತ ಪ್ರಧಾನಿ ಮೋದಿಯವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಅಲ್ಲದೇ ಇದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಬಹಿರಂಗವಾಗಿಯೇ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಸಚಿವ ಸಂಪುಟ ಸಭೆಯ ಬಳಿಕ ಟ್ರಂಪ್​​​ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಭಾರತ ಅಫ್ಘಾನಿಸ್ತಾನಕ್ಕೆ ನೀಡಿದ ನೆರವಿನ ಬಗ್ಗೆ ಪ್ರಸ್ತಾಪಿಸಿದ್ಧಾರೆ ಎನ್ನಲಾಗಿದೆ. ಜೊತೆಗೆ ಇದೇ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು ನೆನೆದ ಟ್ರಂಪ್​, ಭಾರತದ ಪ್ರಧಾನಿ ನನ್ನನ್ನು ಆಗ್ಗಾಗೆ ಭೇಟಿಯಾಗುತ್ತಿರುತ್ತಾರೆ. ಅಪ್ಘಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಿಸುವ ಬಗ್ಗೆ ನನ್ನೊಂದಿಗೆ ಸತತವಾಗಿ ಹೇಳುತ್ತಿದ್ದರು. ಇದಕ್ಕೆ ನಾವು ಬಹುಶಃ ಅವರಿಗೆ ಕೃತಜ್ಞತೆ ಹೇಳಬೇಕು. ಆದರೆ ಇಲ್ಲಿ ಪುಸ್ತಕ ಬಳಸುವ ಸಂಸ್ಕೃತಿ ಯಾರಿಗಿದೆ?" ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.

ಇನ್ನು, 2001ರ ಸೆಪ್ಟೆಂಬರ್ 11 ಎರಡನೇ ವಿಶ್ವ ಯುದ್ಧದ ಬಳಿಕ ಅಮೆರಿಕ ಕರಾಳ ದಿನ ಎದುರಿಸಿತ್ತು. ನ್ಯೂಯಾರ್ಕ್‌ನ ಪೆಂಟಗಾನ್ ಮತ್ತು ಪೆನ್ಸಿಲ್ವೇನಿಯದಲ್ಲಿ ಭಯೋತ್ಪಾದಕರು ನಾಲ್ಕು ವಿಮಾನಗಳನ್ನು ಕಟ್ಟಡಗಳಿಗೆ ಡಿಕ್ಕಿ ಹೊಡೆದು ಸ್ಪೋಟಿಸಿದ ಆತ್ಮಾಹುತಿ ದಾಳಿಗಳಿಗೆ 3000 ಜನರು ಬಲಿಯಾದರು. ಈ ಭೀಕರತೆ ಘಟನೆ ಬಳಿಕ ಅಮೆರಿಕನ್ ಮಿತ್ರಪಡೆ ತಾಲಿಬಾನ್ ಸರ್ಕಾರವನ್ನು ಕಿತ್ತೊಗೆಯಲಾಯ್ತು.

ಇದನ್ನೂ ಓದಿ: ಇಂದು ಅಧಿವೇಶನದಲ್ಲಿ ನರೇಂದ್ರ ಮೋದಿಗೆ ಓಪನ್ ಬುಕ್ ಪರೀಕ್ಷೆ; ರಾಹುಲ್ ಗಾಂಧಿಯೇ ಮೇಲ್ವಿಚಾರಕ!

ಆಂತರಿಕ ಯುದ್ಧದಿಂದ ತತ್ತರಿಸಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ, ಸ್ಥಿರತೆ, ಭದ್ರತೆಗಳನ್ನು ಸ್ಥಾಪಿಸುವ ಸಂಬಂಧ ಅಗತ್ಯ ನೆರವನ್ನು ನೀಡಲು ಭಾರತ ಒಪ್ಪಿತ್ತು. ಭಾರತ ಅಪ್ಘಾನಿಸ್ತಾನಕ್ಕೆ 300 ಕೋಟಿ ಡಾಲರ್ ನೆರವು ನೀಡಲು ಮುಂದಾಗಿದ್ದು, ಇದಕ್ಕೆ ತಾನು ಬದ್ಧ ಎಂದು ಸ್ಪಷ್ಟಪಡಿಸಿತ್ತು. ತಮ್ಮನ್ನು ಭೇಟಿ ಮಾಡಿದ ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರಿಗೆ ಪ್ರಧಾನಿ ಮೋದಿಯವರೇ ಖುದ್ದು ಈ ಭರವಸೆ ನೀಡಿದ್ದರು.

ಆರೋಗ್ಯ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ, ಕೌಶಲಾಭಿವೃದ್ಧಿ, ಸಾಮರ್ಥ್ಯ ವರ್ಧನೆ ಮುಂತಾದ ಕ್ಷೇತ್ರಗಳಲ್ಲಿ ಅಫ್ಘಾನಿಸ್ತಾನಕ್ಕೆ ಭಾರತ ನೆರವಿನ ಹಸ್ತ ಚಾಚಲು ಸಮ್ಮತಿಸಿತು. ಅಲ್ಲದೇ ಆಫ್ಘಾನಿಸ್ತಾನದ ರೈತರ ಬೆಳೆಗಳು ಭಾರತೀಯ ಮಾರುಕಟ್ಟೆಗಳನ್ನು ನೇರವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ವಿಮಾನ ಯಾನ ಸೌಕರ್ಯವನ್ನು ನೀಡುವ ಬಗ್ಗೆ; ಹಾಗೂ ಭೂ ಮಾರ್ಗವಾಗಿ ಉಭಯ ದೇಶಗಳ ನಡುವೆ ಸಾಗಾಣಿಕೆಯಾಗುವ ಸರಕುಗಳ ತಪಾಸಣೆಗೆ ಎರಡೂ ದೇಶಗಳ ಗಡಿಗಳಲ್ಲಿ ಚೆಕ್‌ ಪೋಸ್ಟ್‌ ಸ್ಥಾಪಿಸಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; ಪುನೀತ್​​, 'ಕೆಜಿಎಫ್​' ನಿರ್ಮಾಪಕ ಸೇರಿ ಅನೇಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!ಈ ಯೋಜನೆಯಡಿ ಕಾಬೂಲ್‌ನಲ್ಲಿ ಉತ್ತಮ ಹೈಸ್ಕೂಲ್ ನಿರ್ಮಾಣ ಮತ್ತು ಪ್ರತಿ ವರ್ಷ 100 ಅಪ್ಘಾನ್ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಉದ್ದೇಶಿಸಲಾಗಿತ್ತು. 2015ರಲ್ಲಿ ಭಾರತದ ನೆರವಿನಡಿ ನಿರ್ಮಿಸಿದ ಅಪ್ಘಾನ್ ಪಾರ್ಲಿಮೆಂಟ್ ಕಟ್ಟಡ ಉದ್ಘಾಟಿಸುವ ವೇಳೆ ಮೋದಿ, "ಅಲ್ಲಿನ ಯುವಕರಿಗೆ ಅತ್ಯಾಧುನಿಕ ಶಿಕ್ಷಣ ಹಾಗೂ ವೃತ್ತಿಪರ ಕೌಶಲ್ಯ ಒದಗಿಸುವ ಮೂಲಕ ಸಬಲೀಕರಿಸಲು ಭಾರತ ನೆರವಾಗಲಿದೆ" ಎಂದು ಹೇಳಿದ್ದರು.

-------------
ಸಂಬಂಧಿಯಿಂದಲೇ ಶೂ ತರಿಸಿ ಹಾಕಿಸಿಕೊಂಡು ದರ್ಪ ತೋರಿದ ಸಚಿವ ತುಕಾರಾಂ
First published:January 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ