ಏಮ್ಸ್​ ಅಗ್ನಿ ಅನಾಹುತದ ನಡುವೆಯೇ ಮುದ್ದಾದ ಮಗುವಿಗೆ ಹೆರಿಗೆ ಮಾಡಿಸಿದ್ದ ವೈದ್ಯರು!

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಈ ಅಗ್ನಿ ಅನಾಹುತದ ನಡುವೆಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇಂತಹ ಕಷ್ಟದ ಸಂದರ್ಭದಲ್ಲಿಯೂ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Seema.R | news18-kannada
Updated:August 21, 2019, 10:18 AM IST
ಏಮ್ಸ್​ ಅಗ್ನಿ ಅನಾಹುತದ ನಡುವೆಯೇ ಮುದ್ದಾದ ಮಗುವಿಗೆ ಹೆರಿಗೆ ಮಾಡಿಸಿದ್ದ ವೈದ್ಯರು!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಆ.20): ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಶನಿವಾರ ಸಂಜೆ ದೆಹಲಿಯ ಏಮ್ಸ್​ನ ತುರ್ತು ನಿಗಾ ಕಟ್ಟಡದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಸದಾ ರೋಗಿಗಳಿಂದ ತುಂಬಿರುವ ಈ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ ಎಲ್ಲರಲ್ಲಿಯೂ ಆಂತಕ ಮೂಡಿಸಿತು.

ಈ ಘಟನೆ ನಡೆದ ಕ್ಷಣಾರ್ಥದಲ್ಲಿ 34ಕ್ಕೂ ಹೆಚ್ಚು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ, ಕಾರ್ಯಪ್ರವೃತ್ತರಾದರು. ಈ ಅವಘಡ ನಡೆದ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಅರುಣ್​ಜೇಟ್ಲಿ ಕೂಡ ಇಲ್ಲಿಯೇ ಇದ್ದರು. ರೋಗಿಗಳ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದ ವೇಳೆಯೇ ಇಲ್ಲಿನ ಕೊಠಡಿಯೊಂದರಲ್ಲಿ ವೈದ್ಯರು ಮಹಿಳೆಗೆ ಹೆರಿಗೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಈ ಅಗ್ನಿ ಅನಾಹುತದ ನಡುವೆಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇಂತಹ ಕಷ್ಟದ ಸಂದರ್ಭದಲ್ಲಿಯೂ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ: ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರತಿನಿತ್ಯ 18ಕಿ.ಮೀ ಕುದುರೆ ಸವಾರಿ; ಈ ಶಿಕ್ಷಕನ ಕಾರ್ಯಕ್ಕೊಂದು ಸಲಾಂ!

ಇನ್ನು ಈ ಕುರಿತು ಮಾತನಾಡಿದ ವೈದ್ಯರು, ಮಹಿಳೆ ನೋವಿನಿಂದ ನರಳುತ್ತಿದ್ದಾಗ, ಅವಳಿಗೆ ಹೆರಿಗೆ ಮಾಡಿಸುವುದು ನಮ್ಮ ಕರ್ತವ್ಯ ಸಂಜೆ 5 ಗಂಟೆಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯಿಂದಾಗಿ  ಆಂತಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಏಮ್ಸ್​ ಭಾರತದಲ್ಲಿಯೇ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿರುವುದರಿಂದ ಶಸ್ತ್ರಚಿಕಿತ್ಸೆಗೆ ಬೇಕಾದ ಸಾಮಾಗ್ರಿಗಳನ್ನು ಜೋಡಿಸಿಕೊಂಡು ನಮ್ಮ ಕರ್ತವ್ಯ ನಿರ್ವಹಿಸಿದೆವು. 9.30ರ ಸುಮಾರಿಗೆ ಮಹಿಳೆಗೆ ಹೆರಿಗೆ ಮಾಡಿಸಿದೆವು ಎನ್ನುತ್ತಾರೆ ಇಲ್ಲಿನ ಸ್ತ್ರೀ ರೋಗ ತಜ್ಞರು.

First published: August 20, 2019, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading