ಪ್ರತಿದಿನ ಒಂದಲ್ಲಿ ಒಂದು ವಿಡಿಯೋ(Video)ಗಳು ಇಂಟರ್ನೆಟ್(Internet)ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈದ್ಯ(Doctor)ರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಸು(Cow)ವನ್ನು ನಮ್ಮ ದೇಶದಲ್ಲಿ ಗೋ ಮಾತೆ ಎಂದು ಪೂಜೆ ಮಾಡಲಾಗುತ್ತೆ. ಹಸುವಿನ ಬಾಲದಲ್ಲೇ ಮುಕ್ಕೋಟಿ ದೇವರು(God) ನೆಲಸಿದ್ದಾರೆ ಎಂಬ ನಂಬಿಕೆ ನಮ್ಮದು. ಹಸು ಗೋ ಮೂತ್ರ ಹಾಗೂ ಅದರ ಸಗಣಿ(Dung)ಯಿಂದಲೂ ನೂರಾರು ಪ್ರಯೋಜನಗಳಿಗೆ. ಹಸುವಿನ ಮೂತ್ರವನ್ನು ಪರಿಶುದ್ಧ ಎಂದು ಹೇಳಲಾಗುತ್ತೆ. ತಟ್ಟಿದರೆ ಬೆರಣಿಯಾಗುವೆ, ಸುಟ್ಟರೆ ಬೂದಿಯಾದೆ ಎಂಬ ಮಾತು ಕೇಳಿರುತ್ತೀರ. ಅದು ನಿಜ, ಹಸುವಿನ ಗೋ ಮೂತ್ರ ಸೇವಿಸಿದರೆ ಯಾವುದೇ ಕಾಯಿಲೆ(Disease) ನಿಮ್ಮ ಹತ್ರ ಸುಳಿಯಲ್ಲ ಎಂದು ನಮ್ಮ ಹಿರಿಯರು ಹೇಳುತ್ತಿದ್ದನ್ನು ನಾವು ಕೇಳಿದ್ದೇವೆ. ಅದರೆ ಇಲ್ಲೊಬ್ಬ ವೈದ್ಯ ಸ್ವತಃ ಕ್ಯಾಮರಾ(Camera) ಮುಂದೆ ಸಗಣಿ ತಿಂದು ಅದರ ಮಹತ್ವವನ್ನು ಸಾರಿದ್ದಾರೆ. ಕೆಲ ವೈದ್ಯರು ತಾವು ಕೊಡುವ ಮಾತ್ರೆ(Tablets)ಗಳಿಂದ ಮಾತ್ರ ರೋಗಗಳು ದೂರವಾಗುತ್ತೆ ಎಂಬ ಕಾಲದಲ್ಲಿ, ಇಲ್ಲೊಬ್ಬ ವೈದ್ಯ ಹಸು ಸಗಣಿ ತಿಂದು ಅದರ ಮಹತ್ವ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಾರ್ಮಲ್ ಡೆಲಿವರಿಗಾಗಿ ಸಗಣಿ ತಿನ್ನಿ ಎಂದ ವೈದ್ಯ
ಹೌದು, ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಡಾ ಮನೋಜ್ ಮಿತ್ತಲ್ ಎಂಬುವವರು ಹಸುವಿನ ಸಗಣಿ ತಿನ್ನುವುದನ್ನು ಕಾಣಬಹುದು. ತಮ್ಮ ಟ್ವಿಟರ್ ಪ್ರೊಫೈಲ್ನಲ್ಲಿ, ಅವರು MBBS MD ಮತ್ತು ಹರಿಯಾಣದ ಕರ್ನಾಲ್ನಲ್ಲಿ ಮಕ್ಕಳ ತಜ್ಞರು ಎಂದು ಉಲ್ಲೇಖಿಸಿದ್ದಾರೆ. ಮೊದಲಿಗೆ ಹಸುವಿನ ಸಗಣಿ ತಿಂದು ಅದನ್ನು ವೈದ್ಯ ಎಂಜಾಯ್ ಮಾಡುತ್ತಾನೆ. ಬಳಿಕ ಗೋಮೂತ್ರದ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿದ್ದಾರೆ. ಗೋ ಮೂತ್ರ ಕುಡಿದರೆ ಅನೇಕ ಗಂಭೀರ ಕಾಯಿಲೆಗಳು ದೂರವಾಗುತ್ತೆ. ಇನ್ನು ಹೆಂಗಸರು ನಾರ್ಮಲ್ ಡೆಲಿವರಿ ಆಗಬೇಕಾದರೆ ಹಸುವಿನ ಸಗಣಿ ತಿನ್ನಬೇಕು ಇದನ್ನು ತಿಂದರೆ ಸಿಸೇರಿಯನ್ ಗೆ ಹೋಗಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
Dr. Manoj Mittal MBBS MD's prescription. Via @ColdCigar pic.twitter.com/SW2oz5ao0v https://t.co/Gzww80KiSs
— Rofl Gandhi 2.0 🚜🏹 (@RoflGandhi_) November 16, 2021
ಇನ್ನೂ ಆ ವೈದ್ಯ ‘ಗೋವಿನಿಂದ ಸಿಗುವ ಪಂಚಗವ್ಯದ ಪ್ರತಿಯೊಂದು ಭಾಗವೂ ಮನುಕುಲಕ್ಕೆ ಅತ್ಯಮೂಲ್ಯವಾದದ್ದು’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನೋಡಿ, ಗೋವಿನ ಸಗಣಿ ತಿಂದರೆ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಅದು ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಎಂದ ವೈದ್ಯರು ಹೇಳಿದ್ದಾರೆ.
Dr Manoj mittal MBBS MD pic.twitter.com/NEEDS0zwlc
— Dr Manoj Mittal (@DrMANOJMittal2) June 27, 2020
ವೈದ್ಯರನ್ನು ಅಪಹಾಸ್ಯ ಮಾಡಿದ ನೆಟ್ಟಿಗರು
ವೈದ್ಯರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಜನರು ನಾನಾ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರು ಹೇಳುತ್ತಿರುವುದನ್ನು ಕೆಲವರು ಮಾತ್ರ ಒಪ್ಪಿದರೆ, ಹೆಚ್ಚಿನ ಜನರು ಅವರ ವೈದ್ಯರ ಪದವಿಯನ್ನು ಪ್ರಶ್ನಿಸಿದ್ದಾರೆ. ಅವರನ್ನು ಅಪಹಾಸ್ಯ ಮಾಡಿದರು. ವೈದ್ಯಕೀಯ ಮಂಡಳಿಯು ಇದನ್ನು ಗಮನಿಸಬೇಕು ಮತ್ತು ವೈದ್ಯಕೀಯ ವೃತ್ತಿಯನ್ನು ಅಭ್ಯಾಸ ಮಾಡಲು ಅವರ ಪರವಾನಗಿಯನ್ನು ರದ್ದುಗೊಳಿಸಬೇಕು. ಮಕ್ಕಳ ವೈದ್ಯರಾಗಿ, ಅವರು ಚಿಕ್ಕ ಮುಗ್ಧ ಮಕ್ಕಳಿಗೆ ಸಗಣಿ ತಿ್ನಿ ಎಂದು ಶಿಫಾರಸು ಮಾಡಬಾರದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ.
ಇದನ್ನು ಓದಿ : ನಾಲ್ಕು ಕಿವಿಗಳ ಬೆಕ್ಕನ್ನು ಎಂದಾದರೂ ಕಂಡಿದ್ದೀರಾ? ಇಲ್ಲಿದೆ ನೋಡಿ!
ಇನ್ನೂ ಅನೇಕ ನೆಟ್ಟಿಗರು ವೈದ್ಯರ ಈ ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಒಬ್ಬ ವೈದ್ಯರಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತ ಇದ್ದೀರಾ. ನಿಮ್ಮನ್ನು ನಂಬಿ ಸಗಣಿ ತಿಂದರೆ, ಹೆಚ್ಚು ಕಡಿಮೆ ಆಗುತ್ತೆ ಯಾರೂ ಇದನ್ನು ಟ್ರೈ ಮಾಡಬೇಡಿ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ