ಪ್ರತಿಷ್ಠಿತ 2020 ನೋಬೆಲ್‌ ಶಾಂತಿ ಪ್ರಶಸ್ತಿಗೆ ನಾಮ ನಿರ್ದೆಶನಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

ಇಸ್ರೇಲ್​-ಯುಎಇ ಶಾಂತಿ ಒಪ್ಪಂದ ಪ್ರಕ್ರಿಯೆಯಲ್ಲಿ ಟ್ರಂಪ್ ಪಾತ್ರ ಪ್ರಮುಖವಾದುದಾಗಿದ್ದು, ಇದೇ ಕಾರಣಕ್ಕಾಗಿ ನೋಬೆಲ್‌ ಶಾಂತಿ ಒಪ್ಪಂದಕ್ಕೆ ಡೊನಾಲ್ಡ್‌ ಟ್ರಂಪ್ ಹೆಸರನ್ನು ನಾಮ ನಿರ್ದೇಶನ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಡೊನಾಲ್ಡ್‌ ಟ್ರಂಪ್‌.

ಡೊನಾಲ್ಡ್‌ ಟ್ರಂಪ್‌.

  • Share this:
ಒಸ್ಲೋ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು 2021ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ. ನಾರ್ವೇ ರಾಷ್ಟ್ರದ ಸಂಸತ್​ ಸದಸ್ಯ ಕ್ರಿಸ್ಟಿಯನ್​ ಟೈಬ್ರಿಗ್​-ಜೆಡ್ಡೆ ಅವರು ಈ ನಾಮನಿರ್ದೇಶನ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್​ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ ಶಾಂತಿ ಒಪ್ಪಂದ ಏರ್ಪಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನು ಗಮನದಲ್ಲಿರಿಸಿಕೊಂಡು ಜೆಡ್ಡೆ ಈ ನಾಮನಿರ್ದೇಶನ ಮಾಡಿದ್ದಾರೆ ಎಂದು ಡಿಡಬ್ಲ್ಯು ನ್ಯೂಸ್ ವರದಿ ಮಾಡಿದೆ. ಜೆಡ್ಡೆ ನಾರ್ವೇ ಸಂಸತ್ತಿನ ನಾಲ್ಕು ಅವಧಿಯ ಸದಸ್ಯರಾಗಿದ್ದು, ನ್ಯಾಟೋ ಪಾರ್ಲಿಮೆಂಟರಿ ಅಸೆಂಬ್ಲಿಯಲ್ಲಿ ನಾರ್ವೇಯನ್ ಡೆಲಿಗೇಶನ್​ನ ಮುಖ್ಯಸ್ಥರಾಗಿದ್ದಾರೆ. ಫಾಕ್ಸ್ ನ್ಯೂಸ್ ಜತೆಗೆ ಮಾತನಾಡುತ್ತ ಅವರು "ಇಸ್ರೇಲ್​-ಯುಎಇ ಶಾಂತಿ ಒಪ್ಪಂದ ಪ್ರಕ್ರಿಯೆಯಲ್ಲಿ ಟ್ರಂಪ್ ಪಾತ್ರ ಪ್ರಮುಖವಾದುದು" ಎಂದು ಅಭಿಪ್ರಾಯಪಟ್ಟಿದ್ದರು.

ಅಲ್ಲದೆ, "ಈ ಶಾಂತಿ ಪ್ರಶಸ್ತಿಯನ್ನು ಡೊನಾಲ್ಡ್‌ ಟ್ರಂಪ್ ಗೆದ್ದರೆ, ಅವರ ಹಿಂದಿನ ಮತ್ತು ರಾಜಕೀಯ ವೈರಿಯಾಗಿದ್ದ ಬರಾಕ್ ಒಬಾಮ ಅವರ ಹೆಜ್ಜೆಗಳನ್ನೇ ಅನುಸರಿಸುತ್ತಾರೆ. ಅಂತರರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಜನರ ನಡುವಿನ ಸಹಕಾರವನ್ನು ಬಲಪಡಿಸುವ ಅಸಾಧಾರಣ ಪ್ರಯತ್ನಗಳಿಗಾಗಿ ಮಾಜಿ ಅಮೆರಿಕ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ 2009 ರ ಶಾಂತಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು" ಎಂದು ಜೆಡ್ಡೆ ಅಭಿಪ್ರಾಯಪಟ್ಟಿದ್ದಾರೆ.

ನೋಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್ ಅವರ ನಾಮನಿರ್ದೇಶನವು ಯುಎಸ್ ಅಧ್ಯಕ್ಷೀಯ ಚುನಾವಣೆ ಮತ್ತು ಕೊರೋನಾ ವೈರಸ್ ಬಿಕ್ಕಟ್ಟ ಮತ್ತಷ್ಟು ಉಲ್ಭಣವಾಗುವ ಮುನ್ನವೇ ಘೋಷಿಸಲ್ಪಡುತ್ತದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕೊರೋನಾ ಸೋಂಕಿನಿಂದ ತೀವ್ರ ಹಾನಿಗೆ ಒಳಗಾದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ : ಇಂಡೋ-ಪೆಸಿಫಿಕ್‌ ಪ್ರದೇಶದ ಮೇಲೆ ಗಮನವಿರಿಸಿ ಭಾರತ, ಫ್ರಾನ್ಸ್‌ , ಆಸ್ಟ್ರೇಲಿಯಾ ಇಂದು ಮೊದಲ ಜಂಟಿ ಸಭೆ

ಇಸ್ರೇಲ್-ಯುಎಇ ಶಾಂತಿ ಒಪ್ಪಂದವನ್ನು ಆಗಸ್ಟ್ 13 ರಂದು ಶ್ವೇತಭವನವು 18 ತಿಂಗಳ ಮಾತುಕತೆಯ ನಂತರ ಘೋಷಿಸಿತು. ಈ ಒಪ್ಪಂದದೊಂದಿಗೆ, ಕೊಲ್ಲಿ ರಾಷ್ಟ್ರವು ಇಸ್ರೇಲ್‌ನೊಂದಿಗಿನ ಸಾಮಾನ್ಯ ಸಂಬಂಧವನ್ನು ಒಪ್ಪಿಕೊಂಡರೆ, ಇಸ್ರೇಲ್ ತನ್ನ ಪಶ್ಚಿಮ ದಂಡೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಸ್ಥಗಿತಗೊಳಿಸಿ ಶಾಂತಿಯಿಂದ ಮುಂದುವರಿಸಲು ಒಪ್ಪಿಕೊಂಡಿತು.

ಟ್ರಂಪ್ ಜನವರಿಯಲ್ಲಿ ಶಾಂತಿ ಒಪ್ಪಂದವನ್ನು ಪ್ರಸ್ತಾಪಿಸಿದರು. ಈ ಒಪ್ಪಂದದಲ್ಲಿ ಇಸ್ರೇಲಿಗರಿಗೆ ಹೆಚ್ಚು ಮಹತ್ವ ನೀಡಿದ್ದರೂ ಇದರಿಂದ ಯಾವುದೇ ಸಮಸ್ಯೆ ಉದ್ಭವವಾಗಿರಲಿಲ್ಲ. ಹೀಗಾಗಿ ಸೆಪ್ಟೆಂಬರ್ 15 ರಂದು ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಮಧ್ಯಪ್ರಾಚ್ಯ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭವನ್ನು ಡೊನಾಲ್ಡ್‌ ಟ್ರಂಪ್ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
Published by:MAshok Kumar
First published: