HOME » NEWS » National-international » DOG IS THE BEST FRIEND FOR HUMAN DOG PUSHING WHEELCHAIR VIDEO VIRAL ON TWITTER SCT

Viral Video: ನಾಯಿಗಿಂತ ಬೆಸ್ಟ್ ಫ್ರೆಂಡ್ ಯಾರೂ ಇಲ್ಲ!; ಅಪರೂಪದ ಗೆಳೆಯರ ವಿಡಿಯೋ ವೈರಲ್

ಮೆಕ್ಸಿಕೋದ ಈ ನಾಯಿ ಮತ್ತು ಅದರ ಒಡೆಯನ ನಂಟಿಗೆ ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ನೂರಾರು ಜನರು ರೀಟ್ವೀಟ್ ಮಾಡಿಕೊಂಡಿದ್ದು, ಇದುವರೆಗೂ 10 ಸಾವಿರ ಜನರು ವೀಕ್ಷಿಸಿದ್ದಾರೆ.

Sushma Chakre | news18-kannada
Updated:June 3, 2020, 6:03 PM IST
Viral Video: ನಾಯಿಗಿಂತ ಬೆಸ್ಟ್ ಫ್ರೆಂಡ್ ಯಾರೂ ಇಲ್ಲ!; ಅಪರೂಪದ ಗೆಳೆಯರ ವಿಡಿಯೋ ವೈರಲ್
ಗೆಳೆಯನನ್ನು ತಳ್ಳಿಕೊಂಡು ಹೋಗುತ್ತಿರುವ ನಾಯಿ
  • Share this:
ನಿಯತ್ತಿಗೆ ಇನ್ನೊಂದು ಹೆಸರೇ ನಾಯಿಗಳು. ಮನುಷ್ಯರಿಗೆ ನಾಯಿಗಿಂತ ಹೆಚ್ಚು ಆಪ್ತರು ಬೇರಾರೂ ಇಲ್ಲ. ಮನೆಯವರೊಂದಿಗೆ ಮನೆಯವರಾಗಿ ಅದೆಷ್ಟೋ ನಾಯಿಗಳು ಹಲವರ ಮನೆಯಲ್ಲಿ ಜೀವನ ನಡೆಸುತ್ತಿವೆ. ಆದರೆ, ಇಲ್ಲೊಂದು ನಾಯಿ ತನ್ನ ಕಾಲಿಲ್ಲದ ಗೆಳೆಯನ ವೀಲ್​ಚೇರ್ ತಳ್ಳುತ್ತಾ, ತನ್ನ ಸ್ನೇಹಿತನಿಗೆ ಬೆಂಗಾವಲಾಗಿ ನಿಂತಿದೆ.

ವಿಕಲಚೇತನ ವ್ಯಕ್ತಿಯೊಬ್ಬನಿಗೆ ಎಲ್ಲಿ ಹೋಗಬೇಕಾದರೂ ವೀಲ್​ಚೇರ್ ಬೇಕಾಗಿತ್ತು. ಆತ ಬಹಳ ಪ್ರೀತಿಯಿಂದ ನಾಯಿಯೊಂದನ್ನು ಸಾಕಿಕೊಂಡಿದ್ದ. ಆತ ಎಲ್ಲಿಗೆ ಹೋಗಬೇಕೆಂದರೂ ನಾಯಿಯೇ ಆತನ ವೀಲ್​ಚೇರ್ ತಳ್ಳಿಕೊಂಡು ಹೋಗುತ್ತಿತ್ತು. ತನ್ನ ಒಡೆಯ ಹಾಗೂ ಗೆಳೆಯನ ಕಾಳಜಿ ಮಾಡುತ್ತಿರುವ ನಾಯಿಯ ಹಳೆಯ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಇದನ್ನೂ ಓದಿ: ರಾಮ ರಾಮ..! ಸೀತೆಗೆ ಎಷ್ಟು ಮಕ್ಕಳು?; ತಿರುಪತಿ ತಿಮ್ಮಪ್ಪ ದೇವಾಲಯದಿಂದ ಹೊರಬಿತ್ತು ವಿವಾದಾತ್ಮಕ ರಾಮಾಯಣ

ಈ ವಿಡಿಯೋವನ್ನು ಐಎಫ್​ಎಸ್​ ಆಫೀಸರ್ ಸುಶಾಂತ ನಂದ ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 11 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಫುಟ್​ಪಾತ್​ ಮೇಲೆ ವೀಲ್​ಚೇರ್ ಅನ್ನು ನಾಯಿ ತಳ್ಳಿಕೊಂಡು ಹೋಗುತ್ತಿದೆ. ಮೆಕ್ಸಿಕೋದ ಈ ನಾಯಿ ಮತ್ತು ಅದರ ಒಡೆಯನ ನಂಟಿಗೆ ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ನೂರಾರು ಜನರು ರೀಟ್ವೀಟ್ ಮಾಡಿಕೊಂಡಿದ್ದು, ಇದುವರೆಗೂ 10 ಸಾವಿರ ಜನರು ವೀಕ್ಷಿಸಿದ್ದಾರೆ.
Published by: Sushma Chakre
First published: June 3, 2020, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading