ಲಕ್ನೋ: ಆಪರೇಷನ್ (Operation) ಮಾಡುವಾಗ ವೈದ್ಯರ (Doctor) ಮೈಯಲ್ಲಾ ಕಣ್ಣಾಗಿರಬೇಕು, ಏಕೆಂದರೆ ಕೊಂಚ ಹೆಚ್ಚು-ಕಡಿಮೆಯಾದರೂ ರೋಗಿಯ (Patient) ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಎಷ್ಟೋ ಮಂದಿ ವೈದ್ಯರನ್ನು ಪ್ರಾಣ ಉಳಿಸುವ ದೇವರೆಂದು ಕರೆಯುತ್ತಾರೆ. ಆದರೆ ಅಂತಹ ವೈದ್ಯರೇ ಒಮ್ಮೆ ಮೈ ಮೇಲೆ ಪ್ರಜ್ಞೆಯಿಲ್ಲದಂತೆ ವರ್ತಿಸಿದರೆ, ರೋಗಿಗಳು ಜೀವವನ್ನೆ ಕಳೆದುಕೊಳ್ಳಬೇಕಾಗಿರುತ್ತದೆ. ಇಲ್ಲ ಜೀವನ ಪೂರ್ತಿ ನರಳಾಡ ಬೇಕಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ (Pregnant) ಆಪರೇಷನ್ ಮಾಡಿದ ವೈದ್ಯರು ಈ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಟವೆಲ್ (Towel) ಬಿಟ್ಟು ಯಡವಟ್ಟು ಮಾಡಿರುವ ಘಟನೆ ಉತ್ತರ ಪ್ರದೇಶದ (Uttarpradesh) ಅಮ್ರೋಹಾದ (Operation) ಬನ್ಸ್ ಖೇರಿ ಗ್ರಾಮದಲ್ಲಿ (Bans Kheri Village) ನಡೆದಿದೆ. ಇದೀಗ ಈ ಸಂಬಂಧ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಟವೆಲ್ ಬಿಟ್ಟ ವೈದ್ಯರು
ಈ ಕುರಿತಂತೆ ಪ್ರತಿಕ್ರಿಯಿಸಿದ ರಾಜೀವ್ ಸಿಂಘಾಲ್ ಅವರು, ಅಮ್ರೋಹಾದ ನೌಗಾವಾನಾ ಸಾದತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಸೈಫೀ ನರ್ಸಿಂಗ್ ಹೋಮ್ ನಡೆಸಲಾಗುತ್ತಿದೆ. ನಜ್ರಾನಾ ಎಂಬ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಹೊಟ್ಟೆಯಲ್ಲಿ ವೈದ್ಯರು ಟವೆಲ್ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ದಿನಗಳ ಕಾಲ ಮತ್ತೆ ಮಹಿಳೆ ಆಸ್ಪತ್ರೆಗೆ ದಾಖಲು
ವೈದ್ಯರ ನಿರ್ಲಕ್ಷ್ಯದಿಂದ ಟವೆಲ್ ನಜ್ರಾನಾ ಅವರ ಹೊಟ್ಟೆಯೊಳಗೆ ಉಳಿದುಕೊಂಡಿತ್ತು. ನಂತ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಈ ಬಗ್ಗೆ ಪತಿಯ ಬಳಿ ಹೇಳಿಕೊಂಡಳು. ಹೀಗಾಗಿ 5 ದಿನಗಳ ಕಾಲ ಮತ್ತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಮಹಿಳೆಗೆ ಆಪರೇಷನ್ ಮಾಡಿ ಟವೆಲ್ ತೆಗೆದ ವೈದ್ಯರು
ಮೊದಲಿಗೆ ಹೊರಗೆ ಚಳಿ ಹೆಚ್ಚಾಗಿದ್ದರಿಂದ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ ಹೆರಿಗೆ ನಂತರ ಮನೆಗೆ ಬಂದ ಮೇಲೂ ಮಹಿಳೆಯ ಆರೋಗ್ಯ ಸುಧಾರಿಸದೇ ಇದ್ದಾಗ ಪತಿ ಶಂಶೇರ್, ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಆಕೆಯ ಹೊಟ್ಟೆಯನ್ನು ಪರೀಕ್ಷೆಸಿದಾಗ ಟವೆಲ್ ಇರುವುದು ಪತ್ತೆಯಾಗಿ, ಇದೀಗ ಮಹಿಳೆಗೆ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಟವೆಲ್ ಹೊರಗೆ ತೆಗೆಯಲಾಗಿದೆ.
ಸದ್ಯ ಖಾಸಗಿ ಆಸ್ಪತ್ರೆಯ ವೈದ್ಯ ಮತ್ಲೂಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜೀವ್ ಸಿಂಘಾಲ್ ಸೂಚಿಸಿದ್ದು, ನಾನು ಘಟನೆಯ ಬಗ್ಗೆ ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡೆ ಮತ್ತು ಈ ಬಗ್ಗೆ ಪರಿಶೀಲನೆ ನಡೆಸಲು ನೋಡಲ್ ಅಧಿಕಾರಿ ಡಾ.ಶರದ್ ಅವರನ್ನು ಕೇಳಿದ್ದೇನೆ. ತನಿಖೆ ಪೂರ್ಣಗೊಂಡ ನಂತರವಷ್ಟೇ ಈ ಬಗ್ಗೆ ನಾವು ಹೆಚ್ಚಿನ ವಿವರಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಮಹಿಳೆಯ ಪತಿ ಶಂಶೇರ್ ಅಲಿ ಇಲ್ಲಿಯವರೆಗೂ ಯಾವುದೇ ಲಿಖಿತ ದೂರು ನೀಡಿಲ್ಲ, ಹೀಗಿದ್ದರೂ ತನಿಖೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಈ ಮುನ್ನ ವಿಜಯಪುರದಲ್ಲಿ ವೈದ್ಯರ ಎಡವಟ್ಟು
ಈ ಮುನ್ನ ರಾಜ್ಯದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗೆ ಸಿಜೇರಿಯನ್ ನಂತರ ಹಾಕಿದ ಹೊಲಿಗೆಗಳು ಎರಡು ಗಂಟೆಯಲ್ಲಿಯೇ ಬಿಚ್ಚಿ ಹೋಗಿ ಬಾಣಂತಿಯರು ಪರದಾಡುವಂತಾಗಿತ್ತು.
ಇದನ್ನೂ ಓದಿ: Hospital: ಇದು ಹೆಸರಿಗೆ ಮಾತ್ರ ಜಿಲ್ಲಾಸ್ಪತ್ರೆ; ಆದ್ರೆ ಬಾಣಂತಿಯರಿಗೆ ಬೆಡ್ ಸಿಗಲ್ಲ, ಬಿಸಿ ನೀರು ಕೊಡಲ್ಲ!
25ಕ್ಕೂ ಹೆಚ್ಚು ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿಹೋಗಿತ್ತು. ಅಲ್ಲದೇ ಹಲವರಿಗೆ ಹೊಲಿಗೆ ಬಿಚ್ಚಿದ ಕಾರಣ ರಕ್ತಸ್ರಾವವಾಗಿ ಸೋಂಕಾಗಿತ್ತು. ಇನ್ನು ಬಾಣಂತಿಯರಿಗೆ ನೀಡುವ ಇಂಜೆಕ್ಷನ್, ಮಾತ್ರೆ ಸೇರಿದಂತೆ ಸರಿಯಾಗಿ ತಪಾಸಣೆ ಕೂಡ ಮಾಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪ ಹೇಳಿಬಂದಿತ್ತು. ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿ ಮೂರ್ನಾಲ್ಕು ದಿನಗಳು ಕಳೆದರೂ ಅವರಿಗೆ ಮರಳಿ ಹೊಲಿಗೆ ಹಾಕದೆ ವೈದ್ಯರು ಅಸಡ್ಡೆ ತೋರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ