HOME » NEWS » National-international » DONALD TRUMP AT AHMEDABAD AMERICA PRESIDENT DONALD TRUMP AND MELANIA TRUMP WRITE IN VISITORS BOOK AT THE GUJARAT SABARMATI ASHRAM ON NARENDRA MODI SCT

Trump in India 2020: ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್ ದಂಪತಿ; ಮೋದಿಗೆ ಥ್ಯಾಂಕ್ಸ್ ಎಂದ ಅಮೆರಿಕ ಅಧ್ಯಕ್ಷ

ಸುಮಾರು 20 ನಿಮಿಷಗಳನ್ನು ಸಬರಮತಿ ಆಶ್ರಮದಲ್ಲಿ ಕಳೆದ ಡೊನಾಲ್ಡ್​ ಟ್ರಂಪ್ ದಂಪತಿ ಅಲ್ಲಿಂದ ವಾಪಾಸಾಗುವಾಗ ಪ್ರವಾಸಿಗರ ಪುಸ್ತಕದಲ್ಲಿ ತಮ್ಮ ಅನುಭವವನ್ನು ಬರೆದು, ಸಹಿ ಮಾಡಿದ್ದಾರೆ.

Sushma Chakre | news18-kannada
Updated:February 24, 2020, 1:24 PM IST
Trump in India 2020: ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್ ದಂಪತಿ; ಮೋದಿಗೆ ಥ್ಯಾಂಕ್ಸ್ ಎಂದ ಅಮೆರಿಕ ಅಧ್ಯಕ್ಷ
ಸಬರಮತಿ ಆಶ್ರಮದ ಪ್ರವಾಸಿಗರ ಪುಸ್ತಕದಲ್ಲಿ ಸಹಿ ಹಾಕುತ್ತಿರುವ ಡೊನಾಲ್ಡ್​ ಟ್ರಂಪ್
  • Share this:
ಅಹಮದಾಬಾದ್ (ಫೆ. 24): ಎರಡು ದಿನಗಳ ಪ್ರವಾಸಕ್ಕಾಗಿ ಕುಟುಂಬಸಮೇತರಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇಂದು ಗುಜರಾತ್​ನಲ್ಲಿರುವ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಈ ಅದ್ಭುತ ಅವಕಾಶ ಒದಗಿಸಿದ್ದಕ್ಕಾಗಿ ತಮ್ಮ ಪ್ರೀತಿಯ ಗೆಳೆಯ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅಹಮದಾಬಾದ್​ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮಕ್ಕೆ ತೆರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಬರಮತಿ ಆಶ್ರಮದ ಹಿನ್ನೆಲೆಯಲ್ಲಿ ಪರಿಚಯಿಸಿದರು. ಸಬರಮತಿ ಆಶ್ರಮದೊಳಗೆ ತೆರಳುವ ಮುನ್ನ ಟ್ರಂಪ್ ದಂಪತಿ ಶೂ ಕಳಚಿಟ್ಟು ಒಳಗೆ ತೆರಳಿದರು. ಗಾಂಧೀಜಿ ಬಳಸುತ್ತಿದ್ದ ಚರಕದ ಮಹತ್ವವನ್ನು ಡೊನಾಲ್ಡ್ ಟ್ರಂಪ್ ಮತ್ತು ಮೆಲೆನಿಯಾ ಟ್ರಂಪ್​ಗೆ ವಿವರಿಸಿದ ಪ್ರಧಾನಿ ಮೋದಿ ಗಾಂಧೀಜಿ ತತ್ವಗಳ ಬಗ್ಗೆ ತಿಳಿಸಿದರು.




ಇದನ್ನೂ ಓದಿ: Donald Trump India Visit Live: ಮೊಟೆರಾ ಸ್ಟೇಡಿಯಂನತ್ತ ಪ್ರಧಾನಿ ಮೋದಿ-ಡೊನಾಲ್ಡ್​ ಟ್ರಂಪ್​ಸುಮಾರು 20 ನಿಮಿಷಗಳನ್ನು ಸಬರಮತಿ ಆಶ್ರಮದಲ್ಲಿ ಕಳೆದ ಡೊನಾಲ್ಡ್​ ಟ್ರಂಪ್ ದಂಪತಿ ಅಲ್ಲಿಂದ ವಾಪಾಸಾಗುವಾಗ ಪ್ರವಾಸಿಗರ ಪುಸ್ತಕದಲ್ಲಿ ತಮ್ಮ ಅನುಭವವನ್ನು ಬರೆದು, ಸಹಿ ಮಾಡಿದ್ದಾರೆ. 'ಈ ಅದ್ಭುತ ಸ್ಥಳಕ್ಕೆ ಆಹ್ವಾನಿಸಿದ ನನ್ನ ಪ್ರೀತಿಯ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು' ಎಂದು ಬರೆದು ಟ್ರಂಪ್ ದಂಪತಿ ಸಹಿ ಹಾಕಿದ್ದಾರೆ.

ಅದಾದ ನಂತರ ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಗಾಂಧೀಜಿಯವರ ತತ್ವ ಸಂದೇಶ ಸಾರುವ ಮೂರು ಕೋತಿಗಳ ಮೆಮೆಂಟೊ ಗಿಫ್ಟ್​ ಮಾಡಿದರು. ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನುಡಿಯಬೇಡ, ಕೆಟ್ಟದ್ದನ್ನು ನೋಡಬೇಡ ಎಂಬ ಗಾಂಧಿ ತತ್ವಗಳನ್ನು ಟ್ರಂಪ್​ ಅವರಿಗೆ ಮೋದಿ ವಿವರಿಸಿದರು.
First published: February 24, 2020, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories