ಸಿರಿಯಾ ದಾಳಿ ಬಳಿಕ “ಗುರಿ ಸಾಧಿಸಿದ್ದೇವೆ” ಎಂದ  ಟ್ರಂಪ್​ ಟ್ವೀಟ್​ಗೆ ಟೀಕೆಗಳ ಸುರಿಮಳೆ  

news18
Updated:April 15, 2018, 9:59 AM IST
ಸಿರಿಯಾ ದಾಳಿ ಬಳಿಕ “ಗುರಿ ಸಾಧಿಸಿದ್ದೇವೆ” ಎಂದ  ಟ್ರಂಪ್​ ಟ್ವೀಟ್​ಗೆ ಟೀಕೆಗಳ ಸುರಿಮಳೆ  
news18
Updated: April 15, 2018, 9:59 AM IST
ನ್ಯೂಸ್​ 18 ಕನ್ನಡ

ಸಿರಿಯಾ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದ ಅಮೆರಿಕ ಅಧ್ಯಕ್ಷ ಡೋನಲ್ಟ್​ ಟ್ರಂಪ್​ ಈ ಯುದ್ಧದಲ್ಲಿ ಉತ್ತಮ ಫಲಿತಾಂಶ ಹೊಂದಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಅಮೆರಿಕ, ಫ್ರಾನ್ಸ್​ ಮತ್ತು ಬ್ರಿಟನ್​ ದಾಳಿ ನಡೆಸಿದ ಬಳಿಕ ಟ್ವೀಟ್​ ಮಾಡಿರುವ ಅವರು ಗುರಿ ಸಾಧಿಸಿದ್ದೇವೆ ಎಂದಿದ್ದಾರೆ.

ಅಮಾಯಕರ ಮೇಲೆ ದಾಳಿ ನಡೆಸಿದ ಸಿರಿಯಾ ಅಧ್ಯಕ್ಷ ಬಶರ್ ಅಲ್​ ಅಸದ್​ ಪ್ರತ್ಯುತ್ತರ ದಾಳಿ ನಡೆಸಿದ್ದು,ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹೊಡೆದುರುಳಿಸಿದ್ದೇವೆ.  ದಾಳಿಗೆ ಸಹಕರಿಸಿದ ಫ್ರಾನ್ಸ್​, ಬ್ರಿಟನ್​ಗೆ ಧನ್ಯವಾದ ಎಂದಿದ್ದಾರೆ.

  

ಡೋನಾಲ್ಡ್​ ಟ್ರಂಪ್​ ಟ್ವೀಟ್​ ಗಮನಿಸುತ್ತಿದ್ದ ಸಾಮಾಜಿಕ ಜಾಲತಾಣಿಗರು ಈ ಟ್ವೀಟ್​ನ್ನು ಅಮೇರಿಕದ ಮಾಜಿ ಅಧ್ಯಕ್ಷ ಜಾರ್ಜ್​ ಡಬ್ಲ್ಯೂ ಬುಶ್​​ರೊಂದಿಗೆ ಸಂಪರ್ಕ ಬೆಸೆದಿದ್ದಾರೆ.

2003ರಲ್ಲಿ ಇರಾಕ್​ ಮೇಲೆ ಯುದ್ಧ ಕಾರ್ಯಚಾರಣೆ ನಡೆಸಿದ ಬುಶ್​ ಸಮರ ಮುಗಿದ ಬಳಿಕ ಗುರಿ ಸಾಧಿಸಿದ್ದೇವೆ ಎಂದಿದ್ದರು.

ಈ ಟ್ವೀಟ್ ಸಾಮಾತ್ಯೆ ಕುರಿತು ಪ್ರತಿಕ್ರಿಯಿಸಿದರು  ಅಮೆರಿಕದ ಸೆನೆಟರ್​ ಬ್ರೈನ್​ ಸ್ಟಾಟ್ಸ್​ ‘ ಗುರಿ ಸಾಧಿಸಿದ್ದೇವೆ ಎಂಬ ಟ್ವೀಟ್ ಆಶ್ಚರ್ಯ ಮೂಡಿಸಿದೆ ಇದನ್ನು ನಾನು ಎರಡು ಬಾರಿ ಪರಿಶೀಲಿಸಿದೆ. ಇಬ್ಬರು ಅಧ್ಯಕ್ಷರ ಮಾತುಗಳಲ್ಲಿ ಸಾಮಾತ್ಯೆ ಇರುವುದು ಸುಳ್ಳಲ್ಲ ಎಂದರು.  

ವೈಟ್​ ಹೌಸ್​ ಪತ್ರಿಕಾ ಕಾರ್ಯದರ್ಶಿ ಕೂಡ ಪ್ರತಿಕ್ರಿಯಿಸಿದ್ದು, ಉಮ್ ... ನಾನು ಆ ಎರಡು ಪದಗಳಿಲ್ಲದೆ  ಟ್ವೀಟ್ ಅನ್ನು ಕೊನೆಗೊಳಿಸಲು ಶಿಫಾರಸ್ಸು ಮಾಡುತ್ತೇನೆ ಎಂದಿದ್ದಾರೆ.

  

ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಮೈಕ್​ ಲೆವಿನ್​ ಟ್ರಂಪ್​ ಅವರನ್ನು ಟೀಕಿಸಿದ್ದಾರೆ. ಆಗ ಬುಶ್​ ನಾವು ತಪ್ಪು ನಿರ್ಧಾರ ಮಾಡಿದ್ಧೆವು ಎನ್ನುತ್ತಾರೆ ಹೊರತು ನಮ್ಮದು ತಪ್ಪಾಯಿತು ಎಂದು ಹೇಳಿಲಿಲ್ಲ ಎಂದಿದ್ದಾರೆ. 

ಸ್ಟ್ರೀಮಿಂಗ್​ ನ್ಯೂಸ್ ನೆಟ್​ವರ್ಕ್​ ಚೆಡ್ಡರ್​ ಮುಖ್ಯಸ್ಥ ಜಿಮ್​ ರಾಜರ್ಟ್​ ಗುರಿ ಸಾಧಿಸಿದ್ದೇವೆ??? ಯಾರಿಗಾದರೂ ಈ  ವೈಟ್​ಹೌಸ್ ಇತಿಹಾಸ ಗೊತ್ತಿದ್ದೇಯೇ ಎಂದು ಪ್ರಶ್ನಿಸಿದ್ದಾರೆ. ​

 
First published:April 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...