ಜೈಪುರ: ಕೆಲವೊಂದು ಸುದ್ದಿಗಳು ಕೇಳಲು ತುಂಬಾ ವಿಲಕ್ಷಣವಾಗಿರುತ್ತವೆ. ಇನ್ನೂ ಕೆಲವು ಸುದ್ದಿಗಳು ವಿಚಿತ್ರ (Weird) ಕಾರಣಗಳಿಂದ ಕುತೂಹಲವನ್ನು ಸೃಷ್ಟಿಸುತ್ತಲೇ ಇರುತ್ತದೆ. ರಾಜಸ್ಥಾನದಲ್ಲಿ (Rajasthan) ವರದಿಯಾದ ವಿಚಿತ್ರ ಘಟನೆಯಲ್ಲಿ 25 ವರ್ಷದ ವ್ಯಕ್ತಿಯೊಬ್ಬ 56 ಬ್ಲೇಡ್‌ಗಳನ್ನು ( Blades) ನುಂಗಿದ್ದ ಎನ್ನುವ ಸುದ್ದಿ ಆಶ್ಚರ್ಯವನ್ನುಂಟು ಮಾಡುತ್ತಿದೆ. ಆತನಿಗೆ ಶಸ್ತ್ರಚಿಕಿತ್ಸೆ (Operation) ಮಾಡುವ ಮೂಲಕ ಆತನ ಹೊಟ್ಟೆಯೊಳಗಿದ್ದ ಬರೋಬ್ಬರಿ 56 ಬ್ಲೇಡ್ಗಳ ಚೂರುಗಳನ್ನು ಹೊರ ತೆಗೆಯಲಾಗಿದೆ. ಆದರೆ ಆ ವ್ಯಕ್ತಿ ಬ್ಲೇಡ್ಗಳನ್ನು ತಿಂದಿರುವುದೇಕೆ ಎನ್ನುವುದರ ಬಗ್ಗೆ ಯಾವುದೇ ನಿರ್ದಿಷ್ಟ ಕಾರಣ ಬಹಿರಂಗಪಡಿಸಿಲ್ಲವೆಂದು ತಿಳಿದುಬಂದಿದೆ. ಸದ್ಯಕ್ಕೆ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಜಸ್ಥಾನದ ಸಂಚೋರ್ ಪಟ್ಟಣದ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಹಾಗೂ ತನ್ನ ಇತರೆ 4 ಸ್ನೇಹಿತರೊಂದಿಗೆ ವಾಸವಾಗಿದ್ದ 25 ವರ್ಷದ ಯುವಕ ಯಶಪಾಲ್ ಸಿಂಗ್ ರಕ್ತದ ವಾಂತಿ ಮಾಡಿಕೊಂಡು ಗಂಭೀರ ಸ್ಥಿತಿಯಲ್ಲಿ ಭಾನುವಾರ ಸಂಚೋರ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಯಶ್ಪಾಲ್ ಸಿಂಗ್ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬನೇ ಇದ್ದ, ತಕ್ಷಣವೇ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದು, ಅವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಎಕ್ಸ್ ರೇ ಯಲ್ಲಿ ಹೊಟ್ಟೆಯೊಳಗೆ ಲೋಹದ ವಸ್ತು ಪತ್ತೆ
ರಕ್ತ ವಾಂತಿ ಮಾಡಿಕೊಂಡಿದ್ದ ಯಶ್ಪಾಲ್ ಸಿಂಗ್ನ ಹೊಟ್ಟೆ, ತಲೆ ಮತ್ತು ಕುತ್ತಿಗೆ ಊದಿಕೊಂಡಿತ್ತು. ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆತಂದಾಗ ಆಮ್ಲಜನಕದ ಮಟ್ಟ 80 ಆಗಿತ್ತು. ಆತನ ಪರಿಸ್ಥಿತಿಯನ್ನು ಅರಿತ ವೈದ್ಯರು ತಕ್ಷಣವೇ ಎಕ್ಸ್ ರೇ ಮಾಡಿದಾಗ ವೈದ್ಯರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಆತನ ಹೊಟ್ಟೆಯೊಳಗೆ ಮೆಟಾಲ್ನಂತಹ ವಸ್ತುಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: Weird Marriage: ವೀಕೆಂಡ್ನಲ್ಲಿ ಮಾತ್ರ ಇವ್ರು ಗಂಡ-ಹೆಂಡತಿ, ಉಳಿದ ದಿನಗಳಲ್ಲಿ ಸಿಂಗಲ್ ಲೈಫ್!
56 ಬ್ಲೇಡ್ ಹೊರ ತೆಗೆದ ವೈದ್ಯರು
ಖಾಸಗಿ ಆಸ್ಪತ್ರೆಯ ವೈದ್ಯ ಡಾ. ನರಸಿ ರಾಮ್ ದೇವಸಿ ತಕ್ಷಣವೆ ರೋಗಿಗೆ ಎಕ್ಸ್ ರೇ ಮಾಡಿಸಿದ್ದು, ವರದಿಯಲ್ಲಿ ಲೋಹದ ವಸ್ತು ಪತ್ತೆಯಾಗಿದೆ. ಆದರೆ ಹೊಟ್ಟೆ ಒಳಗೆ ಇರುವುದು ಏನೆಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ವೈದ್ಯರು ಸೋನೋಗ್ರಫಿ (Sonography) ಮತ್ತು ಎಂಡೋಸ್ಕೋಪಿ (Endoscopy) ನಡೆಸಿದ್ದಾರೆ. ಇದರಿಂದ ವ್ಯಕ್ತಿಯ ಹೊಟ್ಟೆಯಲ್ಲಿ ಬ್ಲೇಡ್‍ಗಳಿವೆ ಎಂಬುದು ವೈದ್ಯರಿಗೆ ಪರೀಕ್ಷೆಯಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆದಿದ್ದಾರೆ.
ಬ್ಲೇಡ್ ತಿನ್ನುವಾಗ ನೋವಾಗಿಲ್ಲವೇಕೆ?
ಇನ್ನು ಬ್ಲೇಡ್ ತಿಂದರೂ ವ್ಯಕ್ತಿಗೆ ಯಾವುದೇ ನೋವಾಗದಿರುವ ಬಗ್ಗೆ ಪ್ರಶ್ನೆ ಮೂಡಬಹುದು. ಆದರೆ ಯಶ್ಪಾಲ್ ಸಿಂಗ್ ಕವರ್ ಸಮೇತ ಬ್ಲೇಡ್ಗಳನ್ನು ತಿಂದಿದ್ದಾನೆ ಎಂದು ವೈದ್ಯರು ಕಂಡುಕೊಂಡಿದ್ದಾರೆ. ಇದರಿಂದ ಆತನಿಗೆ ತಿನ್ನುವಾಗ ಯಾವುದೇ ನೋವು ಉಂಟಾಗಿಲ್ಲ. ಆದರೆ ಬ್ಲೇಡ್‌ನ ಪೇಪರ್ ಕರಗಿದಂತೆ ಆತನಿಗೆ ಸಮಸ್ಯೆ ಶುರುವಾಗಿದೆ. ಪರಿಣಾಮ ಹೊಟ್ಟೆಯೊಳಗೆ ಗ್ಯಾಸ್ ಉತ್ಪಾದನೆಯಾಗಿದ್ದು, ಆತನಿಗೆ ವಾಕರಿಕೆ ಬರಲು ಶುರುವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಚಿತ್ರ ಅಭ್ಯಾಸಕ್ಕೆ ಕಾರಣ?
ವರದಿಯ ಪ್ರಕಾರ ಸಾಮಾನ್ಯವಾಗಿ ಯಾವುದೇ ರೋಗಿ ತೀವ್ರವಾದ ಮಾನಸಿಕ ಖಿನ್ನತೆ ಅಥವಾ ಆತಂಕದಿಂದ ಬಳಲುತ್ತಿರುವಾಗ ಇಂತಹ ವಸ್ತುಗಳನ್ನು ನುಂಗಲು ಪ್ರಯತ್ನಿಸುತ್ತಾರೆ. ಇದೇ ಕಾರಣದಿಂದಲೂ ಯಶಪಾಲ್ ಸಿಂಗ್ ತಾನೇ ಬ್ಲೇಡ್‌ಗಳು ನುಂಗಿರಬಹುದು. ಈ ಹಿಂದೆ ಇದೇ ರೀತಿಯ ಘಟನೆ ಉತ್ತರ ಪ್ರದೇಶದ ಲಕ್ನೋದ ಬಲರಾಮ್ ಪುರ್ದಲ್ಲೂ ನಡೆದಿತ್ತು. 17 ವರ್ಷದ ಅಪ್ತಾಪ್ತ ವಯಸ್ಸಿನ ಹುಡುಗಿ ತನ್ನ ಕುದೂಲನ್ನು ತಿನ್ನುವ ವಿಚಿತ್ರ ನಡುವಳಿಕೆ ಹೊಂದಿದ್ದಳು. ಇದರ ಪರಿಣಾಮವಾಗಿ ಆಕೆ ಕಳೆದೆರಡು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ವೈದ್ಯರ ಬಳಿ ತೋರಿಸಿದಾಗ ಹೊಟ್ಟೆಯಲ್ಲಿ 2 ಕೆಜಿ ಕೂದಲು ಇರುವುದು ಪತ್ತೆಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ