ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ; ಇಂದು ಸೆನೆಟ್​ನಲ್ಲಿ ವಿಚಾರಣೆಗೆ ಸಿದ್ಧತೆ

ಅಧಿಕಾರ ದುರುಪಯೋಗ ಮತ್ತು ಸಂಸತ್​ ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ  ಡೆಮಾಕ್ರಟಿಕ್ ಪಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ವಿಧಿಸಿತ್ತು. ಆದರೆ ಅಧ್ಯಕ್ಷ ಟ್ರಂಪ್ ಅವರ ಕಾನೂನು ತಂಡವು ಅಧ್ಯಕ್ಷರು ತಪ್ಪೇನೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದೆ.

news18-kannada
Updated:January 21, 2020, 2:53 PM IST
ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ; ಇಂದು ಸೆನೆಟ್​ನಲ್ಲಿ ವಿಚಾರಣೆಗೆ ಸಿದ್ಧತೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​
  • Share this:
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ದಾವೊಸ್​ನಲ್ಲಿ ಬಿಲಿಯನೇರ್​ಗಳನ್ನು ಉದ್ದೇಶಿಸಿ ಮಾತನಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಅಮೆರಿಕದ ಸೆನೆಟ್ (ಮೇಲ್ಮನೆ) ಟ್ರಂಪ್​ ವಿರುದ್ಧದ ವಾಗ್ದಂಡನೆ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಡೆಮಾಕ್ರಟಿಕ್ ಪಕ್ಷ ಆಗ್ರಹಿಸಿ, ವಾಗ್ದಂಡನೆ ವಿಧಿಸಿದೆ.

ಅಧಿಕಾರ ದುರುಪಯೋಗ ಮತ್ತು ಸಂಸತ್​ ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ  ಡೆಮಾಕ್ರಟಿಕ್ ಪಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ವಿಧಿಸಿತ್ತು. ಅಧ್ಯಕ್ಷ ಟ್ರಂಪ್ ಅವರ ಕಾನೂನು ತಂಡವು ಅಧ್ಯಕ್ಷರು ತಪ್ಪೇನೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ವಾಗ್ದಂಡನೆ ದುರ್ಬಲ ಮತ್ತು ಸಂವಿಧಾನದ ಅಪಾಯಕಾರಿ ಕೃತ್ಯ ಎಂದು ಪ್ರತಿಪಾದಿಸಿ, ಈ ವಾಗ್ದಂಡನೆ ತಿರಸ್ಕರಿಸುವಂತೆ ಒತ್ತಾಯಿಸಿದೆ. ಅಲ್ಲದೇ, ಡೆಮಾಕ್ರಟಿಕ್​ಗಳು ಒತ್ತಾಯಿಸುತ್ತಿರುವ ಸಾಕ್ಷ್ಯ ಅಥವಾ ಹೆಚ್ಚುವರಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಟ್ರಂಪ್ ಕಾನೂನು ತಂಡ ಸೋಮವಾರ ಸೆನೆಟ್​ ಮುಂದೆ ವಾದಿಸಿದೆ.

ಇದನ್ನು ಓದಿ: ಅಧಿಕಾರ ದುರುಪಯೋಗದ ಆರೋಪ; ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ವಾಗ್ದಂಡನೆ

ವಾಗ್ಡಂಡನೆ ವಿಚಾರವಾಗಿ ಇಂದು ಸೆನೆಟ್​ನಲ್ಲಿ ನಡೆಯುವ ವಿಚಾರಣೆ ಬಳಿಕ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ