ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್​ ಬೋಲ್ಟನ್​ ಮೇಲೆ ಟ್ರಂಪ್ ಕೆಂಡಾಮಂಡಲ, ಮುಂದಿನ ವಾರ ಹೊಸ ಎನ್​ಎಸ್​ಎ ನೇಮಕ!

ರಾಜೀನಾಮೆ ವಿಚಾರವಾಗಿ ಜಾನ್​ ಬೋಲ್ಟರ್​ ಕೂಡ ವ್ಯತಿರಿಕ್ತವಾಗಿ ಟ್ವೀಟ್​ ಮಾಡಿದ್ದಾರೆ. ಕಳೆದ ರಾತ್ರಿ ನಾನು ರಾಜೀನಾಮೆ ನೀಡುವುದಾಗಿ ಹೇಳಿದೆ. ಹಾಗೂ ಈ ಬಗ್ಗೆ ಬೆಳಗ್ಗೆ ಮಾತನಾಡೋಣ ಎಂದು ಅಧ್ಯಕ್ಷ ಟ್ರಂಪ್​ ಅವರು ಹೇಳಿದರು ಎಂದು ಟ್ವೀಟ್ ಮಾಡಿದ್ದಾರೆ.

HR Ramesh | news18-kannada
Updated:September 11, 2019, 7:16 AM IST
ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್​ ಬೋಲ್ಟನ್​ ಮೇಲೆ ಟ್ರಂಪ್ ಕೆಂಡಾಮಂಡಲ, ಮುಂದಿನ ವಾರ ಹೊಸ ಎನ್​ಎಸ್​ಎ ನೇಮಕ!
ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಮತ್ತು ಜಾನ್​ ಬೋಲ್ಟನ್​
  • Share this:
ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಜಾನ್​ ಬೋಲ್ಟನ್​ ಅವರ  ಕಾರ್ಯವೈಖರಿಗೆ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಅವರು ಕೆಂಡಾಮಂಡಲರಾಗಿದ್ದಾರೆ.​

ಶ್ವೇತಭವನಕ್ಕೆ ನಿಮ್ಮ ಸೇವೆಯ ಅವಶ್ಯಕತೆ ಸಾಕು ಎಂದು ಕಳೆದ ರಾತ್ರಿ ಜಾನ್​ ಬೋಲ್ಟನ್​ ಅವರಿಗೆ ತಿಳಿಸಿದ್ದೇನೆ. ಆಡಳಿತದ ವಿಚಾರವಾಗಿ ಅವರ ಹಲವು ಸಲಹೆಗಳಿಗೆ ನಾನು ಬಲವಾಗಿ ಅಸಮ್ಮತಿ ಸೂಚಿಸಿದ್ದೇನೆ. ಮತ್ತು ರಾಜೀನಾಮೆ ನೀಡುವಂತೆ ಅವರಿಗೆ ಹೇಳಿದ್ದೆ. ಅದರಂತೆ ಇಂದು ಬೆಳಗ್ಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಟ್ರಂಪ್​ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ.

ಜಾನ್​ ಅವರ ಅಪಾರ ಸೇವೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿರುವ ಟ್ರಂಪ್​ ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರರ ಹೆಸರನ್ನು ಮುಂದಿನ ವಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಜಾನ್​ ಬೋಲ್ಟನ್​ ಅವರು ಟ್ರಂಪ್​ ಅವರ ಮೂರನೇ ರಾಷ್ಟ್ರೀಯ ಭದ್ರತಾ ಸಲಹೆಗಾರ. ಉತ್ತರ ಕೊರಿಯಾ ವಿಷಯವಾಗಿ ಅಧ್ಯಕ್ಷರ ಮೇಲೆ ಬಲವಾಗಿ ಒತ್ತಡ ತಂದ ವಿಚಾರ ಎಲ್ಲರಿಗೂ ತಿಳಿದಿದೆ. ಇರಾನ್​ ವಿಚಾರದಲ್ಲಿ ಟ್ರಂಪ್​ ಕಠಿಣ ನಿಲುವು ತೆಗೆದುಕೊಳ್ಳಲು ಬೋಲ್ಟನ್​ ಮುಖ್ಯ ರೂವಾರಿ. ರಷ್ಯಾ ಮತ್ತು ಅಫ್ಘಾನಿಸ್ತಾನ ವಿಚಾರದಲ್ಲೂ ಕಠಿಣ ನಿಲುವನ್ನು ಪ್ರತಿಪಾದಿಸಿದ್ದರು.
2018ರ ಏಪ್ರಿಲ್​ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಚ್​ಆರ್​ ಮ್ಯಾಕ್​ಮಾಸ್ಟರ್​ ಸ್ಥಾನಕ್ಕೆ ಜಾನ್​ ಬೋಲ್ಟನ್​ ಪದಾರ್ಪಣೆ ಮಾಡಿದರು. ಟ್ರಂಪ್​ ಅವರ ನಂಬಿಕಸ್ತರಲ್ಲಿ ಒಬ್ಬರಾಗಿರುವ ರಾಜಕೀಯ ಕಾರ್ಯದರ್ಶಿ ಮೈಕ್ ಪೊಂಪೆ ಅವರೊಂದಿಗೆ ಬೋಲ್ಟನ್​ ಕೆಲ ಸಮಯ ಭಿನ್ನಾಭಿಪ್ರಾಯ ಹೊಂದಿದ್ದರು.


ರಾಜೀನಾಮೆ ವಿಚಾರವಾಗಿ ಜಾನ್​ ಬೋಲ್ಟರ್​ ಕೂಡ ವ್ಯತಿರಿಕ್ತವಾಗಿ ಟ್ವೀಟ್​ ಮಾಡಿದ್ದಾರೆ. ಕಳೆದ ರಾತ್ರಿ ನಾನು ರಾಜೀನಾಮೆ ನೀಡುವುದಾಗಿ ಹೇಳಿದೆ. ಹಾಗೂ ಈ ಬಗ್ಗೆ ಬೆಳಗ್ಗೆ ಮಾತನಾಡೋಣ ಎಂದು ಅಧ್ಯಕ್ಷ ಟ್ರಂಪ್​ ಅವರು ಹೇಳಿದರು ಎಂದು ಟ್ವೀಟ್ ಮಾಡಿದ್ದಾರೆ.First published: September 11, 2019, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading