ಈ ಮೋಸದ ಚುನಾವಣೆಯನ್ನು ಜನ ಒಪ್ಪಲ್ಲ ನಾವೇ ಗೆಲ್ಲುತ್ತೇವೆ; ಇನ್ನೂ ಸೋಲೊಪ್ಪದ ಡೊನಾಲ್ಡ್ ಟ್ರಂಪ್
ಇತ್ತೀಚೆಗೆ ಮುಕ್ತಾಯವಾಗಿದ್ದ ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಅವರ ಪರವಾಗಿ 7,45,75,812 ಮತಗಳು ಚಲಾವಣೆಯಾಗಿದ್ದರೆ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಪರವಾಗಿ 7,03,99,780 ಮತಗಳು ಚಲಾವಣೆಯಾಗಿದ್ದವು. ಈ ಮೂಲಕ ಜೋ ಬಿಡೆನ್ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗಿತ್ತು.
ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತ್ಯವಾಗಿದ್ದು, ಮತ ಎಣಿಕೆಯೂ ಮುಗಿದಿದೆ. ಡೆಮಾಕ್ರಟಿಕ್ ಪಕ್ಷ ಜೋ ಬಿಡೆನ್ ಈಗಾಗಲೇ ಗೆಲುವು ಸಾಧಿಸಿದ್ದಾರೆ. ಅವರ ಅಧ್ಯಕ್ಷೀಯ ಪದಗ್ರಹಣಕ್ಕಾಗಿ ಇಡೀ ಅಮೆರಿಕ ಕಾಯುತ್ತಿದೆ. ಆದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲನುಭವಿಸಿರುವ ಡೊನಾಲ್ಡ್ ಟ್ರಂಪ್ ಈಗಲೂ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಮುಂದಾಗಿಲ್ಲ.ಇದಕ್ಕೆ ಅವರ ಮತ್ತೊಂದು ಟ್ವೀಟ್ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಟ್ವೀಟ್ ಮಾಡುತ್ತಾ ಯಾವಾಗಲೂ ಸುದ್ದಿಯಲ್ಲಿರುವ ಟ್ರಂಪ್ ಇಂದು ಮತ್ತೊಂದು ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. "ನಾವು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ" ಎಂದು ಅವರು ಇಂದು ಮತ್ತೆ ಟ್ವೀಟ್ ಮಾಡಿರುವುದು ಹಲವರನ್ನು ಆಶ್ಚರ್ಯಕ್ಕೊಳಪಡಿಸಿದೆ. ಅಲ್ಲದೆ, ಟ್ರಂಪ್ ಈಗಲೂ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ ಎಂಬ ಅವರ ಮನಸ್ಥಿತಿಯನ್ನು ಸಾರಿ ಹೇಳುವಂತಿದೆ.
ಈ ಕುರಿತು ಇಂದು ಮತ್ತೆ ಸರಣಿ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, "ನಾವು ದೊಡ್ಡ ಗೆಲುವು ಸಾಧಿಸುತ್ತೇವೆ. ಈ ಮೋಸದ ಚುನಾವಣೆಯನ್ನು ಜನ ಒಪ್ಪುವುದಿಲ್ಲ. ಹೀಗಾಗಿ ನಾವೇ ಗೆಲುವು ಸಾಧಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ಡೊನಾಲ್ಡ್ ಟ್ರಂಪ್ ಈ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಅವರನ್ನು ಮತ್ತೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಚುನಾವಣೆ ಮುಗಿದು ಫಲಿತಾಂಶ ಹೊರ ಬಂದಿದೆ. ನೀವು ಸೋಲನುಭವಿಸಿದ್ದೀರಿ. ಮೊದಲು ಈ ಸೋಲನ್ನು ಒಪ್ಪಿಕೊಳ್ಳಿ ಎಂದು ಕಿವಿ ಮಾತು ಹೇಳಿದ್ದಾರೆ. ಮತ್ತೂ ಕೆಲವರು ಡೊನಾಲ್ಡ್ ಟ್ರಂಪ್ ಸೋಲನ್ನು ಅಪಹಾಸ್ಯ ಮಾಡುವ ಮೂಲಕ ಅವರ ಕಾಲೆಳೆಯಲು ಮುಂದಾಗಿದ್ದಾರೆ.
ಇತ್ತೀಚೆಗೆ ಮುಕ್ತಾಯವಾಗಿದ್ದ ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಅವರ ಪರವಾಗಿ 7,45,75,812 ಮತಗಳು ಚಲಾವಣೆಯಾಗಿದ್ದರೆ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಪರವಾಗಿ 7,03,99,780 ಮತಗಳು ಚಲಾವಣೆಯಾಗಿದ್ದವು. ಈ ಮೂಲಕ ಜೋ ಬಿಡೆನ್ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗಿತ್ತು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ