News18 India World Cup 2019

ಕೋಲ್ಕತ್ತಾ ವೈದ್ಯರ ಪ್ರತಿಭಟನೆ; ಬೆಂಗಳೂರು, ದೆಹಲಿ, ಹೈದರಾಬಾದ್ ಸೇರಿ ಹಲವೆಡೆ ಬೆಂಬಲ, ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟ ಎಂದು ಆರೋಪಿಸಿ ಎನ್​ಆರ್​ಎಸ್​ ವೈದ್ಯಕೀಯ ಕಾಲೇಜಿನ ಪರಿಬೊಹೊ ಮುಖರ್ಜಿ ಎಂಬ ಕಿರಿಯ ವೈದ್ಯನನ್ನು ಮೃತ ವ್ಯಕ್ತಿಯ ಕುಟುಂಬದವರು ಥಳಿಸಿದ್ದರು. ಇದರಿಂದ ರಾಜ್ಯಾದ್ಯಾಂತ ವೈದ್ಯರು ಪ್ರತಿಭಟನೆ ಆರಂಭಿಸಿದ್ದರು.

HR Ramesh | news18
Updated:June 14, 2019, 12:32 PM IST
ಕೋಲ್ಕತ್ತಾ ವೈದ್ಯರ ಪ್ರತಿಭಟನೆ; ಬೆಂಗಳೂರು, ದೆಹಲಿ, ಹೈದರಾಬಾದ್ ಸೇರಿ ಹಲವೆಡೆ ಬೆಂಬಲ, ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ
ಮುಷ್ಕರನಿರತ ವೈದ್ಯರು
HR Ramesh | news18
Updated: June 14, 2019, 12:32 PM IST
ಪಶ್ಚಿಮಬಂಗಾಳದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆಗೆ ದೇಶದ ಮೆಟ್ರೋ ನಗರಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ವೈದ್ಯರ ಮುಷ್ಕರದಿಂದಾಗಿ ಬೆಂಗಳೂರು, ದೆಹಲಿ, ಹೈದರಾಬಾದ್​ ಸೇರಿದಂತೆ ಹಲವೆಡೆ ಚಿಕಿತ್ಸೆ ಸ್ಥಗಿತಗೊಳಿಸಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.

ಕಳೆದ ಮಂಗಳವಾರದಿಂದ ಪಶ್ಚಿಮಬಂಗಾಳದಲ್ಲಿ ವೈದ್ಯರು ಪ್ರತಿಭಟನೆ ಆರಂಭಿಸಿದ್ದರು. ನೆನ್ನೆ ಪ್ರತಿಭಟನಾ ಸ್ಥಳಕ್ಕೆ ಬಂದ ಸಿಎಂ ಮಮತಾ ಬ್ಯಾನರ್ಜಿ ಅವರು ವೈದ್ಯರು ಸೇವೆಗೆ ಮರಳುವಂತೆ ನಾಲ್ಕು ಗಂಟೆಗಳ ಗಡುವು ನೀಡಿದ್ದರು. ಇದಕ್ಕೆ ಸೊಪ್ಪು ಹಾಕದ ವೈದ್ಯರು ಸರ್ಕಾರ ವೈದ್ಯರಿಗೆ ಸುರಕ್ಷತೆ ಒದಗಿಸುವ ಭರವಸೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದರು. ಈ ಪ್ರತಿಭಟನೆ ಬಿಜೆಪಿ ಮತ್ತು ಸಿಪಿಐ (ಎಂ) ಪಿತೂರಿಯ ಭಾಗ. ಇದಕ್ಕೆ ಅವರು ಕೋಮು ಸಂಘರ್ಷದ ಬಣ್ಣ ಬಳಿಯುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟ ಎಂದು ಆರೋಪಿಸಿ ಎನ್​ಆರ್​ಎಸ್​ ವೈದ್ಯಕೀಯ ಕಾಲೇಜಿನ ಪರಿಬೊಹೊ ಮುಖರ್ಜಿ ಎಂಬ ಕಿರಿಯ ವೈದ್ಯನನ್ನು ಮೃತ ವ್ಯಕ್ತಿಯ ಕುಟುಂಬದವರು ಥಳಿಸಿದ್ದರು. ಇದರಿಂದ ರಾಜ್ಯಾದ್ಯಾಂತ ವೈದ್ಯರು ಪ್ರತಿಭಟನೆ ಆರಂಭಿಸಿದ್ದರು.

ಇದನ್ನು ಓದಿ: 'ಕೆಲಸಕ್ಕೆ ಹಾಜರಾಗಿ, ಇಲ್ಲ.....'; ಪ್ರತಿಭಟನಾನಿರತ ವೈದ್ಯರಿಗೆ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಖಡಕ್​ ಎಚ್ಚರಿಕೆ

ಇಂದು ಪಶ್ಚಿಮಬಂಗಾಳ ವೈದ್ಯರ ಪ್ರತಿಭಟನೆಗೆ ದೇಶದ್ಯಾಂತ ಬೆಂಬಲ ವ್ಯಕ್ತವಾಗಿದ್ದು, ಪ್ರಮುಖ ನಗರಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದಾರೆ. ದೆಹಲಿ, ಹೈದರಾಬಾದ್​ ಏಮ್ಸ್​, ತಿರುವನಂತಪುರ, ಮುಂಬೈ ಹಾಗೂ ಬೆಂಗಳೂರಿನಲ್ಲಿ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...