ಭಾರತ-ಚೀನಾ ನಡುವಿನ ಡೊಕ್ಲಾಮ್​ ವಿವಾದ ಸಂಪೂರ್ಣವಾಗಿ ಇತ್ಯರ್ಥಗೊಳಿಸಿದ್ದೇವೆ: ಸುಷ್ಮಾ ಸ್ವರಾಜ್​


Updated:August 1, 2018, 4:43 PM IST
ಭಾರತ-ಚೀನಾ ನಡುವಿನ ಡೊಕ್ಲಾಮ್​ ವಿವಾದ ಸಂಪೂರ್ಣವಾಗಿ ಇತ್ಯರ್ಥಗೊಳಿಸಿದ್ದೇವೆ: ಸುಷ್ಮಾ ಸ್ವರಾಜ್​

Updated: August 1, 2018, 4:43 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.08): ಚೀನಾದೊಂದಿಗೆ ದೀರ್ಘ ಕಾಲದಿಂದ ನಡೆದು ಬಂದಿದ್ದ ಡೊಕ್ಲಾಮ್​ ವಿವಾದವನ್ನು ರಾಜತಾಂತ್ರಿಕ ನೀತಿಯಿಂದ ಸಂಪೂರ್ಣವಾಗಿ ಇತ್ಯರ್ಥಗೊಳಿಸಿದ್ದೇವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ತಿಳಿಸಿದ್ದಾರೆ. ಬುಧವಾರದಂದು ನಡೆದ ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಡೊಕ್ಲಕಾಮ್​ ವಿವಾದವು ಪ್ರಸ್ತಾಪವಾಗಿದ್ದು, ಈ ವೇಳೆ ಉತ್ತರಿಸಿದ ವಿದೇಶಾಂಗ ಸಚಿವೆ 'ಭಾರತ ಹಾಗೂ ಚೀನಾ ದೇಶಗಳ ಗಡಿ ಪ್ರದೇಶದ ಡೊಕ್ಲಾಮ್​ ವಿವಾದವನ್ನು ರಾಜತಾಂತ್ರಿಕ ನೀತಿ ಅನುಸರಿಸಿ ಇತ್ಯರ್ಥಗೊಳಿಸಲಾಗಿದೆ. ಇನ್ಮುಂದೆ ಸಂಬಂಧಿಸಿದ ಪ್ರದೇಶಗಳಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ' ಎಂದಿದ್ದಾರೆ.

ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಟಿಎಂಸಿ ಸಂಸದ ಸುಗತ ಬೋಸ್​ ಕೇಳಿದ ಪ್ರಶ್ನೆಗೆ ಸುಷ್ಮಾ ಸ್ವರಾಜ್​ ಈ ಉತ್ತರ ನೀಡಿದ್ದು 'ವುಹಾನ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಜಿನ್​ಪಿಂಗ್​ ನಡುವೆ ನಡೆದ ಭೇಟಿಯ ಹಿಂದೆ ಯಾವುದೇ ವಿಶೇಷ ಅಜೆಂಡಾ ಇರಲಿಲ್ಲ. ಹೀಗಿರುವಾಗ ಡೊಕ್ಲಾಮ್​ ವಿವಾದವೂ ಶಾಮೀಲಾಗಿರಲಿಲ್ಲ' ಎಂದಿದ್ದಾರೆ.

ಸುಷ್ಮಾ ಸ್ವರಾಜ್​ ಮಾತನಾಡುತ್ತಾ 'ವುಹಾನ್​ ಶೃಂಗಸಭೆಯ ತಯಾರಿ ನಡೆಸಲು ನಾನು ಚೀನಾ ಪ್ರವಾಸ ಕೈಗೊಂಡಿದ್ದೆ. ಉಭಯ ರಾಷ್ಟ್ರಗಳ ನಾಯಕರ ನಡುವೆ ಸಹಜತೆ ಹೆಚ್ಚಿಸುವುದು, ಪರಸ್ಪರ ಜ್ಞಾನ ಹೆಚ್ಚಿಸುವುದು ಹಾಗೂ ಪರಸ್ಪರ ವಿಶ್ವಾಸ ಹೆಚ್ಚಿಸುವುದು ಹೀಗೆ ಈ ಮೂರು ವಿಚಾರಗಳಿಂದ ಈ ಶೃಂಗಸಭೆ ಆಯೋಜಿಸಲಾಗಿತ್ತು. ಈ ಮೂರೂ ಉದ್ದೇಶಗಳನ್ನು ಯಶಸ್ವಿಯಾಗಿಸಲು ಈ ಶೃಂಗಸಭೆಯಿಂದ ಸಾಧ್ಯವಾಗಿದೆ ಎಂದಿದ್ದಾರೆ. ಅಲ್ಲದೇ ಭಾರತ ಹಾಗೂ ಚೀನಾ ನಡುವಿನ ಈ ಶೃಂಗಸಭೆಯ ಬಳಿಕ ಚೀನಾದ ರಕ್ಷಣಾ ಮಂತ್ರಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ. ಇನ್ನು ಚೀನಾದ ರಕ್ಷಣಾ ಮಂತ್ರಿಯ ಭಾರತ ಪ್ರವಾಸ ಡಿಸೆಂಬರ್​ನಲ್ಲಿರಲಿದೆ ಎನ್ನಲಾಗಿದೆ.

ಏನಿದು ಡೊಕ್ಲಾಮ್​ ವಿವಾದ?

  • ಭೌಗೋಳಿಕವಾಗಿ ಡೊಕ್ಲಾಮ್​ ಪ್ರದೇಶವು ಭಾರತ, ಚೀನಾ ಹಾಗೂ ಭೂತಾನ್​ ಗಡಿಯಂಚಿನಲ್ಲಿದೆ. ಇದು ಭಾರತದ ಗಡಿ ಭಾಗದಿಂದ ಕೇವಲ 15 ಕಿಲೋ ಮೀಟರ್​ ದೂರದಲ್ಲಿದೆ. ಚುಂಬೀ ಘಾಟಿಯಲ್ಲಿರುವ ಡೊಕ್ಲಾಮ್​ ಪ್ರದೇಶವು ಕಾರ್ಯತಾಂತ್ರಿಕ ದೃಷ್ಟಿಯಿಂದ ಭಾರತ ಹಾಗೂ ಚೀನಾ ಎರಡೂ ದೇಶಗಳಿಗೆ ಅತ್ಯಂತ ಮಹತ್ವಪೂರ್ಭವಾಗಿದೆ. 1988 ಹಾಗೂ 1998 ರಲ್ಲಿ ಚೀನಾ ಹಾಗೂ ಭೂತಾನ್​ ನಡುವೆ ನಡೆದ ಒಪ್ಪಂದಲ್ಲಿ ಉಭಯ ದೇಶಗಳು ಡೊಕ್ಲಾಮ್​ ಪ್ರದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿಕೊಂಡಿದ್ದವು.

  • Loading...

  • ಡೊಕ್ಲಾಮ್​ ಪ್ರದೇಶವು ಭಾರತ, ಭೂತಾನ್​ ಹಾಗೂ ಚೀನಾ ನಡುವೆ ತ್ರಿಕೋನ ಆಕಾರದಲ್ಲಿದೆ. ಡೊಕ್ಲಾಮ್​ ಮೇಲೆ ಚೀನಾ ಹಾಗೂ ಭೂತಾನ್​ ಎರಡೂ ತಮ್ಮ ಹಕ್ಕು ಇದೆ ಎನ್ನುತ್ತವೆ. ಈ ವಿವಚಾರದಲ್ಲಿ ಭಾರತವು ಭಾರತವು ಭೂತಾನ್​ನ್ನು ಸಮರ್ಥಿಸುತ್ತಿದೆ.

  • 2017ರ ಜೂನ್​ನಲ್ಲಿ ಚೀನಾವು ಈ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಆರಂಭಿಸಿದಾಗ ಭಾರತದ ಸೈನಿಕರು ತಡೆದಿದ್ದರು. ಅಂದಿನಿಂದ ಉಭಯ ರಾಷ್ಟ್ರಗಳ ನಡುವೆ ಡೊಕ್ಲಾಮ್​ ವಿಚಾರವಾಗಿ ವಿವಾದ ಆರಂಭವಾಗಿತ್ತು. ಇನ್ನು ಚೀನಾ ನಿರ್ಮಿಸಲು ಇಚ್ಛಿಸಿರುವ ರಸ್ತೆಯಿಂದಾಗಿ ಭದ್ರತೆಗೆ ಧಕ್ಕೆಯಾಗುತ್ತದೆ ಎಂಬುವುದು ಭಾರತದ ವಾದವಾಗಿದೆ.

  • ಭವಿಷ್ಯದಲ್ಲಿ ಯಾವತ್ತಾದರೂ ಯುದ್ಧ ಪರಿಸ್ಥಿತಿ ನಿರ್ಮಾಣವಾಯಿತೆಂದಾದರೆ ಚೀನಾ ಸೈನಿಕರು ಡೊಕ್ಲಾಮ್​ ಪ್ರದೇಶವನ್ನು ಬಳಸಿ ಭಾರತದ ಸಿಲಿಗುರಿ ಕಾರಿಡಾರ್​ ಅಂದರೆ ಚಿಕನ್​ ನೆಕ್​ ಆಕ್ರಮಿಸಲು ಯತ್ನಿಸುತ್ತಾರೆಂಬುವುದು ಸದ್ಯ ಭಾರತಕ್ಕಿರುವ ಆತಂಕ.

  • ಸದ್ಯ ಈ ವಿವಾದವನ್ನು ಪರಸ್ಪರ ಮಾತುಕತೆ ನಡೆಸಿ ಇತ್ಯರ್ಥಗೊಳಿಸಿದ್ದಾರೆಂದು ಹೇಳಲಾಗುತ್ತಿದೆ. ಹೀಗಿದ್ದರೂ ಚೀನಾವು ಗಡಿ ಪ್ರದೇಶದಲ್ಲಿ ಅರುಣಾಚಲ ಪ್ರದೇಶದ ಆಸುಪಾಸಿನಲ್ಲಿ ನಿರ್ಮಾಣ ಕಾರ್ಯ ನಡೆಸುತ್ತಿರುವ ಹಾಗೂ ಬಂಕರ್​ಗಳನ್ನು ನಿರ್ಮಿಸುತ್ತಿರುವ ಸುದ್ದಿಗಳು ಸದ್ದು ಮಾಡುತ್ತಿವೆ.

First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ