Viral News : ನಾಯಿಗಳಿಗೆ ಆಹಾರವಾದ ನವಜಾತ ಶಿಶು ಮೃತದೇಹ: ಯಾಕಿಷ್ಟು ಬೇಜವಾಬ್ದಾರಿ?

Viral News : ಮಧ್ಯಪ್ರದೇಶ(Madhya Pradesh)ದಲ್ಲಿ ನಾಯಿ(Dog)ಯೊಂದು ನವಜಾತ ಶಿಶು(Newborn Baby) ಮೃತದೇಹವನ್ನು ತಿಂದಿದೆ. ಮೃತಪಟ್ಟ ಮಗುವನ್ನು ಅವರ ಕುಟುಂಬಸ್ಥರು ಸರಿಯಾಗಿ ಮಣ್ಣು ಮಾಡದೇ ಆತುರದಿಂದ ಹಾಗೇ ಹೋಗಿದ್ದಾರೆ.

ಬೀದಿ ನಾಯಿಗಳು

ಬೀದಿ ನಾಯಿಗಳು

  • Share this:
ಪ್ರತಿದಿನ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಘಟೆನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಘಟನೆಗಳನ್ನು ನೋಡಿದರೆ ನಿಜಕ್ಕೂ ಇಂಥ ಘಟನೆಗಳು ನಡೆಯುತ್ತಾ ಅನ್ನಿಸುತ್ತವೆ. ಹೌದು, ಮಧ್ಯಪ್ರದೇಶ(Madhya Pradesh)ದಲ್ಲಿ ನಾಯಿ(Dog)ಯೊಂದು ನವಜಾತ ಶಿಶು(Newborn Baby) ಮೃತದೇಹವನ್ನು ತಿಂದಿದೆ. ಮೃತಪಟ್ಟ ಮಗುವನ್ನು ಅವರ ಕುಟುಂಬಸ್ಥರು ಸರಿಯಾಗಿ ಮಣ್ಣು ಮಾಡದೇ ಆತುರದಿಂದ ಹಾಗೇ ಹೋಗಿದ್ದಾರೆ. ಇದನ್ನು ಕಂಡ ನಾಯಿ ಆ ಮೃತದೇಹವನ್ನು ಮಣ್ಣಿನಿಂದ ಎಳೆದು ಹೊರತೆಗೆದು ತಿಂದಿದೆ. ಮಧ್ಯಪ್ರದೇಶದ (Madhya Pradesh) ಅಶೋಕನಗರದ ಜಿಲ್ಲಾ ಆಸ್ಪತ್ರೆಯ ಹೊರಗೆ ನಾಯಿಯೊಂದು ಸತ್ತ ಮಗುವಿನ ದೇಹವನ್ನು (still born) ತಿಂದ ಘಟನೆ ನಡೆದಿದೆ. ನವಜಾತ ಶಿಶುವಿನ ಶವವನ್ನು ಹಿಡಿದಿದ್ದ ನಾಯಿಯನ್ನು ಗುರುತಿಸಿದ ಸ್ವಚ್ಛತಾ ಕಾರ್ಯಕರ್ತರು (Cleaning staff) ಅದನ್ನು ನಂತರ ಓಡಿಸಿದ್ದಾರೆ. ನೆಟ್ಟಿಗರು ಆ ನಾಯಿಗಳ ತಪ್ಪೇನು ಅಂತ ಭಾರೀ ಚರ್ಚೆ ಮಾಡುತ್ತಾರೆ. ಕುಟುಂಬಸ್ಥರು ಮಾಡಿರುವ ತಪ್ಪಿನಿಂದ ನಾಯಿಗಳು ಆ ರೀತಿ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಷಯ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ನವಜಾತ ಶಿಶು ಎಸೆದು ಹೋಗಿರುವ ಶಂಕೆ

ಅಶೋಕನಗರ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಡಿ.ಕೆ.ಭಾರ್ಗವ  ಅವರು ಮಾತಾನಡಿ, "ನಮಗೆ ಈ ಬಗ್ಗೆ ಬೆಳಿಗ್ಗೆ ಮಾಹಿತಿ ಸಿಕ್ಕಿತು, ನಾವು ಈಗ ಶವವನ್ನು  ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಇರಿಸಿದ್ದೇವೆ ಮತ್ತು ಪೊಲೀಸರಿಗೆ ತಿಳಿಸಿದ್ದೇವೆ.  ಕುಟುಂಬ ಸದಸ್ಯರು ನವಜಾತ ಶಿಶುಗಳ ಶವವನ್ನು ಸರಿಯಾಗಿ ಹೂಳುವುದಿಲ್ಲ, ಅವರು ದೇಹವನ್ನು ತರಾತುರಿಯಲ್ಲಿ ಎಸೆಯುತ್ತಾರೆ. ಈ ರೀತಿ ನವಜಾತ ಶಿಶುವಿನ ಶವಗಳನ್ನು ಕುಟುಂಬ ಸದಸ್ಯರು ಎಸೆದಿರುವ  ಘಟನೆಗಳು ಈ ಹಿಂದೆ ಕೂಡ ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಒಂದೆಡೆ ಸೇರಿದ ಮೂರು ನಾಗರಹಾವುಗಳು, ಇಲ್ಲಿದೆ ನೋಡಿ ಬಲು ಅಪರೂಪದ ದೃಶ್ಯ!

ಕಳೆದ ವರ್ಷವೂ  ಇದೇ ರೀತಿಯ ಘಟನೆ!

ಕಳೆದ ವರ್ಷ ಆಗಸ್ಟ್‌ನಲ್ಲಿ ಆಸ್ಪತ್ರೆಯ ಹೊರಗೆ ಇದೇ ರೀತಿಯ ಘಟನೆ ಸಂಭವಿಸಿದ್ದು, ಬೀದಿ ನಾಯಿಗಳು ನವಜಾತ ಶಿಶುವಿನ ದೇಹವನ್ನು ತಿಂದ ಘಟನೆ ನಡೆದಿತ್ತು. ಕಳೆದ ಎರಡು ವರ್ಷಗಳಲ್ಲಿ ಇದು ನಾಲ್ಕನೇ ಘಟನೆ ಎಂದು ಸ್ಥಳೀಯರು ಹೇಳುತ್ತಾರೆ. ಕಾರಾಣಾಂತರಗಳಿಂದ ಮರಣ ಹೊಂದಿದೆ ನವಜಾತ ಶಿಶುಗಳನ್ನು ಪಾಲಕರು ಆಸ್ಪತ್ರೆಯ ಆವರಣದಲ್ಲೇ ಎಸೆದು ಹೋಗಿದ್ದಾರೆ. ನವಜಾತ ಶಿಶುವಿನ ಶವವನ್ನು ನಾಯಿಗಳು ಎತ್ತಿಕೊಂಡು ತಿಂದಿವೆ. ಆಸ್ಪತ್ರೆಯ ಆವರಣದಲ್ಲಿ ಈ ರೀತಿ ಘಟನೆ ಪದೇ ಪದೇ ನಡೆಯುತ್ತಿರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಒಂದಲ್ಲಾ, ಎರಡಲ್ಲಾ, ಏಕಕಾಲದಲ್ಲಿ 9 ಮಹಿಳೆಯರನ್ನು ವಿವಾಹವಾದ ವ್ಯಕ್ತಿ! ಹರಕೆ ಕಟ್ಟಿಕೊಂಡಿದ್ದನೋ ಹೇಗೆ?

ಈ ಆಸ್ಪತ್ರೆಯಲ್ಲಿ ಇದೆಯಂತೆ ವೈದ್ಯರ ಕೊರತೆ?

ಪ್ರತಿದಿನ ಸುಮಾರು 400 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿ  ಕೊರತೆ ಎದುರಿಸುತ್ತಿದೆ. ಆಸ್ಪತ್ರೆಯಲ್ಲಿ 24 ಅನುಮೋದಿತ ವೈದ್ಯರ ಹುದ್ದೆಗಳಿದ್ದು, 20 ಖಾಲಿ ಇವೆ. ಆಸ್ಪತ್ರೆಯಲ್ಲಿ 49 ವಾರ್ಡ್ ಬಾಯ್‌ಗಳು ಮತ್ತು ತಂತ್ರಜ್ಞರಿಗೆ ಮಂಜೂರಾತಿ ಇದೆ. ಆದರೆ ಪ್ರಸ್ತುತ ಈ ಪೈಕಿ 31 ಹುದ್ದೆಗಳು ಖಾಲಿ ಇವೆ. ಮಧ್ಯಪ್ರದೇಶದ ಇತರ ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರದ ಪರಿಸ್ಥಿತಿಯೂ ಇದೇ ಆಗಿದೆ. ರಾಜ್ಯದ 13 ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 856 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 8,904 ವೈದ್ಯರ ಹುದ್ದೆ ಖಾಲಿ ಇದ್ದರೂ 4,815 ವೈದ್ಯರಿದ್ದಾರೆ. 16,000 ನರ್ಸಿಂಗ್ ಸಿಬ್ಬಂದಿ ಕೊರತೆಯೂ ಇದೆ.
Published by:Vasudeva M
First published: