Defamation Case: ಜಾನಿ ಡೆಪ್​​ಗೆ 10 ಮಿಲಿಯನ್ ಡಾಲರ್ ಪಾವತಿಸಲು ತೀರ್ಪು ಬಂದ ನಂತರ ಅಂಬರ್ ಹಾರ್ಡ್ ಮಾಡಿದ್ದೇನು?

ಅಂಬರ್ ಹರ್ಡ್, ಜಾನಿ ಡೆಪ್ ವಿರುದ್ದ ಸುಳ್ಳಾರೋಪ ಮಾಡಿದ್ದಾರೆ ಹೀಗಾಗಿ ಪರಿಹಾರವಾಗಿ ಡೆಪ್ ಅವರಿಗೆ $10.35 ಮಿಲಿಯನ್ ಪಾವತಿಸಲು ಕೋರ್ಟ್ ಸೂಚಿಸಿತ್ತು. ಪ್ರಕರಣ ಸುಖಾಂತ್ಯ ಕಂಡಿತು ಎನ್ನುವಷ್ಟರಲ್ಲಿ ಅಂಬರ್ ಹೊಸ ಖ್ಯಾತೆ ತೆಗೆದಿದ್ದಾಳೆ.

ಅಂಬರ್ ಹರ್ಡ್

ಅಂಬರ್ ಹರ್ಡ್

  • Share this:
ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸರಣಿ ಖ್ಯಾತಿಯ ಜಾನಿ ಡೆಪ್ (Johnny Depp) ಮತ್ತು ಅವರ ಪತ್ನಿ ಅಂಬರ್ ಹರ್ಡ್ (Amber Hard) ಜೊತೆಗಿನ ವಿವಾಹ ಬಂಧನವನ್ನು ಕೊನೆಗೊಳಿಸಿ ಇತ್ತೀಚೆಗೆ ಮಾಜಿ ದಂಪತಿಗಳು ಭಾರಿ ಸುದ್ದಿಯಾಗಿದ್ದರು. ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡ ಹೂಡಿದ್ದ ಜಾನಿಗೆ ತೀರ್ಪು ಪರವಾಗಿ ಬರುವುದರ ಜೊತೆ ಮಿಲಿಯನ್ ಗಟ್ಟಲೇ ಹಣವನ್ನು ನೀಡುವಂತೆ ಪತ್ನಿ ಅಂಬರ್ ಗೆ ಕೋರ್ಟ್  (Court)ಆದೇಶ ಮಾಡಿತ್ತು. ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನನಷ್ಟ ವಿಚಾರಣೆಯಲ್ಲಿ ಯುಸ್ ನ್ಯಾಯಾಲಯವು ಜಾನಿ ಡೆಪ್ ಪರವಾಗಿ ತನ್ನ ತೀರ್ಪನ್ನು ಪ್ರಕಟಿಸಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಅಂಬರ್ ಹರ್ಡ್, ಜಾನಿ ಡೆಪ್ ವಿರುದ್ದ ಸುಳ್ಳಾರೋಪ ಮಾಡಿದ್ದಾರೆ ಹೀಗಾಗಿ ಪರಿಹಾರವಾಗಿ ಡೆಪ್ ಅವರಿಗೆ $10.35 ಮಿಲಿಯನ್ ಪಾವತಿಸಲು ಕೋರ್ಟ್ ಸೂಚಿಸಿತ್ತು. ಪ್ರಕರಣ (Case) ಸುಖಾಂತ್ಯ ಕಂಡಿತು ಎನ್ನುವಷ್ಟರಲ್ಲಿ ಅಂಬರ್ ಹೊಸ ಖ್ಯಾತೆ ತೆಗೆದಿದ್ದಾಳೆ.

ಮತ್ತೊಮ್ಮೆ ಕೋರ್ಟ್ ಮೊರೆ ಹೋದ ಅಂಬರ್ ಹರ್ಡ್
ತೀರ್ಪು ಬಂದ ಒಂದು ತಿಂಗಳ ಬಳಿಕ ಹೊಸ ಚಕಾರವೆತ್ತಿದ ಅಮೇರಿಕಾ ನಟಿ ಅಂಬರ್ ಹರ್ಡ್ ತೀರ್ಪಿನ ವಿರುದ್ಧ ವರ್ಜೀನಿಯಾ ನ್ಯಾಯಾಲಯದಲ್ಲಿ ನೋಟಿಸ್ ಸಲ್ಲಿಸಿದ್ದಾರೆ. ನ್ಯಾಯಾಧೀಶರು ನೀಡಿದ ತೀರ್ಪನ್ನು ಮತ್ತೆ ಪರಿಶೀಲಿಸಲು, ಮೊಕದ್ದಮೆಯನ್ನು ವಜಾಗೊಳಿಸಲು ಅಥವಾ ಹೊಸ ವಿಚಾರಣೆಗೆ ಆದೇಶಿಸಲು ಅಂಬರ್ ಹರ್ಡ್ ಮತ್ತೆ ಕೋರ್ಟ್ ಮೊರೆಹೋಗಿದ್ದಾಳೆ.

ಕೆಳ ನ್ಯಾಯಾಲಯದ ಜೂನ್ 1ರ ತೀರ್ಪನ್ನು ರದ್ದುಗೊಳಿಸಲು ಕೋರಿ ಅಂಬರ್ ಅವರ ಕಾನೂನು ತಂಡವು ವರ್ಜೀನಿಯಾ ಕೋರ್ಟ್ ಆಫ್ ಅಪೀಲ್ಸ್ ಗೆ ಮೇಲ್ಮನವಿ ನೋಟಿಸ್ ಅನ್ನು ಸಲ್ಲಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. "ಮೊದಲ ತಿದ್ದುಪಡಿಗೆ ಅನುಗುಣವಾಗಿ ನ್ಯಾಯಯುತ ಮತ್ತು ನ್ಯಾಯೋಚಿತ ತೀರ್ಪನ್ನು ತಡೆಯುವ ದೋಷಗಳನ್ನು ನ್ಯಾಯಾಲಯವು ಮಾಡಿದೆ ಎಂದು ನಾವು ನಂಬುತ್ತೇವೆ. ಆದ್ದರಿಂದ ನಾವು ತೀರ್ಪಿಗೆ ಮೇಲ್ಮನವಿ ಸಲ್ಲಿಸುತ್ತಿದ್ದೇವೆ" ಎಂದು ಆಕೆಯ ವಕ್ತಾರರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಜಾನಿ ಡೆಪ್ ವಕ್ತಾರರು ಹೇಳಿದ್ದು ಹೀಗೆ
ಇತ್ತ ಜೂನ್ 1ರ ತೀರ್ಪನ್ನು ನ್ಯಾಯಾಲಯ ಎತ್ತಿಹಿಡಿಯುತ್ತದೆ ಎಂಬ ವಿಶ್ವಾಸವಿದೆ ಎಂದು ಜಾನಿ ಡೆಪ್ ವಕ್ತಾರರು ಹೇಳಿದ್ದಾರೆ. "ಆರು ವಾರಗಳ ವಿಚಾರಣೆಯ ಸಮಯದಲ್ಲಿ ಪ್ರಸ್ತುತಪಡಿಸಲಾದ ಎಲ್ಲಾ ಸಾಕ್ಷ್ಯವನ್ನು ತೀರ್ಪುಗಾರರು ಆಲಿಸಿದರು ಮತ್ತು ಪ್ರತಿವಾದಿಯು ಸ್ವತಃ ಜಾನಿ ಡೆಪ್ ಅವರನ್ನು ಅನೇಕ ಸಂದರ್ಭಗಳಲ್ಲಿ ಮಾನನಷ್ಟಗೊಳಿಸಿದ್ದಾರೆ ಎಂಬ ಸ್ಪಷ್ಟ ಮತ್ತು ಸರ್ವಾನುಮತದ ತೀರ್ಪನ್ನು ನ್ಯಾಯಾಲಯ ನೀಡಿತ್ತು. ನಮ್ಮ ಪ್ರಕರಣದಲ್ಲಿ ನಾವು ವಿಶ್ವಾಸ ಹೊಂದಿದ್ದೇವೆ ಮತ್ತು ಇದೇ ತೀರ್ಪು ಮುಂದುವರೆಯುವ ಭರವಸೆ ಇದೆ” ಎಂದು ಜಾನಿ ಡೆಪ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ:  Smriti Irani: ಸ್ಕೃತಿ ಇರಾನಿ ಪುತ್ರಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರಾ? ಕಾಂಗ್ರೆಸ್ ಆರೋಪಕ್ಕೆ ಸಚಿವೆಯ ತಿರುಗೇಟು

ಜೂನ್ 1 ರಂದು, ನ್ಯಾಯಾಲಯ ಅಂಬರ್ ಅವರು, ಜಾನಿಗೆ $10.35 ಮಿಲಿಯನ್ ಮಾನನಷ್ಟವನ್ನು ಪರಹಾರವಾಗಿ ಪಾವತಿಸಲು ಆದೇಶಿಸಿತ್ತು. ಅಂಬರ್ ವಕೀರಲು ಹಲವಾರು ವಾದ, ಪ್ರತಿವಾದಗಳನ್ನೂ ಮಾಡಿದರು. ಇಬ್ಬರ ಪರ ಎಲ್ಲಾ ವಾದಗಳನ್ನು ಆಲಿಸಿದ ನ್ಯಾಯಾಧೀಶ ಪೆನ್ನಿ ಅಜ್ಕರೇಟ್ ಅವರು 'ವಂಚನೆ ಅಥವಾ ತಪ್ಪಿಗೆ ಯಾವುದೇ ಪುರಾವೆಗಳಿಲ್ಲ' ಎಂದು ಜಾನಿ ಡೆಪ್ ಪರ ತೀರ್ಪು ನೀಡಿದರು.

ಜಾನಿ ಮತ್ತು ಅಂಬರ್ ತಮ್ಮ ಉನ್ನತ ಮಟ್ಟದ ಮಾನನಷ್ಟ ವಿಚಾರಣೆಯ ಸಂದರ್ಭದಲ್ಲಿ ಪರಸ್ಪರರ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದ್ದರು, ಇದು ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಅಂಬರ್ ವಿರುದ್ಧ ಕೆಟ್ಟ ಪ್ರಚಾರಗಳು ಕೂಡ ನಡೆದವು.

ಪ್ರಕರಣ ಏನು?
ಪತ್ನಿ ಪೀಡಕ ಎಂದು ಮಾನಹಾನಿ ಮಾಡಿದ ಪತ್ನಿ ವಿರುದ್ಧ ಡೆಪ್ ಅವರು ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು. ಅಂಬರ್ ಡೆಪ್ ಒಬ್ಬ ಪತ್ನಿ ಪೀಡಕ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಹೀಗಾಗಿ ಅವರ ಮಾತುಗಳಿಂದಾಗಿ ಮಾನಹಾನಿಯಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎಲ್ಲಾ ವಾದ, ಅರ್ಜಿದಾರರ ಹೇಳಿಕೆ ಎಲ್ಲವನ್ನೂ ಪರಿಶೀಲಿಸಿ ಕೋರ್ಟ್ ಜಾನಿ ಡೆಪ್ ಪರ ತೀರ್ಪು ನೀಡಿತು. ಪ್ರಸ್ತುತ ಇದೇ ತೀರ್ಪನ್ನು ಪ್ರಶ್ನಿಸಿ ಮತ್ತೆ ಅಂಬರ್ ನೋಟೀಸ್ ತಂದಿದ್ದಾರೆ.

ಇದನ್ನೂ ಓದಿ:  Facebook: ತಾಲಿಬಾನ್ ನಡೆಸ್ತಿದ್ದ ಫೇಸ್​ಬುಕ್ ಪೇಜ್​ಗಳೆಲ್ಲಾ ಈಗ ಬ್ಯಾನ್!

ಹಾಲಿವುಡ್ ನಟಜಾನಿ ಡೆಪ್ ಹೆಚ್ಚು ಜ್ಯಾಕ್ ಸ್ಪ್ಯಾ ರೋ ಅಂತಾನೇ ಫೇಮಸ್ ಆಗಿದ್ದಾರೆ. ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸರಣಿಯ ಚಿತ್ರ ಗಳಲ್ಲಿ ಜ್ಯಾಕ್ ಸ್ಪ್ಯಾ ರೋ ಆಗಿ ನಟಿಸಿದ್ಧ ಡೆಪ್ ಅಮೇರಿಕಾದ ಖ್ಯಾತ ನಟ, ನಿರ್ಮಾಪಕ ಮತ್ತು ಸಂಗೀತಗಾರ ಕೂಡ ಹೌದು. ಇನ್ನೂ ಅಂಬರ್ ಹರ್ಡ್ ಕೂಡ ಅಮೇರಿಕಾದ ನಟಿ . ಆಲ್ ದಿ ಬಾಯ್ಸ್ ಲವ್ ಮ್ಯಾಂಡಿ ಲೇನ್, ದಿ ವಾರ್ಡ್ ಮತ್ತು ಡ್ರೈವ್ ಆಂಗ್ರಿಯಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
Published by:Ashwini Prabhu
First published: