Jio-Facebook Mega Deal: ತಂತ್ರಜ್ಞಾನ ಲೋಕದಲ್ಲಿ ಹೊಸ ದಾಖಲೆ ಬರೆಯಲಿದೆ ಜಿಯೋ-ಫೇಸ್​ಬುಕ್​ ಒಪ್ಪಂದ?

Jio-Facebook Mega deal: ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಆಗಿದ್ದು ಇದೇ ಮೊದಲು. ಹೀಗಾಗಿ, ಜಿಯೋ-ಫೇಸ್​ಬುಕ್​ ಡೀಲ್​ ಭಾರತ ತಂತ್ರಜ್ಞಾನ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.

news18-kannada
Updated:April 22, 2020, 3:20 PM IST
Jio-Facebook Mega Deal: ತಂತ್ರಜ್ಞಾನ ಲೋಕದಲ್ಲಿ ಹೊಸ ದಾಖಲೆ ಬರೆಯಲಿದೆ ಜಿಯೋ-ಫೇಸ್​ಬುಕ್​ ಒಪ್ಪಂದ?
ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​
  • Share this:
ಮುಂಬೈ (ಏ.22): ರಿಲಾಯನ್ಸ್​ ಇಂಡಸ್ಟ್ರೀಸ್​ ಒಡೆತನದ ಜಿಯೋ ತನ್ನ ಶೇ.9.99 ಷೇರನ್ನು ಅಮೆರಿಕದ ಟೆಕ್​ ಸಂಸ್ಥೆ ಫೇಸ್​ಬುಕ್​ಗೆ ಮಾರಾಟ ಮಾಡಿದೆ. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಭಾರತದಲ್ಲಿ​ ತಾಂತ್ರಿಕ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಮೊದಲ ಸಂಸ್ಥೆ ಎನ್ನುವ ಖ್ಯಾತಿಗೆ ಫೇಸ್​ಬುಕ್​ ಪಾತ್ರವಾಗುವ ಎಲ್ಲ ಲಕ್ಷಣ ಗೋಚರವಾಗಿದೆ.

ಭಾರತದ ಟೆಕ್ನಾಲಜಿ ಕ್ಷೇತ್ರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಆಗಿದ್ದು ಇದೇ ಮೊದಲು. ಹೀಗಾಗಿ, ಜಿಯೋ-ಫೇಸ್​ಬುಕ್​ ಡೀಲ್​ ಭಾರತ ತಂತ್ರಜ್ಞಾನ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಈ ಮೊದಲು ಜಪಾನ್​ ಮೂಲದ ಸಾಫ್ಟ್​ ಬ್ಯಾಂಕ್​ ಓಲಾ, ಫ್ಲಿಪ್​ಕಾರ್ಟ್​ ಸೇರಿ ಭಾರತದ ವಿವಿಧ ಟೆಕ್​ ಕಂಪನಿಗಳ ಮೇಲೆ 76,587 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು.

“ಸಾಫ್ಟ್​ಬ್ಯಾಂಕ್​ ಇತ್ತೀಚೆಗೆ ತೀವ್ರ ಕಳಪೆ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಅವರ ನಾಯಕತ್ವ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಫೇಸ್​ಬುಕ್​ ಈ ಸ್ಥಾನವನ್ನು ತುಂಬುವ ಎಲ್ಲ ಲಕ್ಷಣ ಗೋಚರವಾಗಿದೆ,” ಎಂದು ತಂತ್ರಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Reliance Jio-Facebook Deal: ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು 43,574 ಕೋಟಿ ರೂಪಾಯಿಗೆ ಖರೀದಿಸಿದ ಫೇಸ್​ಬುಕ್​

“ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್​ ಇಂಡಿಯಾದ ಕನಸು ಕಂಡಿದ್ದಾರೆ. ಸುಲಭ ಜೀವನ ನಡೆಸುವುದು ಮತ್ತು ಸುಲಭವಾಗಿ ಉದ್ಯಮ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳು. ಕೊರೋನಾ ವೈರಸ್​ ಕಡಿಮೆ ಆದ ನಂತರ ಭಾರತ ಆರ್ಥಿಕವಾಗಿ ಸಬಲವಾಗಲಿದೆ. ಭಾರತದ ಆರ್ಥಿಕತೆ ಮೇಲೆ ಈ ಒಪ್ಪಂದ ಪ್ರಮುಖ ಬದಲಾವಣೆಗೆ ಕಾರಣವಾಗಲಿದೆ,”  ಎಂದು ಅಂಬಾನಿ ಹೇಳಿದ್ದರು.
First published: April 22, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading