Hijab Controversy: ಹಿಜಾಬ್, ಕೇಸರಿಗಾಗಿ ಹೊಡೆದಾಡಬೇಡಿ, ನೋಡಲು ನೋವಾಗುತ್ತೆ: ಯೋಧನ ಲಾಸ್ಟ್ ಮೆಸೇಜ್

ಹಿಜಾಬ್ ಮತ್ತು ಕೇಸರಿ ಬಗ್ಗೆ ಜಗಳವಾಡಬೇಡಿ. ಅಂತಹ ವಿಷಯಗಳನ್ನು ನೋಡಿದಾಗ ನಮಗೆ ನೋವಾಗುತ್ತದೆ. ಹವಾಲ್ದಾರ್ ಅಲ್ತಾಫ್ ಅಹ್ಮದ್ (37) ಅವರು ಬುಧವಾರ ಕಾಶ್ಮೀರದಲ್ಲಿ ಹಿಮಪಾತದಲ್ಲಿ ಸಾಯುವ ಮೊದಲು ಅವರು ಕಳುಹಿಸಿದ ಕೊನೆಯ ಧ್ವನಿ ಸಂದೇಶಗಳಲ್ಲಿ ಈ ಮನ ಕರಗಿಸುವ ಮಾತುಗಳು ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯಾದ್ಯಂತ ಹಿಜಾಬ್ ವಿವಾದ (Hijab Controversy) ಹೊತ್ತಿ ಉರಿಯುತ್ತಿದೆ. ಕರ್ನಾಟಕದ ಈ ಹಿಜಾಬ್ ವಿವಾದ ಈಗ ರಾಷ್ಟ್ರಾದ್ಯಂತ ಸುದ್ದಿ ಮಾಡುತ್ತಿದೆ. ತರಗತಿಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ (Hijab) ಧರಿಸಬಾರದು ಎಂದು ಶುರುವಾದ ವಿವಾದ ಈಗ ಮತ್ತೊಂದು ಹಂತಕ್ಕೆ ಬಂದು ನಿಂತಿದೆ. ಜನ ಇದೇ ವಿಚಾರವಾಗಿ ಹೊಡೆದಾಡಿಕೊಂಡು, ಪರಸ್ಪರ ನಿಂದಿಸಿಕೊಂಡು ಕಚ್ಚಾಡುತ್ತಿದ್ದಾರೆ. ಶಾಲಾ ಕಾಲೇಜಿನಲ್ಲಿ ಸೌಹಾರ್ದತೆಯ ಬದಲಾಗಿ ವೈಷಮ್ಯ ಹೆಚ್ಚಾಗಿದೆ. ಇದೆಲ್ಲವೂ ಶುರುವಾಗಿದ್ದು ಹಿಜಾಬ್ ವಿವಾದದಿಂದ. ಇದೀಗ ಈ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಚಾರ ಗಡಿಯಲ್ಲಿ ದೇಶ ಕಾಯುವ ನಮ್ಮ ಯೋಧರ ಕಿವಿಗೂ ತಲುಪಿದೆ. ಅಲ್ಲಿ ಜಾತಿ ಧರ್ಮವಿಲ್ಲದೆ (Religion) ದೇಶದ ಗಡಿಯನ್ನು (Border) ಕಾಯುವ ಯೋಧರ ಕಿವಿಗೆ ಈ ಹಿಜಾಬ್, ಕೇಸರಿ ಶಾಲಿನ ಗಲಾಟೆ ಕೇಳಿದರೆ ಏನನಿಸಬಹುದು ? ಯಾವಾಗ ಎತ್ತಲಿಂದ ಗುಂಡು ಬಿದ್ದು ಸಾಯುತ್ತೇವೇ ಎನ್ನುವ ಆತಂಕದಲ್ಲಿರುವವರಿಗೆ ಧರ್ಮಕ್ಕಾಗಿ ಕೊಲೆ (Murder) ನಡೆಯುವ ವಿಚಾರ ತಿಳಿದರೆ ಅವರ ಪ್ರತಿಕ್ರಿಯೆ ಏನಿರಬಹುದು ? ಗಡಿಯ ಯೋಧರೊಬ್ಬರ ಲಾಸ್ಟ್ ಮೆಸೇಜ್ ಈಗ ಎಲ್ಲೆಡೆ ವೈರಲ್ (Viral) ಆಗುತ್ತಿದೆ. 

ಯೋಧರೊಬ್ಬರು ನೋವಿನಿಂದ ಮನನೊಂದು ಹೇಳಿದ ಅರ್ಥಪೂರ್ಣ ಮಾತುಗಳು ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ. ಸಮಾನ್ಯರಿಗೂ ಅರ್ಥವಾಗುವಂತೆ ಇವರು ಹೇಳಿದ ಸಿಂಪಲ್ ಮಾತುಗಳು ಧರ್ಮಾಂಧತೆಯಲ್ಲಿ ಮುಳುಗಿ ಕಿವುಡಾದರವಿಗೆ ತಿಳಿದರೂ ಅವರಿಗೆ ಅರ್ಥವಾಗುವುದು ಕಷ್ಟ. ಅರ್ಥವಾದರೆ ಸಾರ್ಥಕ.

ಹಿಮಪಾತದಲ್ಲಿ ಸಾಯುವ ಮುನ್ನ ಹೇಳಿದ ಮಾತು..!

ಹಿಜಾಬ್ ಮತ್ತು ಕೇಸರಿ ಬಗ್ಗೆ ಜಗಳವಾಡಬೇಡಿ. ಅಂತಹ ವಿಷಯಗಳನ್ನು ನೋಡಿದಾಗ ನಮಗೆ ನೋವಾಗುತ್ತದೆ. ಹವಾಲ್ದಾರ್ ಅಲ್ತಾಫ್ ಅಹ್ಮದ್ (37) ಅವರು ಬುಧವಾರ ಕಾಶ್ಮೀರದಲ್ಲಿ ಹಿಮಪಾತದಲ್ಲಿ ಸಾಯುವ ಮೊದಲು ಅವರು ಕಳುಹಿಸಿದ ಕೊನೆಯ ಧ್ವನಿ ಸಂದೇಶಗಳಲ್ಲಿ ಈ ಮನ ಕರಗಿಸುವ ಮಾತುಗಳು ದಾಖಲಾಗಿದೆ.

ಮಾಧ್ಯಮದೊಂದಿಗೆ ಹಂಚಿಕೊಂಡ ಮಾತು

ಅವರ ಸ್ನೇಹಿತರು ಮಾಧ್ಯಮಗಳೊಂದಿಗೆ ಹಂಚಿಕೊಂಡ ಧ್ವನಿಯಲ್ಲಿ ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡುವಂತೆ ಜನರನ್ನು ಕೇಳಿಕೊಳ್ಳುವುದನ್ನು ಕೇಳಬಹುದು. "ಚೆನ್ನಾಗಿರಿ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜಗಳವಾಡಬೇಡಿ. ನಮ್ಮ ಸೈನಿಕರು ಇಲ್ಲಿ (ಕಾಶ್ಮೀರ) ಸೇವೆ ಸಲ್ಲಿಸುತ್ತಿದ್ದಾರೆ. ನೀವು ಚೆನ್ನಾಗಿ ಮತ್ತು ಸುರಕ್ಷಿತವಾಗಿರಲು ತಮ್ಮ ಪ್ರಾಣವನ್ನು ನೀಡುತ್ತಿದ್ದಾರೆ. ರಾಷ್ಟ್ರದ ಬಗ್ಗೆ ಯೋಚಿಸಿ ಮತ್ತು ನಿಮ್ಮ ಮಕ್ಕಳಿಗೂ ಅದನ್ನು ಮಾಡಲು ಕಲಿಸಿ ಎಂದು ಅವರು ವಾಯ್ಸ್​ನೋಟ್​ನಲ್ಲಿ ಹೇಳಿದ್ದಾರೆ.

ನಮ್ಮ ತ್ಯಾಗ ವ್ಯರ್ಥ ಮಾಡಬೇಡಿ

“ಹಿಜಾಬ್ ಮತ್ತು ಕೇಸರಿ ಬಗ್ಗೆ ಜಗಳವಾಡಬೇಡಿ. ಇಂತಹ ವಿಷಯಗಳನ್ನು ನೋಡಿದಾಗ ನಮಗೆ ನೋವಾಗುತ್ತದೆ. ಇಲ್ಲಿ ನಮ್ಮ ಕರ್ತವ್ಯವನ್ನು ಮಾಡುತ್ತಿರುವಾಗ, ದೇಶದ ಜನರು ಒಳ್ಳೆಯವರು ಎಂದು ನಾವು ನಂಬುತ್ತೇವೆ. ನಾವೆಲ್ಲರೂ ಭಾರತ ತಾಯಿಯ ಮಕ್ಕಳು ಎಂದು ನಂಬುತ್ತೇವೆ. ನಮ್ಮ ತ್ಯಾಗವನ್ನು ವ್ಯರ್ಥ ಮಾಡಬೇಡಿ. ದಯವಿಟ್ಟು. ನಾವು ಅಂತಹ ವಿಷಯಗಳನ್ನು ಹಿಜಾಬ್ ವಿವಾದ ಕೇಳಿದಾಗ ನಮಗೆ ಬೇಸರವಾಗುತ್ತದೆ. ಏಕೆಂದರೆ ಗಡಿಯಲ್ಲಿ ನಮ್ಮ ಕಣ್ಣ ಮುಂದೆ ಅನೇಕರು ಸಾಯುತ್ತಿದ್ದಾರೆ, ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Punjabನಲ್ಲಿ ನಿಪ್ಪಾಣಿಯ ಯೋಧ ಹೃದಯಾಘಾತದಿಂದ ಸಾವು; ಮಡುಗಟ್ಟಿದ ಶೋಕ

ಕೊಡಗಿನ ಯೋಧನ ಮನಸಿನ ಮಾತು

ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್‌ನ ಭಾಗವಾಗಿರುವ ಕೊಡಗಿನ ಯೋಧ ಅಹ್ಮದ್ ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದಾರೆ. ಅವರು ತಮ್ಮ ತಾಯಿ, ಹೆಂಡತಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ವಿರಾಜಪೇಟೆಯ ಯಡಪಾಲ ಮೂಲದ ಅಲ್ತಾಫ್ ಅವರ ಪತ್ನಿ ಜುಬೇರಿ 10 ವರ್ಷಗಳಿಂದ ಕೇರಳದ ಮಾಟನೂರಿನಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಟಾರ್ಗೆಟ್ ಆಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದು ಏನು?

19 ವರ್ಷಗಳಿಂದ ಸೇನೆಯಲ್ಲಿ ಸೇವೆ

ಮೀನುಪೇಟೆಯಲ್ಲಿ ಬೆಳೆದ ಅಲ್ತಾಫ್, ವಿರಾಜಪೇಟೆಯ ಸೇಂಟ್ ಆನ್ಸ್ ಶಾಲೆಯಲ್ಲಿ 10 ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿದರು.  ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪೂರ್ಣಗೊಳಿಸಿದರು. ಇದರ ನಂತರ, ಅವರು ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ರೆಜಿಮೆಂಟ್‌ಗೆ ಸೇರಿದರು ಮತ್ತು 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
Published by:Divya D
First published: