• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Punjab Woman Suicide: ಅಮೆರಿಕದಲ್ಲಿ ಗಂಡನ ಚಿತ್ರಹಿಂಸೆ ತಾಳಲಾರದೆ ವಿಡಿಯೋ ಮಾಡಿ ಪಂಜಾಬಿ ಮಹಿಳೆ ಆತ್ಮಹತ್ಯೆ

Punjab Woman Suicide: ಅಮೆರಿಕದಲ್ಲಿ ಗಂಡನ ಚಿತ್ರಹಿಂಸೆ ತಾಳಲಾರದೆ ವಿಡಿಯೋ ಮಾಡಿ ಪಂಜಾಬಿ ಮಹಿಳೆ ಆತ್ಮಹತ್ಯೆ

ಪತಿಯ ಜೊತೆ ಮನದೀಪ್​ ಕೌರ್​

ಪತಿಯ ಜೊತೆ ಮನದೀಪ್​ ಕೌರ್​

ವೀಡಿಯೋದಲ್ಲಿ ಕೌರ್,  ತಾನು ಹಲವಾರು ವರ್ಷಗಳಿಂದ ಗಂಡನ ಹೊಡೆತಗಳನ್ನು ಸಹಿಸಿಕೊಂಡಿದ್ದೇನೆ. ಇನ್ನು ಮುಂದೆ ನನಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಕೆಯ ಪತಿ ರಂಜೋಧಬೀರ್ ಸಿಂಗ್ ಸಂಧು ಟ್ರಕ್ ಚಾಲಕ.

 • News18 Kannada
 • 2-MIN READ
 • Last Updated :
 • Punjab
 • Share this:

ನ್ಯೂಯಾರ್ಕ್​​: 30 ವರ್ಷದ ಪಂಜಾಬಿ ಮಹಿಳೆಯೊಬ್ಬರು (Punjab Woman) ಶನಿವಾರ ತನ್ನ ಪತಿಯ ಕೌಟುಂಬಿಕ ದೌರ್ಜನ್ಯದಿಂದ (Domestic Violence) ಬೇಸತ್ತು ಯುಎಸ್ಎಯ ನ್ಯೂಯಾರ್ಕ್‌ನಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಂದೀಪ್ ಕೌರ್ (#JusticeforMandeep) ಆತ್ಮಹತ್ಯೆಗೂ ಮೊದಲು ಹಲವು ವರ್ಷಗಳಿಂದ ಗಂಡನಿಂದ ಅನುಭವಿಸಿದ ದೈಹಿಕ ಚಿಂತೆ, ಮಾನಸಿಕ ಹಿಂದೆ ಬಗ್ಗೆ ಹೇಳಿದ್ದಾನೆ. ತನ್ನ ದುಸ್ಥಿತಿಯ ಬಗ್ಗೆ, ಗಂಡನ ಕ್ರೌರ್ಯದ ಬಗ್ಗೆ ಎಳೆಎಳೆಯಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಚಿತ್ರೀಕರಿಸಿದ ಬಳಿಕ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಗಂಡನ ಹೊಡೆತಗಳನ್ನು ಸಹಿಸಲು ಆಗುತ್ತಿಲ್ಲ


ವೀಡಿಯೋದಲ್ಲಿ ಕೌರ್,  ತಾನು ಹಲವಾರು ವರ್ಷಗಳಿಂದ ಗಂಡನ ಹೊಡೆತಗಳನ್ನು ಸಹಿಸಿಕೊಂಡಿದ್ದೇನೆ. ಇನ್ನು ಮುಂದೆ ನನಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಕೆಯ ಪತಿ ರಂಜೋಧಬೀರ್ ಸಿಂಗ್ ಸಂಧು ಟ್ರಕ್ ಚಾಲಕ. ನಾನು ತುಂಬಾ ದಯನೀಯ ಸ್ಥಿತಿಯಲ್ಲಿದ್ದೇನೆ. ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ ಆದರೆ ಈಗ ನಿತ್ಯ ಹೊಡೆತಗಳನ್ನು ಸಹಿಸಲಾಗುತ್ತಿಲ್ಲ. ಎಂಟು ವರ್ಷಗಳಿಂದ, ನಾನು ಪ್ರತಿದಿನ ಹೊಡೆತಗಳನ್ನು ಅನುಭವಿಸುತ್ತಿದ್ದೇನೆ. ಗಂಡನ ಒಂದಲ್ಲ ಒಂದು ದಿನ ಬದಲಾಗುತ್ತಾನೆ ಎಂಬ ಭರವಸೆಯಿಂದ ಅವನ ಕೆಟ್ಟ ನಡವಳಿಕೆಯನ್ನು ಸಹಿಸಿಕೊಂಡಿದ್ದೆ. ಆದರೆ ನನ್ನ ನಂಬಿಕೆ ಸುಳ್ಳಾಯಿತು ಎಂದು ಕಣ್ಣೀರಿಟ್ಟಿದ್ದಾರೆ.


ಗಂಡು ಮಗು ಆಗಲಿಲ್ಲ ಎಂದು ಟಾರ್ಚರ್​


ಕೌರ್ 4 ಮತ್ತು 2 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಪಂಜಾಬಿ ಭಾಷೆಯಲ್ಲಿ ಮಾತನಾಡಿರುವ ಅವರು, ತಮ್ಮ ಪತಿ ಮತ್ತು ಅತ್ತೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಗಂಡನಿಗೆ ಗಂಡು ಮಗುವನ್ನು ಹೆರಲಿಲ್ಲ ಎಂದು ತನ್ನ ಮೇಲೆ ಸಿಟ್ಟಾಗಿದ್ದಾನೆ ಎಂದೂ ಕೌರ್​ ವಿಡಿಯೋದಲ್ಲಿ ತಿಳಿಸಿದ್ದಾರೆ. ಕೌರ್ ಮತ್ತು ಸಂಧು ಉತ್ತರ ಪ್ರದೇಶದ ಬಿಜ್ನೋರ್ ಮೂಲದವರು. ಅವರು 2015 ರಲ್ಲಿ ಯುಎಸ್​ಗೆ ತೆರಳಿದರು.


ಇದನ್ನೂ ಓದಿ: ಭಾರೀ ಮಳೆ, ಕಾಡಿನಲ್ಲಿ ಸಿಕ್ಕಾಕೊಂಡ 3 ಗರ್ಭಿಣಿ ಮಹಿಳೆಯರು, ಅಲ್ಲೇ ಮಗುವಿಗೆ ಜನ್ಮ ಕೊಟ್ಟ ಒಬ್ಬ ಮಹಿಳೆ!


ಪತಿ ತನಗೆ ವರ್ಷಗಳಿಂದ ಮೋಸ ಮಾಡುತ್ತಿದ್ದಾನೆ ಎಂದೂ ಆಕೆ ಹೇಳಿದ್ದಾಳೆ. ಆಕೆಯ ತಂದೆ ಕೂಡ ಸಂಧು ವಿರುದ್ಧ ಪ್ರಕರಣ ದಾಖಲಿಸಿದ್ದರು. ತನ್ನ ಅತ್ತೆ ತನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಮತ್ತು ಸಂಧುಗೆ ಹಿಂಸಿಸುವಂತೆ ಪ್ರೋತ್ಸಾಹಿಸಿದರು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.


ಚಿತ್ರಹಿಂಸೆಯ ವಿಡಿಯೋ ಕೂಡ ವೈರಲ್​


ಕೌರ್​ ಮೇಲೆ ಆಕೆಯ ಗಂಡ ದೌರ್ಜನ್ಯವೆಸಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಂತಹ ಒಂದು ವೀಡಿಯೊದಲ್ಲಿ, ಸಂಧು ಅವಳನ್ನು ಕತ್ತು ಹಿಸುಕುವುದನ್ನು ಮತ್ತು ಅವಳನ್ನು ಹಿಂಸಿಸುವುದನ್ನು ನೋಡಬಹುದು. ದಯವಿಟ್ಟು ಅಮ್ಮನನ್ನು ಹೊಡೆಯಬೇಡಿ ಎಂದು ಮಕ್ಕಳು ಬೇಡಿಕೊಳ್ಳುತ್ತಾರೆ. ಈ ಘಟನೆ ಆಕೆಯ ಮನೆಯೊಳಗಿನ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಕೆ ಕ್ಷಮೆ ಕೇಳುವವರೆಗೂ ಆಕೆಯನ್ನು ಥಳಿಸುತ್ತಿರುವುದು ಕಂಡುಬಂದಿದೆ.


ಕೊನೆಯ ವೀಡಿಯೊದಲ್ಲಿ, ಸಂಧು ತನ್ನನ್ನು ಐದು ದಿನಗಳ ಕಾಲ ಟ್ರಕ್‌ನಲ್ಲಿ ಬಂಧಿಯಾಗಿದ್ದರು ಎಂದು ಕೌರ್ ಹೇಳಿದ್ದಾರೆ. ಕೌರ್ ಅವರ ಸಹೋದರಿ ಕುಲದೀಪ್ ತನ್ನ ಸಹೋದರಿಯ ಸಾವಿನ ಕುರಿತು ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡುತ್ತಾ, ಅವನಿಗೆ ಒಬ್ಬ ಮಗ ಬೇಕು ಮತ್ತು ವರದಕ್ಷಿಣೆಯಾಗಿ 50 ಲಕ್ಷ ರೂ. ಬೇಕಿತ್ತು ಎಂದಿದ್ದಾರೆ.


#JusticeforMandeep

top videos


  ಆರೋಪಿತ ಪತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ, ಪ್ರಪಂಚದಾದ್ಯಂತದ ಅನೇಕ ದೇಶಗಳ ಜನರು ಮಹಿಳೆಯ ಪರವಾಗಿ ನಿಲ್ಲಲು ಒಗ್ಗೂಡಿದ್ದಾರೆ. #JusticeforMandeep ಎಂಬ ಹ್ಯಾಶ್‌ಟ್ಯಾಗ್ ಈಗ ವೈರಲ್ ಆಗುತ್ತಿದೆ. ಸಿಖ್ ಮತ್ತು ಪಂಜಾಬಿ ಸಮುದಾಯಗಳಲ್ಲಿನ ದುರುಪಯೋಗದ ವಿರುದ್ಧ ಕಾರ್ಯನಿರ್ವಹಿಸುವ ಯುಕೆ ಮೂಲದ ಎನ್‌ಜಿಒ ಸಿಖ್ ವುಮೆನ್ಸ್ ಏಡ್, ದುಃಖವನ್ನು ವ್ಯಕ್ತಪಡಿಸುವ ಹೇಳಿಕೆಯನ್ನು ನೀಡಿದೆ.

  First published: