ಬಹುತೇಕ ಜನರಲ್ಲಿ ಕೆಲವೊಂದು ಕೆಟ್ಟ ಅಭ್ಯಾಸಗಳು ಸಾಮಾನ್ಯವಾಗಿರುತ್ತದೆ. ಉಗುರು ಕಚ್ಚುವುದು. ತುಟಿ ಕಚ್ಚುವುದು. ಹೀಗೆ ನಾನಾ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ತಮಗೆ ಆತಂಕ, ಭಯ, ನೋವು ಹತಾಶೆ ಸಂದರ್ಭದಲ್ಲಿ ಈ ರೀತಿಯ ವರ್ತನೆಗಳು ಸಾಮಾನ್ಯವಾಗಿರುತ್ತದೆ. ಆದರೆ, ಇದೇ ಗೀಳಾಗಬಾರದು ಎಂಬುದು ವೈದ್ಯರ ಸಲಹೆ. ಇದೇ ರೀತಿಯ ವಿಚಿತ್ರ ನಡುವಳಿಕೆ ಪರಿಣಾಮ ಬಾಲಕಿಯೊಬ್ಬಳು ಬರೋಬ್ಬರಿ 2 ಕೆಜಿ ತಲೆ ಕೂದಲನ್ನು (eating hair) ತಿಂದಿರುವ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಆಕೆಯ ಹೊಟ್ಟೆಯಿಂದ 2 ಕೆಜಿ ಕೂದಲನ್ನು ಹೊರ ತೆಗೆದು ದಂಗಾಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋದ ( Lucknow) ಬಲ್ರಾಮ್ಪುರ್ನಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಅಪ್ತಾಪ್ತ ವಯಸ್ಸಿನ ಹುಡುಗಿ ಕುದೂಲನ್ನು ತಿನ್ನುವ ವಿಚಿತ್ರ ನಡುವಳಿಕೆ ಹೊಂದಿದ್ದಳು. ಇದರ ಪರಿಣಾಮವಾಗಿ ಈಕೆ ಕಳೆದೆರಡು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ದಿನೇ ದಿನೇ ತೆಳ್ಳಗಾಗುವುದರ ಜೊತೆಗೆ ಈಕೆಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದನ್ನು ಆಕೆಯ ಪೋಷಕರು ಗಮನಿಸಿದ್ದಾರೆ. ಕಳೆದ 10 ದಿನಗಳ ಹಿಂದೆ ಆಕೆ ವಿಪರೀತ ಹೊಟ್ಟೆ ನೋವಿಗೆ ತುತ್ತಾಗಿದ್ದಳು.
ಈ ಹಿನ್ನಲೆ ಆಕೆಯನ್ನು ಬಲ್ರಾಪುರ್ನ ಡಾ ಎಸ್ಆರ್ ಸಮದಾರ್ ಅವರ ಬಳಿ ಕರೆದೊಯ್ಯಲಾಗಿತ್ತು. ಹೊಟ್ಟೆ ನೋವಿಗೆ ಕಾರಣ ಪತ್ತೆ ಮಾಡಲು ಮುಂದಾದ ವೈದ್ಯರು ಆಕೆಯನ್ನು ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಉಂಡೆಯ ರೀತಿಯ ವಸ್ತು ಪತ್ತೆಯಾಗಿದೆ. ಮತ್ತೆ ಸಿಟಿ ಸ್ಕಾನ್ ಮಾಡಿದಾಗಲೂ ಆಕೆಯ ಹೊಟ್ಟೆಯಲ್ಲಿ ಉಂಡೆ ಕಂಡು ಬಂದಿದ್ದು, ಇದು ಏನು ಎಂಬ ಬಗ್ಗೆ ಸುಳಿವು ಸಿಗಲಿಲ್ಲ.
ಇದನ್ನು ಓದಿ: ಟೀಮ್ ಇಂಡಿಯಾ ತಂಡಕ್ಕೆ ಸ್ಪೂರ್ತಿ ತುಂಬಿದ ಕ್ರಿಕೆಟಿಗರ ಪತ್ನಿಯರು
ನಂತರ ಎಂಡೋಸ್ಕೋಪಿ ಮಾಡಿದಾಗ ಕೂದಲಿನ ರಾಶಿಯ ಉಂಡೆ ಎಂಬುದು ಸ್ಪಷ್ಟವಾಗಿದ್ದು, ಇದು ಸುಮಾರು ತೂಕ ಇರುವುದು ಪತ್ತೆಯಾಗಿದೆ. ಹೊಟ್ಟೆಯಲ್ಲಿ 20 ಸೆ.ಮೀ ಉಂಡೆ ಕಂಡು ವೈದ್ಯರು ಕೂಡ ಶಾಕ್ ಆದರು.
ಈ ವೇಳೆ ಆಕೆಯನ್ನು ಸಮಾಲೋಚನೆಗೆ ಒಳಪಡಿಸಿದಾಗ ಬಾಲಕಿ ಹುಟ್ಟಿನಿಂದಲೇ ಮಾನಸಿಕ ತೊಂದರೆಗೆ ಒಳಗಾಗಿರುವುದು ಪತ್ತೆಯಾಗಿದೆ. ಆಕೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದು, ಕೂದಲನ್ನು ಸಂಪೂರ್ಣ ಹೊರತೆಗೆಯಲಾಗಿದೆ. ಬಳಿಕ ಆಕೆಯ ಹೊಟ್ಟೆ ನೋವು ಕಡಿಮೆಯಾಗಿದೆ.
ಇದನ್ನು ಓದಿ: ಮುಂಗಾರು ಮಳೆಯ ಕೊರತೆ ನೀಗಿಸುವ ಸೆಪ್ಟೆಂಬರ್ ಮಳೆಯತ್ತ ಈಗ ಎಲ್ಲರ ಚಿತ್ತ !
ಪ್ರತಿನಿತ್ಯ ಆಕೆ ತನ್ನ ಕೂದಲನ್ನೇ ಕಿತ್ತು ಕಿತ್ತು ತಿನ್ನುತ್ತಿದ್ದರ ಪರಿಣಾಮ ಆಕೆ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆ ತಿಂದ ಕೂದಲು ಎಲ್ಲಾ ಹೊಟ್ಟೆಯಲ್ಲಿ ಶೇಖರಣೆ ಆಗಿ ಗಂಟು ಕಟ್ಟಿಕೊಂಡಿದೆ. ಇದರ ಪರಿಣಾಮ ಹೊಟ್ಟೆಯಿಂದ ಸಣ್ಣ ಕರುಳಿಗೆ ಹೋಗುವ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಇದರಿಂದಾಗಿ ಬಾಲಕಿ ಏನನ್ನು ಸೇವಿಸಲಾಗುತ್ತಿರಲಿಲ್ಲ. ಇದೇ ಕಾರಣದಿಂದ ಆಕೆ ಸಂಪೂರ್ಣವಾಗಿ ತೂಕ ಕಳೆದುಕೊಂಡು 32 ಕೆಜಿ ಆಗಿದ್ದಳು.
ಕೂದಲು ನಮ್ಮ ದೇಹದಲ್ಲಿ ಕರಗುವುದಿಲ್ಲ. ಅದು ವರ್ಷನುಗಳ ಕಾಲ ಹೊಟ್ಟೆಯಲ್ಲಿ ಹಾಗೇ ಶೇಖರಣೆಗೊಂಡು ಸಮಸ್ಯೆಗೆ ಕಾರಣವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಟ್ರೈಕೋಬೆಜೋವರ್ (trichobezoar) ಕಾಯಿಲೆ ಎನ್ನಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ