ಕೇವಲ ಒಂದು ದಿನದಲ್ಲಿ 272,000 ಫಾಲೋವರ್ಸ್​ ಕಳೆದುಕೊಂಡ ಪ್ರಧಾನಿ ಮೋದಿ


Updated:July 13, 2018, 11:11 AM IST
ಕೇವಲ ಒಂದು ದಿನದಲ್ಲಿ  272,000 ಫಾಲೋವರ್ಸ್​ ಕಳೆದುಕೊಂಡ ಪ್ರಧಾನಿ ಮೋದಿ

Updated: July 13, 2018, 11:11 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಿಡಿದು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸೇರಿದಂತೆ ಅತ್ಯಂತ ಹೆಚ್ಚು ಫಾಲೋವರ್ಸ್​ ಹೊಂದಿರುವವರಿಗೆ ಸಾಮಾಜಿಕ ಜಾಲತಾಣ ಟ್ವಿಟರ್​ ಶಾಕ್​ ನೀಡಿದೆ.

ಹೌದು! ನಕಲಿ ಫಾಲೋವರ್ಸ್​ ಹಾಗು ನಕಲಿ ಸುದ್ಧಿ ಹರಡುವ ಖಾತೆಗಳ ವಿರುದ್ಧ ಟ್ವಿಟರ್​ ಹೋರಾಟ ನಡೆಸುತ್ತಿದ್ದ, ಪರಿಣಾಮ ಕೇವಲ ಒಂದೇ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ 272,000 ಫಾಲೋವರ್ಸ್​ ಕಳೆದುಕೊಂಡಿದ್ದಾರೆ. ಇವರಿಗಿಂತ ಒಂದು ಮುಂದೆ ಹೋಗಿರುವ ಅಮೆರಿಕ ಅಧ್ಯಕ್ಷ  100,000 ಫಾಲೋವರ್ಸ್​ಗಳ ಸಂಖ್ಯೆ ಇಳಿಮುಖವಾಗಿದೆ.

ಕಳೆದ ವರ್ಷ ಅಮೆರಿಕ ಚುನಾವಣೆ ಸಂದರ್ಭದಲ್ಲಿ ಹಲವಾರು ಫೇಸ್​ಬುಕ್​ ಹಾಗೂ ಟ್ವಿಟರ್​ ನಕಲಿ ಖಾತೆಗಳನ್ನು ಬಳಸಲಾಗಿತ್ತು, ಇದಕ್ಕೂ ಕೇಂಬ್ರಿಡ್ಜ್​ ಅನಾಲೆಟಿಕಾದೊಂದಿಗೆ ಫೇಸ್​ಬುಕ್​ ಸಂಪರ್ಕ ಹೊಂದಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಹೀಗಾಗಿ ಇಂತಹ ನಕಲಿ ಖಾತೆಗಳ ವಿರುದ್ಧ ಸಮರ ಸಾರಿರುವ ಫೇಸ್​ಬುಕ್​ ಹಾಗೂ ಟ್ವಿಟರ್​ ಸಂಸ್ಥೆಗಳು ತಮ್ಮಲ್ಲಿರುವ ನಕಲಿ ಖಾತೆಗಳನ್ನು ಸ್ಥಗಿತಗೊಳಸಲು ತೀರ್ಮಾನಿಸಿದ್ದಾರೆ.

ಇದರ ಮತ್ತೊಂದು ಹೆಜ್ಜೆಯಾಗಿ ಟ್ವಿಟರ್​ ಕೆಲದಿನಗಳ ಹಿಂದೆ ಸುಮಾರು 70 ಮಿಲಿಯನ್​ ನಕಲಿ ಟ್ವಿಟರ್​ ಖಾತೆಗಳನ್ನು ಸ್ಥಗಿತಗೊಳಿಸುರುವಾಗಿ ವಾಷಿಂಗ್ಟನ್​ ಪೋಸ್ಟ್​ ವರದಿ ಮಾಡಿತ್ತು. ಇದರ ಮುಂದಿನ ಹಂತವಾಗಿ ಹಲವಾರು ಫೇಮನಸ್​ ಸೆಲೆಬ್ರೆಟಿಗಳ ಫಾಲೋವರ್ಸ್​ಗಳ ಸಂಖ್ಯೆಯಲ್ಲಿ ಇಳಿತ ಕಾಣಿಸತೊಡಗಿದೆ.

ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಖಾತೆಯಲ್ಲಿ ಒಟ್ಟಾ 100,000 ಫಾಲೋವರ್ಸ್​ಗಳ ಸಂಖ್ಯೆ ಇಳಿಮುಖವಾಗಿದೆ. ಬೆಂಬಲವೆಂಬಂತೆ ಅಮೆರಿಕದ ಮಾಜಿ ಪ್ರಧಾನಿ ಬರಾಕ್​ ಒಬಾಮ ಅವರ ಖಾತೆಯಲ್ಲಿದ್ದ 400,000 ಮಂದಿ ಫಾಲೋವರ್ಸ್​ಗಳು ಕಾಣೆಯಾಗಿದ್ದಾರಂತೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್​ ಸೆಲೆಬ್ರೆಟಿ ಮಾತ್ರವಲ್ಲ ಶೇ.90ರಷ್ಟು ಟ್ವಿಟರ್​ ಬಳಕೇದಾರ ಖಾತೆಯಲ್ಲಿನ ಫಾಲೋವರ್ಸ್​ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೇಳಿದೆ.

ಟ್ವಿಟರ್​ನಲ್ಲಿ ಬರುತ್ತಿದ್ದಂತಹ ನಕಲಿ ಸುದ್ದಿ, ಮಾನಸಿಕ ಹಿಂಸೆ, ತೇಜೋವದೆ, ಖಾಸಾಗಿ ಮಾಹಿತಿ ರವಾನೆ, ಆನ್​ಲೈನ್​ ಕಿರುಕುಳದಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ