Seema.RSeema.R
|
news18-kannada Updated:February 24, 2020, 6:02 PM IST
ತಾಜ್ ಮಹಲ್ ಮುಂದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದಂಪತಿ
ನವದೆಹಲಿ (ಫೆ.24): ಜಗತ್ತಿನ ಏಳು ಅದ್ಭುತಗಳಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ಮಹಲ್ ಕೂಡ ಒಂದು. ಪ್ರೀತಿಯ ಸಂಕೇತವಾದ ಈ ತಾಜ್ಮಹಲ್ ಸೌಂದರ್ಯವನ್ನು ಇದೇ ಮೊದಲ ಬಾರಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕುಟುಂಬ ಸಮೇತರಾಗಿ ಕಣ್ತುಂಬಿಕೊಂಡರು.
ಅಮೆರಿಕ ಮೊದಲ ಮಹಿಳೆಯಾದ ಮೆಲಾನಿಯಾ ಟ್ರಂಪ್ ಕೈ ಹಿಡಿದು ಅಮೆರಿಕ ಅಧ್ಯಕ್ಷ ಪ್ರೀತಿ ಸೌಧದ ವೀಕ್ಷಣೆ ಮಾಡಿದರು. ಬೆಳಗ್ಗೆ ಅಹ್ಮದಾಬಾದ್ಗೆ ಬಂದ ನಂತರ 22 ಕಿಲೋಮೀಟರ್ ಉದ್ದದ ಮೆರವಣಿಗೆಯಲ್ಲಿ ಗಾಂಧೀಜಿಯವರ ಸಬರಮತಿ ಆಶ್ರಮಕ್ಕೆ ತೆರಳಿದ ಟ್ರಂಪ್ ನಂತರ ಮೊಂಟೆರಾ ಮೈದಾನಕ್ಕೆ ಪ್ರಧಾನಿ ಮೋದಿ ಜತೆ ತೆರಳಿದ ಅವರು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ್ದರು.
ತಾಜ್ ಮಹಲ್ ಭೇಟಿಗೆ ಮಗಳು ಇವಾಂಕಾ ಟ್ರಂಪ್ ಹಾಗೂ ಅಳಿಯ ಜಾರೆಡ್ ಕುಶ್ನರ್ ಕೂಡ ಸಾಥ್ ನೀಡಿದರು.
ಈ ವೇಳೆ ತಾಜ್ ಮಹಲ್ ಕುರಿತಾಗಿ ಅಲ್ಲಿನ ವಿಸಿಟರ್ ಬುಕ್ನಲ್ಲಿ ಬರೆದ ಟ್ರಂಪ್, 'ತಾಜ್ ಮಹಲ್ ವಿಸ್ಮಯ ಪ್ರೇರಣೆ ನೀಡುವಂತಹದ್ದು. ತಾಜ್ ಮಹಲ್ ಭಾರತದ ಸಾಂಸ್ಕೃತಿಕ ಶ್ರೀಮಂತತೆಯ ನಿದರ್ಶನ ಮತ್ತು ವೈವಿಧ್ಯತೆಯ ಮಾಸದ ಸೌಂದರ್ಯದ ಪ್ರತೀಕ' ಎಂದು ವಿಸಿಟರ್ಸ್ ಪುಸ್ತಕದಲ್ಲಿ ಬರೆದಿದ್ದಾರೆ.
ಇದಾದ ಬಳಿಕ ಅವರು ತಾಜ್ಮಹಲ್ ಮ್ಯೂಸಿಯಂಗೂ ಭೇಟಿ ನೀಡಿ ಅಲ್ಲಿ ವೀಕ್ಷಣೆ ನಡೆಸಿದರು.
ಇದನ್ನು ಓದಿ: Namaste Trump: 300 ವರ್ಷದಲ್ಲಿ ಇದೇ ಮೊದಲ ಬಾರಿ ಸ್ವಚ್ಛಗೊಂಡ ತಾಜ್ಮಹಲ್ ಸಮಾಧಿಗಳು
ಇದೇ ವೇಳೆ ತಮ್ಮ ಪತ್ನಿ ಮಲಾನಿಯಾ ಜೊತೆ ತಾಜ್ಮಹಲ್ ಮುಂದೆ ಟ್ರಂಪ್ ಫೋಟೊಗೆ ಫೋಸ್ ಕೂಡ ನೀಡಿದರು.
First published:
February 24, 2020, 6:02 PM IST