HOME » NEWS » National-international » DOMESTIC FLIGHT PASSENGERS WITH NO CHECK IN BAGGAGE TO GET FARE DISCOUNT STG MAK

ದೇಶಿಯ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ; ಚೆಕ್-ಇನ್ ಬ್ಯಾಗೇಜ್ ಇಲ್ಲದವರಿಗೆ ಶುಲ್ಕ ರಿಯಾಯಿತಿ!

ಎಎನ್ಐ ವರದಿ ಪ್ರಕಾರ, ದೇಶಿಯ ಪ್ರಯಾಣಿಕರು 7 ಕೆ.ಜಿ ತೂಕದವರೆಗೂ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಅಷ್ಟೇ ಅಲ್ಲದೇ ಚೆಕ್-ಇನ್ ಬ್ಯಾಗೇಜ್ ಇಲ್ಲದೇ ಪ್ರಯಾಣಿಸುವವರು ಪ್ರಯಾಣಿಕರಿಗೆ ದೇಶಿಯ ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅವಕಾಶ ಮಾಡಿಕೊಟ್ಟಿದೆ.

news18-kannada
Updated:February 26, 2021, 6:10 PM IST
ದೇಶಿಯ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ; ಚೆಕ್-ಇನ್ ಬ್ಯಾಗೇಜ್ ಇಲ್ಲದವರಿಗೆ ಶುಲ್ಕ ರಿಯಾಯಿತಿ!
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ಸೋಂಕಿನಿಂದಾಗಿ ವಿಮಾನಯಾನ ಸ್ಥಗಿತಗೊಳಿಸಿದ ಬಳಿಕ ಪ್ರಯಾಣಿಕರನ್ನು ಆಕರ್ಷಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮುಂದಾಗಿದೆ. ಕೊರೋನಾ ಸೋಂಕಿನ ನಡುವೆ ಮುಂಜಾಗ್ರತಾ ಕ್ರಮಗಳೊಂದಿಗೆ ಮೊದಲಿಗೆ ಶೇ.45ರಷ್ಟು ಪ್ರಯಾಣಿಕರೊಂದಿಗೆ ಹಾರಾಟ ನಡೆಸುತ್ತಿದ್ದ ವಿಮಾನಗಳು ಇದೀಗ ಶೇ.80ರಷ್ಟು ಪ್ರಯಾಣಿಕರೊಂದಿಗೆ ವಿಮಾನ ಹಾರಾಟ ನಡೆಸುತ್ತಿವೆ. ಇದೇ ವೇಳೆ, ದೇಶಿ ವಿಮಾನ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಹೌದು, ದೇಶಿಯ ವಿಮಾನದಲ್ಲಿ ಚೆಕ್ಇನ್ ಬ್ಯಾಗೇಜ್ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರ ದರದಲ್ಲಿ ರಿಯಾಯಿತಿ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರದಂದು ಅನುಮತಿ ನೀಡಿದೆ ಎಂದು ಎಎನ್ಐ ವರದಿ ಮಾಡಿದೆ.

7 ಕೆ.ಜಿ ತೂಕದವರೆಗೂ ಕ್ಯಾಬಿನ್ ಬ್ಯಾಗೇಜ್ ಉಚಿತ:

ಎಎನ್ಐ ವರದಿ ಪ್ರಕಾರ, ದೇಶಿಯ ಪ್ರಯಾಣಿಕರು 7 ಕೆ.ಜಿ ತೂಕದವರೆಗೂ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಅಷ್ಟೇ ಅಲ್ಲದೇ ಚೆಕ್-ಇನ್ ಬ್ಯಾಗೇಜ್ ಇಲ್ಲದೇ ಪ್ರಯಾಣಿಸುವವರು ಪ್ರಯಾಣಿಕರಿಗೆ ದೇಶಿಯ ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅವಕಾಶ ಮಾಡಿಕೊಟ್ಟಿದೆ. ಆದರೆ, ಪ್ರಯಾಣಿಕರು ಪ್ರಯಾಣದ ವೇಳೆ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ತಮ್ಮ ಲಗೇಜ್ನ ಕುರಿತಾದ ಮಾಹಿತಿಯನ್ನು ನೀಡಬೇಕಾಗುತ್ತದೆ.
ಚೆಕ್ ಇನ್ ಬ್ಯಾಗೇಜ್ನಲ್ಲಿ 15 ಕೆಜಿಗೆ ಅವಕಾಶ.

ಇದನ್ನೂ ಓದಿ: Yusuf Pathan Retirement: ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಮತ್ತೋರ್ವ ಭಾರತೀಯ ಆಲ್​ರೌಂಡರ್​ ಯೂಸುಫ್​ ಪಠಾಣ್!

ಇನ್ನು, ಏರ್​ಲೈನ್ಸ್​ ನಿಯಮ ಪ್ರಕಾರ ದೇಶಿಯ ವಿಮಾನ ಪ್ರಯಾಣಿಕರಿಗೆ 15 ಕೆಜಿ ವರೆಗೆ ಚೆಕ್ ಇನ್ ಬ್ಯಾಗೇಜ್ನಲ್ಲಿ ಕೊಂಡೊಯ್ಯಲು ಅವಕಾಶವಿದೆ. ಇದಕ್ಕಿಂತ ಹೆಚ್ಚಿನ ಲಗೇಜ್ ಅನ್ನು ಪ್ರಯಾಣಿಕ ಹೊಂದಿದ್ದರೆ ಟಿಕೆಟ್ ಬುಕ್ಕಿಂಗ್ ವೇಳೆಯೇ ಪ್ರಯಾಣಿಕರಿಗೆ ಅವರ ಬ್ಯಾಗೇಜ್ ಮೇಲೆ ಶುಲ್ಕವನ್ನು ವಿಧಿಸಲಾಗುತ್ತದೆ. ಇದು, ಪ್ರಯಾಣಿಕರ ಟಿಕೆಟ್ನಲ್ಲಿ ಕೂಡ ಪ್ರಿಂಟ್ ಆಗಿರುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
Youtube Video
ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಮಾತನಾಡಿರುವ ಪ್ರಕಾರ, ದೇಶಿಯ ವಿಮಾನ ಪ್ರಯಾಣ ದರಗಳು ಒಂದೇ ರೀತಿಯಾಗಿ ಇರುವುದಿಲ್ಲ.ವಿಮಾನಯಾನ ಸಂಸ್ಥೆಗಳಿಗೆ ಕೊರೊನಾ ಸೋಂಕಿನ ಹಿನ್ನೆಲೆ ಮಾರ್ಚ್ 31ರ ವರೆಗೆ ಶೇ.80ರಷ್ಟು ಪ್ರಯಾಣಿಕರೊಂದಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದಿದ್ದಾರೆ.
Published by: MAshok Kumar
First published: February 26, 2021, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories