Travel: ಯುರೋಪ್‌ ತನ್ನತ್ತ ಪ್ರವಾಸಿಗರನ್ನು ಸೆಳೆಯುವಲ್ಲಿ ಸೋಲುತ್ತಿರುವುದೇಕೆ ಗೊತ್ತೇ?

ಯುರೋಪಿಯನ್‌ ದೇಶ ಈಗ ಅತ್ಯಂತ ದುಬಾರಿ ದೇಶ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ, ಏಕೆಂದರೆ ಅಲ್ಲಿ ಏನೇ ಚಿಕ್ಕ ವಸ್ತು ತೆಗೆದುಕೊಂಡರೂ ಅದರ ಬೆಲೆ ಮಾತ್ರ ಆಕಾಶಕ್ಕೆ ಇರುತ್ತದೆ. ಇದರಿಂದ ಪ್ರವಾಸಿಗರೇ ತುಂಬಾನೇ ತೊಂದರೆ ಆಗುತ್ತಿವೆ ಎಂದು ಇತ್ತಿಚೀಗೆ ಎಪ್ರಿಲ್‌ 2022 ರಲ್ಲಿ ವರದಿಯಾದ ವಿರ್ಮಶೆಗಳು ಹೇಳುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಧುನಿಕ ಕಾಲದಲ್ಲಿ ಕೆಲಸದಿಂದ ಒಂದು ದಿನನೋ ಅಥವಾ ಒಂದು ವಾರನೋ ರಜೆ ಸಿಕ್ಕರೆ ಸಾಕು ಜನ ಈಗೀಗ ಡೆಸ್ಟಿನೇಷನ್‌ ವೆಕೆಷನ್‌ (Destination Vacation) ಎಂದು ಕರೆಯಲಾಗುವ ತಮ್ಮ ಇಷ್ಟದ ಸ್ಥಳಗಳಿಗೆ ಟೂರ್‌ ಹೋಗುವ ಪರಿಪಾಠ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಟುಂಬದವರ (Family) ಜೊತೆ ಹೋಗುವವರು ಮಕ್ಕಳಿಗೆ ರಜೆ ಬಂತೆದಂರೆ ಮುಗೀತು ಅವರನ್ನು ಕರೆದುಕೊಂಡು ವಿದೇಶಿಗಳಿಗೂ ಪ್ರಯಾಣ ಬೆಳೆಸುವುದು ಇಂದು ಒಂದು ಟ್ರೆಂಡ್‌ ಆಗಿ ಬದಲಾಗಿದೆ. ಅದರಲ್ಲೂ ಯುರೋಪಿಯನ್‌ ದೇಶಗಳೆಂದರೆ (European country) ಎಲ್ಲರೂ ಬಾಯಿ-ಬಾಯಿ ಬಿಡುತ್ತಾರೆ. ಏಕೆಂದರೆ ಯುರೋಪಿಯನ್‌ ದೇಶದಲ್ಲಿ ಅತ್ಯಂತ ಸುಂದರ ಸ್ಥಳಗಳು ಇವೆ. ಅವುಗಳಿಗೆ ಪ್ರವಾಸಿಗರನ್ನು ತಮ್ಮತ್ತ ಸೆಳೆಯುವ ಶಕ್ತಿ ಇದೆ ಎಂಬ ಕಲ್ಪನೆ ಮುಂಚೆಯಿಂದಲೂ ಇದೆ ಅಲ್ವಾ.

ಅದೇ ಈಗಲೂ ಮುಂದುವರಿಯುತ್ತಿದೆ. ಆದರೆ ಈ ಎರಡು ವರ್ಷಗಳಲ್ಲಿ ಯುರೋಪ್‌ ಬಗ್ಗೆ ಇರುವ ಸಕರಾತ್ಮಕ ಮಾತುಗಳು ಕಡಿಮೆಯಾಗುತ್ತಿವೆ. ಅದು ಏಕೆ? ಎಂದು ತಿಳಿಯೋಣ ಬನ್ನಿ.

ಯುರೋಪಿಯನ್‌ ದೇಶ ಅತ್ಯಂತ ದುಬಾರಿ ದೇಶ
ಆದರೆ ಈಗೀಗ ಯುರೋಪಿಯನ್‌ ದೇಶಗಳಿಗೆ ಪ್ರಯಾಣ ಬೆಳೆಸುವುದಕ್ಕೆ ಭಯ ಪಡುವ ಪರಿಸ್ಥಿತಿ ಎಲ್ಲರ ಮನದಲ್ಲೂ ಮನೆ ಮಾಡಿದೆ ಎಂದು ಹೇಳಬಹುದು. ಇದಕ್ಕೆ ಕಾರಣಗಳು ಹಲವಾರು. ಅವುಗಳಲ್ಲಿ ಪ್ರಮುಖವಾಗಿ ಲಗೇಜ್‌ಗಳ ಸಮಸ್ಯೆ ಆಗಿರಬಹುದು, ಯುರೋಪಿನಲ್ಲಿ ಪ್ರತಿದಿನವೂ ವಿಮಾನಗಳು ಸರಿಯಾದ ಸಮಯಕ್ಕೆ ಬರದೇ ಪ್ರಯಾಣಿಕರ ಸಮಯ ಹಾಳಾಗುತ್ತಿರುವುದು, ಯುರೋಪಿಯನ್‌ ದೇಶ ಈಗ ಅತ್ಯಂತ ದುಬಾರಿ ದೇಶ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.

ಏಕೆಂದರೆ ಅಲ್ಲಿ ಏನೇ ಚಿಕ್ಕ ವಸ್ತು ತೆಗೆದುಕೊಂಡರೂ ಅದರ ಬೆಲೆ ಮಾತ್ರ ಆಕಾಶಕ್ಕೆ ಇರುತ್ತದೆ. ಇದರಿಂದ ಪ್ರವಾಸಿಗರೇ ತುಂಬಾನೇ ತೊಂದರೆ ಆಗುತ್ತಿವೆ ಎಂದು ಇತ್ತಿಚೀಗೆ ಎಪ್ರಿಲ್‌ 2022 ರಲ್ಲಿ ವರದಿಯಾದ ವಿರ್ಮಶೆಗಳು ಹೇಳುತ್ತಿವೆ.

ಡೆಸ್ಟಿನೇಷನ್‌ ವೆಕೆಷನ್‌ ಗಳನ್ನು ಬೇರೆ ಸ್ಥಳಗಳಿಗೆ ಶಿಫ್ಟ್‌ ಮಾಡುತ್ತಿರುವುದೇಕೆ?
ಈ ಎಲ್ಲ ತೊಂದರೆಗಳನ್ನು ಎದುರಿಸಿ ತಮ್ಮ ಅಮೂಲ್ಯ ವಿಶ್ರಾಂತಿ ಸಮಯವನ್ನು ಪ್ರವಾಸಿಗರು ಹಾಳು ಮಾಡಿಕೊಳ್ಳುವುದಕ್ಕೆ ಇಷ್ಟ ಪಡದೇ ತಮ್ಮ ಡೆಸ್ಟಿನೇಷನ್‌ ವೆಕೆಷನ್‌ ಗಳನ್ನು ಬೇರೆ ಸ್ಥಳಗಳಿಗೆ ಶಿಫ್ಟ್‌ ಮಾಡಿಕೊಳ್ಳುತ್ತಿದ್ದಾರೆ. ಈ ಸ್ಥಳಗಳು ತಾವಿರುವ ಸ್ಥಳದಿಂದ ಹತ್ತಿರವಿದ್ದು, ತಮ್ಮ ಬಜೆಟ್‌ ಸ್ನೇಹಿಯಾಗಿರುವುದು ಪ್ರವಾಸಿಗರಿಗೆ ಮತ್ತೊಂದು ವರದಾನ ಎಂದೇ ಹೇಳಬಹುದು.

ಇದನ್ನೂ ಓದಿ:  UK: ಬ್ರಿಟನ್ ಕಾಲೇಜ್​ನಲ್ಲಿ ಇಂಡಿಯನ್ ಸಾಂಗ್, ಸಖತ್ ಸ್ಟೆಪ್ ಹಾಕಿದ ವಿದ್ಯಾರ್ಥಿಗಳು

ಯುರೋಪ್‌ ದೇಶದಲ್ಲಿ ಕಂಡು ಬರುವ ಅತ್ಯಂತ ವಿಶಾಲವಾದ ಮೋಡಗಳು ಅಥವಾ ಬೀಚ್‌ನ ಸುಂದರ ನೋಟಗಳು ಇತರೆ ದೇಶಗಳಲ್ಲಿ ಅಥವಾ ಸ್ಥಳಗಳಲ್ಲಿ ಕಂಡುಬರುತ್ತವೆ. ಅಲ್ಲಿಗೆ ಹೋಗುವುದು ಸುಲಭ ಹಾಗೆಯೇ ಅಲ್ಲಿನ ಖರ್ಚು-ವೆಚ್ಚಗಳು ಯುರೋಪ್‌ ದೇಶಕ್ಕೆ ಹೋಲಿಸಿದರೆ ತುಂಬಾನೇ ಕಡಿಮೆ. ಆದ್ದರಿಂದ ಪ್ರವಾಸಿಗರು ಯುರೋಪಿನಲ್ಲಿನ ಆ ಟ್ರಾಫಿಕ್‌ ಜಾಮ್‌, ಪೆಟ್ರೊಲ್‌ ಬೆಲೆ, ವೀಸಾ ಸಮಸ್ಯೆ ಅಲ್ಲದೆ ವಿಮಾನಗಳ ಹಾರಾಟ ದಿನವೂ ತಡವಾಗುವುದು ಇವೆಲ್ಲವುಗಳ ತಲೆ ಬಿಸಿ ಬೇಡವೇ ಬೇಡ ಎಂದು ತಮ್ಮ ನೋಟವನ್ನು ಬೇರೆ ಕಡೆ ತಿರುಗಿಸಿದ್ದಾರೆ ಎಂದು ಹೇಳಬಹುದು.

ಸುಲಭವಾಗಿ ಸಿಗುವ ವೀಸಾಗಳು
“ಕೆಲವು ಪ್ರವಾಸಿ ಸ್ಥಳಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಆ ಸ್ಥಳಗಳು ಯುರೋಪ್‌ ದೇಶದ ಸ್ಥಳಗಳು ಅಲ್ಲವೇ ಅಲ್ಲ. ಅವು ಕಿನ್ಯಾ ಮತ್ತು ಸೆಂಟ್ರಲ್‌ ಏಷಿಯನ್‌ ದೇಶಗಳ ಹಲವು ಪ್ರವಾಸಿ ತಾಣಗಳು. ನಿಮಗೆ ಹಿತವೆನಿಸುವಷ್ಟು ಸುಂದರವಾಗಿವೆ. ಇಲ್ಲಿ ಇನ್ನೊಂದು ಅನುಕೂಲವೆಂದರೆ ನಿಮಗೆ ಸುಲಭ ವೀಸಾಗಳು ಸಿಗುತ್ತವೆ. ವಿಮಾನ ಹಾರಾಟದ ಬೆಲೆಯು ಅಗ್ಗ, ಹಾಗೆಯೇ ಅಲ್ಲಿನ ಪ್ರವಾಸಿ ತಾಣಗಳ ಉಸ್ತುವಾರಿ ಸಂಸ್ಥೆಗಳು ಕೂಡ ಸ್ನೇಹಪರತೆಯಿಂದ ನಡೆದುಕೊಳ್ಳುತ್ತವೆ.

ಇಲ್ಲಿನ ಪ್ರವಾಸಿ ತಾಣಗಳೂ ಭಾರತೀಯ ಪ್ರವಾಸಿಗರಿಗೆಂದೆ ಕೆಲವು ವರ್ಷಗಳಿಂದ ಪ್ರೇಕ್ಷಣಿಯ ಸ್ಥಳಗಳು ಮತ್ತು ಇರಲು ವಸತಿಗಳನ್ನು ಪ್ರವಾಸಿಗರಿಗೆ ಇಷ್ಟವಾಗುವಂತೆ ನಿರ್ಮಿಸುತ್ತಿವೆ. ಅವುಗಳ ಕಟ್ಟಡ ವಿನ್ಯಾಸ, ಸುಂದರ ಹೋಟೆಲ್‌ಗಳು, ಸೂಕ್ತ ಆಹಾರ ಇವೆಲ್ಲವೂ ನಿಮ್ಮ ಹಣಕ್ಕೆ ಉತ್ತಮ ಬೆಲೆಯನ್ನು ತೆರುವುದರಲ್ಲಿ ಸಂಶಯವಿಲ್ಲ. ಕೇವಲ ಯುರೋಪ್‌ ದೇಶಗಳಿಗೆ ಅಂಟಿಕೊಳ್ಳದೇ, ಈ ದೇಶಗಳನ್ನು ಒಮ್ಮೆ ನೋಡಿ, ಆಗ ನಿಮಗೆ ಗೊತ್ತಾಗುತ್ತೆ ಈ ಸ್ಥಳಗಳು ಯುರೋಪ್‌ ಸ್ಥಳಗಳಿಗಿಂತ ಸುಂದರವಾಗಿವೆ” ಎಂದು ಉತ್ತರ ಭಾರತದ ಎಂಟರ್‌ಪ್ರೈಸಿಂಗ್ ಏಜೆಂಟ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಸುರಬ್‌ ತುತೆಜಾ ಹೇಳಿದರು.

ಇದನ್ನೂ ಓದಿ: Weight Loss Story: ಹೆರಿಗೆ ನಂತರ ಮಹಿಳೆಯೊಬ್ಬರ ತೂಕ ನಷ್ಟದ ಜರ್ನಿ ಹಾಗೂ ಸಲಹೆ ಹೀಗಿದೆ

ನೀವು ಬರೀ ಯುರೋಪ್‌ ದೇಶ ಮಾತ್ರ ಸುಂದರವಾಗಿರೋ ದೇಶ ಎಂದುಕೊಂಡಿದ್ದರೆ ಅದರಿಂದ ಸ್ವಲ್ಪ ಆಚೆ ಬಂದು ವಿಶಾಲ ಜಗತ್ತನ್ನು ಒಮ್ಮೆ ನೋಡಿ. ಎಲ್ಲ ದೇಶಗಳು, ಸ್ಥಳಗಳು ಕೂಡ ನೋಡಲು ಸುಂದರವಾಗಿಯೇ ಇರುತ್ತವೆ. ನಿಮ್ಮ ಹತ್ತಿರದಲ್ಲಿಯೇ ಯಾವುದಾದರೂ ಡೆಸ್ಟಿನೇಷನ್‌ ವೆಕೆಷನ್‌ ಇರಬಹುದು ಒಂದು ಸಲ ಹುಡುಕಾಟ ನಡೆಸಿ. ಹತ್ತಿರದ ಸ್ಥಳಗಳಿಗೆ ಹೋದರೆ ಅದು ನಿಮ್ಮ ಬಜೆಟ್‌ ಸ್ನೇಹಿ ಆಗುವುದರಲ್ಲಿ ಸಂಶಯವಿಲ್ಲ.
Published by:Ashwini Prabhu
First published: