ನಾಯಿ ನಿಯತ್ತಿಗೆ ಹೆಸರುವಾಸಿ. ಸಾಕುಪ್ರಾಣಿಗಳು, ಅದರಲ್ಲೂ ನಾವು ಸಾಕಿದ ನಾಯಿ ಕಳ್ಳತನ ತಡೆದ, ಜೀವ ಉಳಿಸಿದ ಎಷ್ಟೋ ಘಟನೆಗಳು ಅಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ ನಾಯಿಯೊಂದು ಎಟಿಎಂ ದರೋಡೆಯನ್ನು ತಡೆದಿರುವುದು ವರದಿಯಾಗಿದೆ. ಜಾರ್ಖಂಡ್‌ನ (Jharkhand) ಹಜಾರಿಬಾಗ್ ಜಿಲ್ಲೆಯ ಎಟಿಎಂ ಮೆಷಿನ್ ಪಾಯಿಂಟ್‌ನಲ್ಲಿ ದರೋಡೆ ನಡೆಯುವುದನ್ನು ತಪ್ಪಿಸಿದೆ. ಇನ್ನೇನು ದರೋಡೆಕೋರರು ಎಟಿಎಂನಿಂದ ಹಣ ಕದ್ದೇ ಬಿಟ್ಟರು ಎಂಬಷ್ಟರಲ್ಲಿ ನಾಯಿಯೊಂದು ದರೋಡೆಯನ್ನು (Dog Prevent ATM Theft) ತಡೆದಿದೆ. ₹27 ಲಕ್ಷ ಹಣ ಎಟಿಎಂನಲ್ಲಿ ಇತ್ತು ಎಂದು ಮೂಲಗಳು ತಿಳಿಸಿವೆ. ನಾಯಿ ಎಟಿಎಂ ದರೋಡೆ ತಡೆದದ್ದು ಹೇಗೆ? ಇಲ್ಲಿದೆ ಕುತೂಹಕರ ವರದಿ.
ಜಾರ್ಖಂಡ್ದ ಚೌಪರಾನ್ ಪೊಲೀಸ್ ಠಾಣೆಯ ಚೈತಿ ಗ್ರಾಮದ ಜಿಟಿ ರಸ್ತೆಯಲ್ಲಿರುವ ಮನೆಯೊಂದರ ನೆಲ ಮಹಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ರಾತ್ರಿ ವೇಳೆ ಗ್ಯಾಸ್ ಕಟರ್, ಎಲ್‌ಪಿಜಿ ಸಿಲಿಂಡರ್ ಮತ್ತು ಸುತ್ತಿಗೆಯೊಂದಿಗೆ ದರೋಡೆಕೋರರ ತಂಡವೊಂದು ದರೋಡೆ ನಡೆಸಲು ಮುಂದಾಗಿತ್ತು.
ಇನ್ನೇನು ದರೋಡೆ ಆಗೇಬಿಟ್ಟಿತು ಇನ್ನೇನು ದರೋಡೆಕೋರರು ಎಟಿಎಂನಿಂದ ಹಣ ಕದ್ದೇ ಬಿಟ್ಟರು ಎಂಬಷ್ಟರಲ್ಲಿ ನಾಯಿಯೊಂದು ದರೋಡೆಯನ್ನು ತಡೆದಿದೆ. ₹27 ಲಕ್ಷ ಹಣ ಎಟಿಎಂನಲ್ಲಿ ಇತ್ತು ಎಂದು ಮೂಲಗಳು ತಿಳಿಸಿವೆ.
ಸಾಕು ನಾಯಿ ಹೆಸರೇನು ಗೊತ್ತೇ? ಎಟಿಎಂ ಇರುವ ಮನೆ ಸುಧೀರ್ ಬರ್ನ್‌ವಾಲ್ ಎಂಬವರ ಒಡೆತನದಲ್ಲಿದೆ. ದರೋಡೆಕೋರರು ಎಟಿಎಂ ಬಳಿ ಕಸರತ್ತು ನಡೆಸುತ್ತಿರುವುದನ್ನು ಗಮನಿಸಿದ ಬರ್ನ್ವಾಲ್ ಅವರ ಸಾಕು ನಾಯಿ ಸಾಂಬಾ ಬೊಗಳಲು ಪ್ರಾರಂಭಿಸಿದೆ. ಅಷ್ಟು ಹೊತ್ತಿಗಾಗಲೇ ದರೋಡೆಕೋರರು ಯಂತ್ರವನ್ನು ಬಹುತೇಕ ಕತ್ತರಿಸುವುದನ್ನು ಮುಗಿಸಿದ್ದರು.
ಅರೇ! ಇಷ್ಟು ಹೊತ್ತಿಗೆ ಏಕೆ ಬೊಗಳುತ್ತಿದೆ ನಾಯಿ? ಆದರೆ ನಾಯಿ ಜೋರಾಗಿ ಕೂಗುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಅರೇ, ನಾಯಿ ಏಕೆ ಈ ರಾತ್ರಿ ಇಷ್ಟು ಜೋರಾಗಿ ಬೊಗಳುತ್ತಿದೆ ಎಂದು ಮನೆಯಿಂದ ಹೊರಗೆ ಬಂದಿದ್ದಾರೆ. ಹೀಗೆ ಜನರು ಎಚ್ಚರಗೊಂಡು ಹೊರಗಡೆ ಬಂದಿದ್ದನ್ನು ಕಂಡು ಎಟಿಎಂ ಹಣ ಕದಿಯಲು ಬಂದಿದ್ದ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಜನರು ಎಚ್ಚರಗೊಳ್ಳುತ್ತಿದ್ದಂತೆಯೇ ದರೋಡೆಕೋರರು ಹಾನಿಗೊಳಗಾದ ಯಂತ್ರವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ. ಮತ್ತು ದರೋಡೆಯ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ನಜೀರ್ ಅಖ್ತರ್ ತಿಳಿಸಿದ್ದಾರೆ. ನಾಯಿಗಳ ನಿಯತ್ತನ್ನು ಪ್ರಶಂಸಿಸಿ ನೆಟ್ಟಿಗರು ಈ ಘಟನೆಯನ್ನು ವೈರಲ್ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಎಷ್ಟು ಬೀದಿನಾಯಿಗಳಿವೆ ಗೊತ್ತೇ? ಬೆಂಗಳೂರು ಒಂದರಲ್ಲೇ 2016ರಿಂದ 2022ರವರೆಗೆ ಸುಮಾರು 1 ಲಕ್ಷ ನಾಯಿ ಕಡಿತ ಕೇಸ್ಗಳು ದಾಖಲಾಗಿವೆಯಂತೆ. ಹೀಗಾಗಿ ಬೀದಿನಾಯಿಗಳ ಹಾವಳಿ ತಡೆಯಲು ಬಿಬಿಎಂಪಿ ಇನ್ನೂ ಶ್ರಮಿಸುತ್ತಿದೆ. ಬೆಂಗಳೂರಿನಲ್ಲಿ ಹಿಂದಿನಿಂದಲೂ ಬೀದಿನಾಯಿಗಳ ಕಾಟ ಅಷ್ಟಿಷ್ಟಲ್ಲ, ಬೀದಿನಾಯಿಗಳನ್ನು ನಿಯಂತ್ರಿಸಲು ಬಿಬಿಎಂಪಿ ಸಂತಾನ ಹರಣ ಚಿಕಿತ್ಸೆಯನ್ನು ನೀಡುತ್ತಲೆ ಬಂದಿದೆ. ಆದರೆ ಇನ್ನೂ ಬೀದಿನಾಯಿಗಳ ಕಾಟ ಕಡಿಮೆಯಾಗಿಲ್ಲ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ ಮಾಡಲಾಗುತ್ತಿದೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಬೆಂಗಳೂರು ಒಂದರಲ್ಲೇ 6.5 ಲಕ್ಷ ಬೀದಿನಾಯಿಗಳಿವೆ ಎಂದು ವರದಿಯಾಗಿದೆ.ಬೀದಿನಾಯಿಗಳನ್ನು ನಿಯಂತ್ರಿಸಲು ದೃಷ್ಟಿಯಿಂದ 3 ಲಕ್ಷ ಬೀದಿನಾಯಿಗಳಿಗೆ ಸಂತಾನ ಹರಣ ಮಾಡಲಾಗಿದೆ. ಜೊತೆಗೆ ರೇಬಿಸ್ ಇಂಜೆಕ್ಷನ್ ಚುಚ್ಚಲಾಗಿದೆ ಎಂದು ವರದಿಗಳು ಮಾಹಿತಿ ತಿಳಿಸಿವೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ