HOME » NEWS » National-international » DOMESTIC FLIGHTS HERE ARE THE GUIDELINE FOR AIR TRAVEL WITHIN INDIA RMD

Domestic Flights: ಭಾರತದಲ್ಲಿ ವಿಮಾನ ಏರೋ ಮೊದಲು ಈ ನಿಯಮಗಳನ್ನು ನೀವು ಕಡ್ಡಾಯವಾಗಿ ಪಾಲಿಸಲೇಬೇಕು

ಮೊದಲ ದಿನ ವಿಮಾನ ಹಾರಾಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ವಿಮಾನದಲ್ಲಿ ಪ್ರಯಾಣದಲ್ಲಿ ಬೆಳೆಸಲು ಅಷ್ಟಾಗಿ ಮುಂದೆ ಬಂದಿಲ್ಲ. ಈ ರೀತಿ ಹಾರಾಟ ನಡೆಸುವವರು ಕೆಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇ ಬೇಕಿದೆ.

news18-kannada
Updated:May 26, 2020, 9:36 AM IST
Domestic Flights: ಭಾರತದಲ್ಲಿ ವಿಮಾನ ಏರೋ ಮೊದಲು ಈ ನಿಯಮಗಳನ್ನು ನೀವು ಕಡ್ಡಾಯವಾಗಿ ಪಾಲಿಸಲೇಬೇಕು
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಮೇ 26): ಎರಡು ತಿಂಗಳ ಲಾಕ್​ಡೌನ್​ನಿಂದಾಗಿ ಜನರು ತಮ್ಮ ಊರುಗಳಿಗೆ ಹೋಗಲಾರದೆ ಪರದಾಟ ನಡೆಸಿದ್ದರು. ಅನಿವಾರ್ಯ ಸ್ಥಿತಿಯಲ್ಲಿದ್ದ ಜನರಿಗೆ ತಮ್ಮ ಊರು ಸೇರಿಕೊಳ್ಳಲು ಸರ್ಕಾರದಿಂದಲೇ ರೈಲು, ಬಸ್​ಗಳ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ನಿನ್ನೆಯಿಂದ ಭಾರತದಲ್ಲಿ ದೇಶೀಯ ವಿಮಾನಗಳ ಸಂಚಾರ ಶುರುವಾಗಿದೆ.

ಮೊದಲ ದಿನ ವಿಮಾನ ಹಾರಾಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ವಿಮಾನದಲ್ಲಿ ಪ್ರಯಾಣದಲ್ಲಿ ಬೆಳೆಸಲು ಅಷ್ಟಾಗಿ ಮುಂದೆ ಬಂದಿಲ್ಲ. ಈ ರೀತಿ ಹಾರಾಟ ನಡೆಸುವವರು ಕೆಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇ ಬೇಕಿದೆ.


  • ಗರ್ಭಿಣಿ ಮಹಿಳೆಯರು ಹಾಗೂ ವಯಸ್ಸಾದವರಿಗೆ ಪ್ರಯಾಣ ಮಾಡದಂತೆ ಸೂಚನೆ ನೀಡಲಾಗಿದೆ

  • ಹೆಲಿಪ್ಯಾಡ್​ ಅಥವಾ ವಿಮಾನ ನಿಲ್ದಾಣಕ್ಕೆ 45 ನಿಮಿಷ ಮೊದಲೇ ತಲುಪಬೇಕು

  • ವೆಬ್​ ಮೂಲಕವೇ ಚೆಕ್​ ಇನ್​ ಆಗಬೇಕು ಹಾಗೂ ಇ ಪೇಮೆಂಟ್​ ಮಾಡಬೇಕು

  • ಥರ್ಮಲ್​ ಸ್ಕ್ರೀನಿಂಗ್​ ಕಡ್ಡಾಯ
  •  ಫೇಸ್​ ಮಾಸ್ಕ್​ ಧರಿಸುವುದು ಕಡ್ಡಾಯ

  • ಪ್ರಯಾಣಕ್ಕೆ  ಡಿಜಿಸಿಎ ನಿಗದಿ ಮಾಡಿದ ಬೆಲೆ ಅನ್ವಯ ಆಗುವುದಿಲ್ಲ

  • ಆಹಾರ ಕೊಂಡೊಯ್ಯುವುದು ನಿಷೇಧ

  • ಆರೋಗ್ಯ ಸೇತು ಆಪ್​ ಇರಬೇಕು ಇಲ್ಲವೇ, ನಿಮ್ಮ ಆರೋಗ್ಯ ಸರ್ಟಿಫಿಕೇಟ್​ ಇರಬೇಕು

  •  ಟ್ರಿಪ್​ ಮುಗಿದ ನಂತರ ವಿಮಾನ ಅಥವಾ ಹೆಲಿಕಾಪ್ಟರ್​ಅನ್ನು ಸ್ಯಾನಿಟೈಜ್​ ಮಾಡಬೇಕು
First published: May 26, 2020, 9:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories