ವೈದ್ಯರ ರಕ್ಷಣೆಗೆ 10 ಭದ್ರತಾ ಅಂಶಗಳಿಗೆ ಸಮ್ಮತಿ ಸೂಚಿಸಿದ ಸಿಎಂ ಮಮತಾ ಬ್ಯಾನರ್ಜಿ

24 ಕಿರಿಯ ವೈದ್ಯರ ಜೊತೆ ನೇರ ಪ್ರಸಾರದ ಮೂಲಕ ಇಂದು ವೈದ್ಯರೊಂದಿಗೆ ಸಭೆ ನಡೆಸಿದ ದೀದಿ, ಆಸ್ಪತ್ರೆಗಳಲ್ಲಿ ರೋಗಿಗಳು ವೈದ್ಯರ ನಡೆಸುವ ಹಲ್ಲೆ ತಡೆಗಟ್ಟಿ ರಕ್ಷಣೆ ಒದಗಿಸಲು 10 ಭದ್ರತಾ ಅಂಶಗಳ ಸಲಹೆಗೆ ಸಮ್ಮತಿ ಸೂಚಿಸಿದರು.

Seema.R | news18
Updated:June 17, 2019, 6:35 PM IST
ವೈದ್ಯರ ರಕ್ಷಣೆಗೆ 10  ಭದ್ರತಾ ಅಂಶಗಳಿಗೆ ಸಮ್ಮತಿ ಸೂಚಿಸಿದ ಸಿಎಂ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
  • News18
  • Last Updated: June 17, 2019, 6:35 PM IST
  • Share this:
ಕೊಲ್ಕತ್ತಾ (ಜೂ.17):  ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಷ್ಕರ ನಡೆಸುತ್ತಿರುವ ವೈದ್ಯರೊಂದಿಗೆ ಸಭೆ ನಡೆಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವೈದ್ಯರ ಬೇಡಿಕೆಗಳ ಈಡೇರಿಕೆಗೆ ಸಮ್ಮತಿ ಸೂಚಿಸಿದ್ದಾರೆ. ಈ ಮೂಲಕ ಕಳೆದ ಒಂದು ವಾರದಿಂದ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಕೈ ಬಿಡುವಂತೆ ಮನವಿ ಮಾಡಿದ್ದಾರೆ.

24 ಕಿರಿಯ ವೈದ್ಯರ ಜೊತೆ ನೇರ ಪ್ರಸಾರದ ಮೂಲಕ ಇಂದು ಸಭೆ ನಡೆಸಿದ ದೀದಿ, ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ನಡೆಸುವ ಹಲ್ಲೆ ತಡೆಗಟ್ಟಿ ರಕ್ಷಣೆ ಒದಗಿಸಲು 10 ಭದ್ರತಾ ಅಂಶಗಳ ಸಲಹೆಗೆ ಸಮ್ಮತಿ ಸೂಚಿಸಿದರು.

ವೈದ್ಯಕೀಯ ಸ್ಥಾಪನಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು, ಇದನ್ನು ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕುಂದುಕೊರತೆ ಘಟಕ ಸ್ಥಾಪಿಸುವ ಬೇಡಿಕೆ ಈಡೇರಿಕೆಗೆ ಒಪ್ಪಿಗೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚಿಕಿತ್ಸೆ ಬಗ್ಗೆ ಅತೃಪ್ತಿ ಇದ್ದರೆ ಈ ಕುರಿತು ದೂರು ದಾಖಲಿಸುವ ಘಟಕ ಸ್ಥಾಪನೆ ಸೇರಿದಂತೆ ಅನೇಕ ಅಂಶಗಳನ್ನು ಕಿರಿಯ ವೈದ್ಯರ ಬೇಡಿಕೆ ಈಡೇರಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ವೈದ್ಯರ ರಕ್ಷಣೆಗಾಗಿ ನಿರ್ದೇಶನ ಮಾಡಲು  ಎಲ್ಲ ಆಸ್ಪತ್ರೆಗಳಲ್ಲಿ ಪೊಲೀಸ್​  ಇಲಾಖೆಯ ಒಬ್ಬರನ್ನು ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಲಾಗುವುದ. ಜೊತೆಗೆ ವೈದ್ಯರ ಮೇಲೆ ಸುಳ್ಳು ದೂರು ದಾಖಲಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

'ಯಾವುದೇ ಸರ್ಕಾರ ಈ ರೀತಿಯ ಘಟನೆಯಾಗಬೇಕು ಎಂದು ಬಯಸುವುದಿಲ್ಲ. ತತ್​ಕ್ಷಣದ ಪರಿಸ್ಥಿತಿಯಿಂದಾಗಿ ಈ ರೀತಿ ಘಟನೆ ನಡೆದಿದೆ, ಈ ರೀತಿ ಘಟನೆ ಮರುಕಳಿಸುವುದು ನಮಗೆ ಬೇಡ . ಎನ್​ಆರ್​ಎಸ್​ ಘಟನೆಗೆ ಕಾರಣವಾದ ಐವರನ್ನು ಬಂಧಿಸಲಾಗುವುದು. ಹಾಗೇ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಲಾಗುವುದು' ಎಂದು ಸಿಎಂ ಬ್ಯಾನರ್ಜಿ ಭರವಸೆ ನೀಡಿದರು. .

ರಾಜ್ಯ ಸರ್ಕಾರ ನಡೆಸುವ ಆಸ್ಪತ್ರೆಗಳಲ್ಲಿ ಉತ್ತಮ ಮೂಲಭೂತಗಳ ಸೌಲಭ್ಯದ ಅಗತ್ಯವಿದೆ. ಅದೇ ರೀತಿ ರಕ್ಷಣೆ ಬಗ್ಗೆ ಕೂಡ ಎಂದು ವಿದ್ಯಾರ್ಥಿಗಳು ಸಿಎಂ ಬಳಿ ದೂರಿದರು.

ಇದನ್ನು ಓದಿ: ವೈದ್ಯರ ಮುಷ್ಕರ; ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ; ಕರ್ತವ್ಯಕ್ಕೆ ಹಾಜರಾಗುವಂತೆ ಸಿಎಂ ಮನವಿಏತನ್ಮಧ್ಯೆ, ರಾಜ್ಯ ಆಡಳಿತದ ಬಗ್ಗೆ ತಮಗೆ ಸಂಪೂರ್ಣ ನಂಬಿಕೆ ಹೊಂದಿರುವುದಾಗಿ ಸಿಎಂಗೆ ವೈದ್ಯ ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಟ್ಟರು. ಇದರ ಜೊತೆ ಮುಷ್ಕರ ನಡೆಸುತ್ತಿದ್ದ ವೈದ್ಯರನ್ನು ಕೆಲಸದಿಂದ ವಜಾ ಮಾಡಿರುವುದರಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದರಿಂದ ನಾವು ಭಯದಲ್ಲಿ ಕೆಲಸ ಮಾಡುವಂತೆ ಆಗಿದೆ ಎಂದು ತಿಳಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಕಿರಿಯ ವೈದ್ಯರು, ನಾವು ಇಲ್ಲಿಗೆ ಪರಿಹಾರ ಮಾತುಕತೆಗಾಗಿ ಬಂದಿದ್ದು, ಉತ್ತಮ ಧ್ಯೇಯೋದ್ದೇಶವನ್ನು ಹೊಂದಿದ್ದೇವೆ. ಹಲ್ಲೆಯಾದ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವೈದ್ಯರಿಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದರು.

First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ