Nude Doctor: ಅರೆ ಬೆತ್ತಲೆಯಲ್ಲಿ ವೈದ್ಯ! ನಟಿಯ ರೋಗ ವಾಸಿ ಮಾಡುವುದಾಗಿ ಹೇಳಿ ಮಂಚವೇರಿ ಸಿಕ್ಕಿಬಿದ್ದ!

Nude Doctor: ಖ್ಯಾತ ನಟಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಆಕೆಯ ಅನಾರೋಗ್ಯವನ್ನು ಗುಣಪಡಿಸುವುದಾಗಿ ಹೇಳಿ ಹೋಟೆಲ್ ಕೊಠಡಿಯಲ್ಲಿ ಅರೆಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ವೈರಲ್​ ಆಗಿದೆ ಕೊನೆಗೆ ಜಿಯೋವಾನಿ ಮಿನಿಯೆಲ್ಲೋ ವೈದ್ಯ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದಿದೆ.

ಜಿಯೋವಾನಿ ಮಿನಿಯೆಲ್ಲೋ

ಜಿಯೋವಾನಿ ಮಿನಿಯೆಲ್ಲೋ

 • Share this:
  ‘‘ವೈದ್ಯೋ ನಾರಾಯಣ ಹರಿ’’ ಎಂಬ ಮಾತಿದೆ. ಅಂದರೆ ವೈದ್ಯರು (Doctor) ದೇವರಿಗೆ ಸಮಾನರು ಎಂಬ ಅರ್ಥ. ರೋಗಿಯನ್ನು ಮತ್ತೆ ಆರೋಗ್ಯವಂತನಾಗಿ ಮಾಡುವ ಕೆಲಸವನ್ನು ಮಾಡುವ ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಸಾಕಷ್ಟು ಜನರ ಜೀವ ಉಳಿಸಿದ ಅದರಲ್ಲೂ ಭಯಾನಕ ಕಾಯಿಲೆಗಳಿಗೆ ತುತ್ತಾಗಿ ಸಾವಿನ ಕದ ತಟ್ಟಿದ ಅನೇಕರನ್ನು ವೈದ್ಯರು ತಮ್ಮ ಕೈಯಲ್ಲಾದ ಸಹಾಯದ ಮೂಲಕ ಬದುಕಿಸಿ ಅವರಿಗೆ ಮತ್ತೊಂದು ಜೀವ ನೀಡುವ ಕೆಲಸ ಮಾಡುತ್ತಾರೆ. ಹಾಗಾಗಿ ವೈದ್ಯೋ ನಾರಾಯಣ ಹರಿ ಎಂದು ಅವರನ್ನು ಕರೆಯುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ರೋಗ ವಾಸಿಮಾಡುತ್ತೇನೆಂದ ನೆಪವೊಡ್ಡಿ. ನಟಿಯ ಜೊತೆಗೆ ಸೆಕ್ಸ್ (Sex)​ ಮಾಡುವ ಮೂಲಕ ಸಿಕ್ಕಿ ಬಿದ್ದಿದ್ದಾನೆ. ಆತನ ಈ ಕೃತ್ಯ ವೈದ್ಯ ಹುದ್ದೆಗೆ ನಾಚಿಕೆ ಬರಿಸುವಂತೆ ಮಾಡಿದೆ. ಅದರಲ್ಲೂ ಆತ ನೀಡಿದ ಕಾರಣವಂತೂ ಬಹುತೇಕರಿಗೆ ಅಚ್ಚರಿಯನ್ನುಂಟು ಮಾಡಿದೆ.

  ಇಟಲಿ ಮೂಲದ ವೈದ್ಯ ಡಾ. ಜಿಯೋವಾನಿ ಮಿನಿಯೆಲ್ಲೋ ತಮ್ಮ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಖ್ಯಾತ ನಟಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಆಕೆಯ ಅನಾರೋಗ್ಯವನ್ನು ಗುಣಪಡಿಸುವುದಾಗಿ ಹೇಳಿ ಹೋಟೆಲ್ ಕೊಠಡಿಯಲ್ಲಿ ಅರೆಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ವೈರಲ್​ ಆಗಿದೆ ಕೊನೆಗೆ ಜಿಯೋವಾನಿ ಮಿನಿಯೆಲ್ಲೋ ವೈದ್ಯ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದಿದೆ.

  ಸೆಕ್ಸ್​ ಮಾಡಿದ್ರೆ ರೋಗ ವಾಸಿಯಾಗುತ್ತೆ!

  ಅಚ್ಚರಿಯ ವಿಚಾರವೆಂದರೆ, ಜಿಯೋವಾನಿ ಮಿನಿಯೆಲ್ಲೋ ಲೈಂಗಿಕ ಸಂಪರ್ಕದ ಮೂಲಕ ರೋಗಗಳನ್ನು ಗುಣಪಡಿಸುವ ಹೊಸ ವಿಧಾನವನ್ನು ತಾನು ಸಂಶೋಧಿಸುತ್ತಿದ್ದೇನೆ ಎಂದು ನಟಿಯ ಜೊತೆಗೆ ಹೋಟೆಲ್​ ಕೋಣೆಯಲ್ಲಿ ಸೆಕ್ಸ್​ ಮಾಡಿದ್ದಾನೆ. ಈ ವೇಳೆ ಅರೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದಾರೆ.

  ಸ್ಟಿಂಗ್ ಆಪರೇಷನ್​ನಿಂದ ಅರೆ ಬೆತ್ತಲೆಯಾಗಿ ಸಿಕ್ಕಿ ಬಿದ್ದ ವೈದ್ಯ

  ಡಾ. ಜಿಯೋವಾನಿ ಮಿನಿಯೆಲ್ಲೋ ಅವರಿಗೆ 60 ವರ್ಷ. ಇಟಲಿಯ ಬರಿಯಲ್ಲಿ ಸ್ತ್ರೀರೋಗತಜ್ಞರಾಗಿ ಕೆಲಸ ಮಾಡುತ್ತಿದ್ದರು. ಆದರೆ ಇವರ ವಿಚಿತ್ರ ಚಿಕಿತ್ಸೆ ಮತ್ತು ಸೆಕ್ಸ್​ ವಿಚಾರದ ವಾಸನೆಯೊಂದು ಪತ್ರಕರ್ತರ ಮೂಗಿಗೆ ಬಡಿದಿತ್ತು. ನಂತರ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಕುಟುಕು ಕಾರ್ಯಾಚರಣೆ ನಡೆಸಿ ವೈದ್ಯ ಜಿಯೋವಾನಿ ಮಿನಿಯೆಲ್ಲೋ ಅನ್ನು ಮಂಚದಲ್ಲೇ ಇರುವಾಗಲೇ ಹಿಡಿದಿದ್ದಾರೆ.  ನಟಿಯೊಂದಿಗೆ ಮಂಚವೇರಿದ್ದ ವೈದ್ಯ

  ವಾಸ್ತವವಾಗಿ, ವೃತ್ತಿಪರ ನಟಿಯೊಬ್ಬಳು ಚಿಕಿತ್ಸೆಗಾಗಿ ವೈದ್ಯರ ಬಳಿ ಬಂದಿದ್ದಳು. ರೋಗಿಯನ್ನು ಪರೀಕ್ಷಿಸಿದ ವೈದ್ಯ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಅನ್ನು ನೀವು ಹೊಂದಿದ್ದೀರಿ ಎಂದಿದ್ದರು. ಇದು ಲೈಂಗಿಕವಾಗಿ ಹರಡುವ ವೈರಸ್ ಮತ್ತು ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಹೇಳಿದರು.

  ಇದನ್ನು ಓದಿ: Mobile Phone Rules: ಇನ್ನೊಬ್ಬರ ಫೋನ್ ಮುಟ್ಟಿದ್ರೆ ಜೈಲು, ಮೊಬೈಲ್ ಫೋನ್ ಬಳಸಲು ಹೊಸಾ ರೂಲ್ಸ್

  ಡೈಲಿ ಮೇಲ್​ ಪ್ರಕಾರ, ಟಿವಿ ಚಾನೆಲ್ ವೃತ್ತಿಪರ ನಟಿಯನ್ನು ನೇಮಿಸಿ ರೋಗಿಯಾಗಿ ಕಳುಹಿಸಿದೆ ಮತ್ತು ವೈದ್ಯರು ನಟಿಯನ್ನು ಕಂಡು ಆಕೆಗೆ ಸುಮ್ಮನೆ ರೋಗ ಲಕ್ಷಣವಿದೆ ಎಂದು ಹೇಳಿ ಮಂಚವೇರಲು ಯೋಜನೆ ಹಾಕಿದ್ದರು. ಆದರೆ, ನಟಿಯನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸಿದಾ ಆಕೆಯ ವರದಿ ನೆಗೆಟಿವ್ ಬಂದಿದೆ.  ನಟಿಗೆ ಸೆಕ್ಸ್ ಆಫರ್ ನೀಡಲಾಗಿದೆ

  ಡಾ. ಜಿಯೋವಾನಿ ಮಿನೆಲ್ಲೋ ನಟಿಯು ರಹಸ್ಯ ಕಾಯಿಲೆಯಿಂದ ಬಳಲುತ್ತಿದ್ದಳು ಎಂದಿದ್ದಾರೆ. ಆ ರೋಗವನ್ನು ತೊಡೆದುಹಾಕಲು ಆಕೆಗೆ ಲಸಿಕೆ ಅಗತ್ಯವಿದೆ ಎಂದು ಹೇಳಿದರು. ಮಾತ್ರವಲ್ಲದೆ ಲಸಿಕೆ ನಟಿ ದೇಹವನ್ನು ಪ್ರವೇಶಿಸಬೇಕಾದರೆ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಬೇಕು ಆಗ ಮಾತ್ರ ರೋಗ ಲಕ್ಷಣ ಕಡಿಮೆಯಾಗುತ್ತದೆ ಎಂದಿದ್ದರು. ಅದಕ್ಕೆ ನಟಿ ಓಕೆ ಎಂದು ಹೋಟೆಲ್​ ಒಂದರಲ್ಲಿ ಭೇಟಿ ಮಾಡುವುದರ ಜೊತೆಗೆ ಸೆಕ್ಸ್​ ಮಾಡಲು ಒಪ್ಪಿಕೊಂಡರು.

  ಇದನ್ನು ಓದಿ: Dolphin Lover: ಹೆಣ್ಣು ಡಾಲ್ಫಿನ್ ಜೊತೆಗೆ ಸಂಬಂಧದಲ್ಲಿದ್ದ 63 ವರ್ಷದ ವ್ಯಕ್ತಿ! ಮುಂದೇನಾಯ್ತು ಗೊತ್ತಾ?  ನೂರಾರು ಮಹಿಳೆಯರ ಜೊತೆ ವೈದ್ಯ ಜಿಯೋವಾನಿ ಮಿನಿಯೆಲ್ಲೋ ಸೆಕ್ಸ್​ ಮಾಡಿದ್ದಾರೆ

  ಸಿಕ್ಕಿಬಿದ್ದ ನಂತರ ವೈದ್ಯ ತಮ್ಮ ವಕೀಲರ ಮೂಲಕ ಹೇಳಿಕೆ ನೀಡಿದ್ದಾರೆ. 'ನಾನು 40 ವರ್ಷಗಳ ವೃತ್ತಿಜೀವನದಲ್ಲಿ ನೂರಾರು ಮಹಿಳೆಯರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದೇನೆ ಮತ್ತು ಈ ಪರ್ಯಾಯ ಚಿಕಿತ್ಸೆಯು ಉತ್ತಮ ಫಲಿತಾಂಶವನ್ನು ನೀಡಿದೆ' ಎಂದು ವೈದ್ಯರು ಹೇಳಿದರು. ತನಿಖೆಯ ನಂತರ ಇನ್ನೂ 15 ಮಹಿಳೆಯರು ವೈದ್ಯರ ಮೋಸದ ಚಿಕಿತ್ಸೆಗೆ ಬಲಿಯಾಗರುವುದನ್ನು ಒಪ್ಪಿಕೊಂಡಿದ್ದಾರೆ. ಚಿಕಿತ್ಸೆಯ ಹೆಸರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೆ ದೂರು ದಾಖಲಿಸಿದ್ದಾರೆ. ಇದೀಗ ಆರೋಪಿ ವೈದ್ಯನ ವಿರುದ್ಧ ಸರ್ಕಾರ ತನಿಖೆಗೆ ಆದೇಶಿಸಿದೆ.
  First published: