Central Vista Avenue: ಸೆಂಟ್ರಲ್ ವಿಸ್ಟಾ ಅವೆʼನ್ಯೂʼ ಲುಕ್ ಹೇಗಿದೆ ಗೊತ್ತಾ? ಇಲ್ಲಿ ಹೊಸದೇನೇನಿದೆ ನೋಡಿ

ಸೆಂಟ್ರಲ್ ವಿಸ್ಟಾ ಅವೆನ್ಯೂ

ಸೆಂಟ್ರಲ್ ವಿಸ್ಟಾ ಅವೆನ್ಯೂ

ದೆಹಲಿಯ ಹೃದಯ ಭಾಗದಲ್ಲಿರುವ ಸೆಂಟ್ರಲ್‌ ವಿಸ್ಟಾ ಅವೆನ್ಯೂ ಪ್ರವಾಸಿಗರ ನೆಚ್ಚಿನ ತಾಣವಾಗಿ ಮನಸೆಳೆಯುತ್ತಿದೆ. ಬರೋಬ್ಬರಿ 19ತಿಂಗಳ ಬಳಿಕ ಮತ್ತೆ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ತೆರೆದುಕೊಂಡಿದೆ ವಿಸ್ಟಾ ಅವೆನ್ಯೂ. ಮನಸ್ಸಿಗೆ ಹಿತ ಉಂಟು ಮಾಡುವ ವಾತಾವರಣ ಹೀಗೆ ಪುನರ್‌ ಅಭಿವೃದ್ಧಿ ಕಂಡ ವಿಸ್ಟಾದಲ್ಲಿ ಏನುಂಟು ಏನಿಲ್ಲ ಅನ್ನೋದನ್ನು ನೋಡೋಣ.

ಮುಂದೆ ಓದಿ ...
  • Share this:

ರಾಷ್ಟ್ರ ರಾಜಧಾನಿ ದೆಹಲಿ (Delhi) ಮತ್ತಷ್ಟು ಕಳೆಗಟ್ಟಿದೆ. ದೇಶದ ಹೃದಯಭಾಗವಾಗಿರುವ ದೆಹಲಿ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಬಂದಿದೆ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರ (Tourists) ಕಣ್ಣಿಗೆ ಅಕ್ಷರಶಃ ಹಬ್ಬ. ಇದಕ್ಕೆ ಕಾರಣ ಹೆಹಲಿಯ ಕೇಂದ್ರ ಬಿಂದುವಾಗಿರುವ ನವೀಕೃತಗೊಂಡ ಸೆಂಟ್ರಲ್‌ ವಿಸ್ಟಾ ಅವೆನ್ಯೂ (Central Vista Avenue). ದೆಹಲಿಯ ಹೃದಯ ಭಾಗದಲ್ಲಿರುವ ಸೆಂಟ್ರಲ್‌ ವಿಸ್ಟಾ ಅವೆನ್ಯೂ ಪ್ರವಾಸಿಗರ ನೆಚ್ಚಿನ ತಾಣವಾಗಿ ಮನಸೆಳೆಯುತ್ತಿದೆ. ಕಣ್ಣಿಗೆ ತಂಪು ನೀಡುವ ಗ್ರೀನರಿ, ಮನಸ್ಸಿಗೆ ಹಿತ ಉಂಟು ಮಾಡುವ ವಾತಾವರಣ ಹೀಗೆ ಪುನರ್‌ ಅಭಿವೃದ್ಧಿ ಕಂಡ ವಿಸ್ಟಾದಲ್ಲಿ ಏನುಂಟು ಏನಿಲ್ಲ ಅನ್ನೋದನ್ನು ನೋಡೋಣ.


ಬರೋಬ್ಬರಿ 19ತಿಂಗಳ ಬಳಿಕ ಮತ್ತೆ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ತೆರೆದುಕೊಂಡಿದೆ ವಿಸ್ಟಾ ಅವೆನ್ಯೂ. ನೇತಾಜಿ ಪ್ರತಿಮೆ, 16 ಸೇತುವೆ, 106 ಶೌಚಾಲಯಗಳು, ಕಾಲುವೆ ಮೇಲಿನ ಸೇತುವೆಗಳು, ಮರಳುಗಲ್ಲಿನ ಬೆಂಚುಗಳು.. ಕಾಲುದಾರಿಗಳು ಇದ್ಯಂತೆ.


ರಾಜಪಥ ಕರ್ತವ್ಯಪಥವಾಗಿ ಬದಲಾವಣೆ 
ನಮ್ಮ ದೇಶ ಇದೀಗ ಬದಲಾಗುತ್ತಿದೆ. ಎಲ್ಲದರಲ್ಲೂ ನಮ್ಮತನ ಕಾರಣುತ್ತಿದೆ. ಇಡೀ ವಿಶ್ವಕ್ಕೆ ಭಾರತೀಯರ ಸಾಮರ್ಥ್ಯ ತಿಳಿಯುತ್ತಿದೆ. ದೆಹಲಿಯ ಕೆಂಪು ಕೋಟೆ, ರಾಜಪಥ ನಮ್ಮ ದೇಶದ ಹೆಗ್ಗಳಿಕೆ. ಪ್ರತಿ ಸ್ವಾತಂತ್ರ್ಯೋತ್ಸವದಲ್ಲಿ ಇಡೀ ವಿಶ್ವದ ಜನರು ನೋಡುವ ಈ ರಾಜಪಥ ದೇಶದ ಗೌರವದ ಸಂಕೇತ. ಇದೇ ರಾಜಪಥದ ಹೆಸರು ಇದೀಗ ಬದಲಾಗಿದೆ. ನಾವೇನು ರಾಜಪಥ ಅಂತ ಕರೀತಿದ್ವಿ ಅದೇ ಈಗ ಕರ್ತವ್ಯಪಥ ಅಂತ ಬದಲಾಗಿದೆ. 477 ಕೋಟಿ ರೂಪಾಯಿಗಳ ಈ ಯೋಜನೆ ಸೆಪ್ಟೆಂಬರ್‌ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ.


ಇದನ್ನೂ ಓದಿ: Viral Photo: ರಾಷ್ಟ್ರೀಯ ಉದ್ಯಾನವನದಲ್ಲಿ ಹಿಮದ ಗುಹೆ! ಅಪರೂಪದ ಚಿತ್ರ ನೀವೂ ನೋಡಿ


ಇದೇ ರಾಜಪಥಕ್ಕೆ ಬ್ರಿಟಿಷರ ಕಾಲದಲ್ಲಿ ಕಿಂಗ್ಸ್‌ ವೇ ಅನ್ನೋ ಹೆಸರಿತ್ತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅದನ್ನು ರಾಜಪಥ ಅಂತ ಬದಲಾಯಿಸಲಾಯ್ತು. ಇದೀಗ ಅದನ್ನ ಕರ್ತವ್ಯಪಥ ಅಂತ ಮೋದಿ ಸರ್ಕಾರ ಬದಲಾಯಿಸಿದೆ. ಇನ್ನು ಇಲ್ಲಿ ನೇತಾಜಿ ಸುಭಾಷ್‌ ಚಂದ್ರ ಭೋಸರ ಪ್ರತಿಮೆ ಕಳೆಗಟ್ಟಿದೆ. 1968ರವರೆಗೆ ಕಿಂಗ್ ಜಾರ್ಜ್ ಪ್ರತಿಮೆ ಇದ್ದ ಇಂಡಿಯಾ ಗೇಟ್‌ ಮೇಲಾವರಣದಲ್ಲಿ ನಿರ್ಮಿಸಲಾಗಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ 28 ಅಡಿ ಉದ್ದದ ಪ್ರತಿಮೆ ಸ್ಥಾಪಿಸಲಾಗಿದೆ. ಕಿಂಗ್ ಜಾರ್ಜ್ ಪ್ರತಿಮೆಯನ್ನು ದೆಹಲಿಯ ಕೊರೋನೇಷನ್‌ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿದೆ.


ಹೊಸ ವಿಸ್ಟಾ ಅವೆನ್ಯೂ ದಲ್ಲಿ ಏನೇನಿದೆ?
ಸಾಕಷ್ಟು ಬದಲಾವಣೆ ಕಂಡಿರುವ ಹೊಸ ವಿಸ್ಟಾ ಅವೆನ್ಯೂ ದಲ್ಲಿ ಸುಮಾರು 16.5 ಕಿಲೋ ಮೀಟರ್‌ ಉದ್ದದ ಕಾಲು ದಾರಿಗಳನ್ನು ಮಾಡಲಾಗಿದೆ. ಈ ಪಾದಚಾರಿಗಳ ಕಾಲುದಾರಿ ತುಂಬ ಕಣ್ಣಿಗೆ ಹಬ್ಬ ಉಂಟುಮಾಡುವ ಲಾನ್‌ ಗಳನ್ನು ನಿರ್ಮಿಸಲಾಗಿದೆ. ಇನ್ನು 16 ಸೇತುವೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ 106 ಟಾಯ್ಲೆಟ್‌ ಗಳನ್ನು ನಿರ್ಮಾಣ ಮಾಡಲಾಗಿರುವುದು ವಿಶೇಷ. ಅದರಲ್ಲಿ 64 ಮಹಿಳೆಯರಿಗೆ ಹಾಗೂ 32 ಪುರುಷರಿಗೆ ಮೀಸಲಿಡಲಾಗಿದೆ.


ಇನ್ನು ಪುನರ್‌ ಅಭಿವೃದ್ಧಿಯಾದ ಮೇಲೆ ಇಲ್ಲಿ ಹುಲ್ಲು ಹಾಸುಗಳನ್ನೂ ನವೀಕರಿಸಲಾಗಿದೆ. ರಾಜಪಥ ಹಾಗೂ ಲಾನ್‌ ಉದ್ದಕ್ಕೂ ಇರುವ ಮಾರ್ಗಗಳನ್ನು ಲಾಖಾ ಗ್ರಾನೈಟ್‌ ನಿಂದ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಅಲ್ಲದೇ ಕರ್ತವ್ಯಪಥ ಹಾಗೂ ಇಂಡಿಯಾ ಗೇಟ್‌ ನ ಉದ್ದಕ್ಕೂ ಇರುವ ಹುಲ್ಲು ಹಾಸುಗಳ ಮಧ್ಯೆ ಸಾಗಲು ಜನರಿಗೆ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಜನಪಥ್‌ ನಲ್ಲಿ ನಾಲ್ಕು ಪಾದಚಾರಿ ಅಂಡರ್‌ ಪಾಸ್‌ ಗಳನ್ನು ನಿರ್ಮಿಸಲಾಗಿದೆ.


ಇದನ್ನೂ ಓದಿ: Ram Mandir Ayodhya: 1800 ಕೋಟಿಯಲ್ಲಿಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ; ಹೇಗಿರಲಿದೆ ಭವ್ಯ ದೇಗುಲ?  


ಹೀಗೆ ಭಾರತ ಬದಲಾಗುತ್ತಿದೆ. ಅಭಿವೃದ್ಧಿ ಕಾಣುತ್ತಿದೆ. ದೇಶದ ರಾಜಧಾನಿಯ ಜೊತೆಗೆ ಇಡೀ ಭಾರತವೇ ಅಭಿವೃದ್ಧಿಯತ್ತ ಸಾಗುತ್ತಿದೆ. ಇಡೀ ವಿಶ್ವದಲ್ಲಿ ನಮ್ಮ ದೇಶದ ಹೆಸರು ಛಾಪೊತ್ತುತ್ತಿದೆ. ದೇಶದ ರಾಜಧಾನಿ ಇನ್ನಷ್ಟು ಸುಂದರವಾಗಿದೆ. ಅದರಲ್ಲೂ ನಮ್ಮತನ ಕಾಣುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯೇ.

Published by:Ashwini Prabhu
First published: