• Home
  • »
  • News
  • »
  • national-international
  • »
  • Matrimony: ಮ್ಯಾಟ್ರಿಮೋನಿ ಸೈಟಲ್ಲಿ ಹುಡುಗಿಯರು ಹೆಚ್ಚಾಗಿ ಹುಡುಕಿದ್ದು ಇಂಥದ್ದೇ ಹುಡುಗರನ್ನು!

Matrimony: ಮ್ಯಾಟ್ರಿಮೋನಿ ಸೈಟಲ್ಲಿ ಹುಡುಗಿಯರು ಹೆಚ್ಚಾಗಿ ಹುಡುಕಿದ್ದು ಇಂಥದ್ದೇ ಹುಡುಗರನ್ನು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಆನ್‌ಲೈನ್ ನಲ್ಲಿ ಎಂತಹ ಹುಡುಗರನ್ನು ಈ ಹುಡುಗಿಯರು ಹುಡುಕುತ್ತಾರೆ ಅಂತ ನಿಮಗೆ ಕೇಳಿದರೆ, ನೀವು ತಕ್ಷಣವೇ ಒಳ್ಳೆಯ ಉದ್ಯೋಗದಲ್ಲಿರುವ ಹುಡುಗರನ್ನು ಈ ಹುಡುಗಿಯರು ನೋಡುತ್ತಾರೆ ಅಂತ ಹೇಳುತ್ತೇವೆ. ಸಾಮಾನ್ಯವಾಗಿ ಈ ಸರ್ಕಾರಿ ಕೆಲಸಗಳಲ್ಲಿ ಇರುವಂತಹ ಮತ್ತು ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಹುಡುಗರನ್ನು ಜಾಸ್ತಿ ಹುಡುಕುತ್ತಾರೆ ಅಂತ ನೀವು ಭಾವಿಸಿದ್ದಾರೆ

ಮುಂದೆ ಓದಿ ...
  • Share this:

ಮೊದಲೆಲ್ಲಾ ವಯಸ್ಸಿಗೆ ಬಂದಂತಹ ಯುವಕ ಮತ್ತು ಯುವತಿಯರ ಮದುವೆ (Marriage) ಮಾಡಬೇಕೆಂದು ಮನೆಯಲ್ಲಿ ಹಿರಿಯರು ನಿರ್ಧಾರ ಮಾಡಿದ್ದಾಗ ಯುವಕ ಅಥವಾ ಯುವತಿಯ ಫೋಟೋಗಳನ್ನು (Photos) ಅವರ ಚಿಕ್ಕದೊಂದು ಜಾತಕದೊಂದಿಗೆ ತಮಗೆ ತುಂಬಾನೇ ಪರಿಚಯವಿರುವವರ ಹತ್ತಿರ ಕೊಡುತ್ತಿದ್ದರು. ಆದರೆ ಈಗ ಎಲ್ಲವೂ ಆನ್‌ಲೈನ್ (Online) ಮಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗೆಲ್ಲಾ ಹುಡುಗನ ಬಯೋಡೇಟಾ ಮತ್ತು ಫೋಟೋಗಳನ್ನು ಈ ಶಾದಿ ಡಾಟ್ ಕಾಮ್ ನಂತ ಮ್ಯಾಟ್ರಿಮೋನಿ ಸೈಟ್ ಗಳಲ್ಲಿ (Matrimony App) ಅಪ್ಲೋಡ್ ಮಾಡುತ್ತಾರೆ. ಅಲ್ಲಿಯೇ ಹುಡುಗ ಮತ್ತು ಹುಡುಗಿ ನೋಡಿಕೊಂಡು ಇಷ್ಟವಾದರೆ ಮಾತ್ರ ಮುಂದೆ ಭೇಟಿ ಆಗುತ್ತಾರೆ. ಅಲ್ಲಿ ಅವರು ಬರೀ ಫೋಟೋ (Photo) ಮತ್ತು ಚಿಕ್ಕದಾಗಿ ಅವರ ಬಗ್ಗೆ ಪರಿಚಯವಿರುತ್ತದೆ ಅಷ್ಟೇ ಅಂತ ಹೇಳಬಹುದು.


ಯಾವ ರೀತಿಯ ಹುಡುಗರನ್ನು ಹುಡುಕುತ್ತಿದ್ದಾರೆ ಯುವತಿಯರು 
ಈಗ ಆನ್‌ಲೈನ್ ನಲ್ಲಿ ಎಂತಹ ಹುಡುಗರನ್ನು ಈ ಹುಡುಗಿಯರು ಹುಡುಕುತ್ತಾರೆ ಅಂತ ನಿಮಗೆ ಕೇಳಿದರೆ, ನೀವು ತಕ್ಷಣವೇ ಒಳ್ಳೆಯ ಉದ್ಯೋಗದಲ್ಲಿರುವ ಹುಡುಗರನ್ನು ಈ ಹುಡುಗಿಯರು ನೋಡುತ್ತಾರೆ ಅಂತ ಹೇಳುತ್ತೇವೆ. ಸಾಮಾನ್ಯವಾಗಿ ಈ ಸರ್ಕಾರಿ ಕೆಲಸಗಳಲ್ಲಿ ಇರುವಂತಹ ಮತ್ತು ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಹುಡುಗರನ್ನು ಜಾಸ್ತಿ ಹುಡುಕುತ್ತಾರೆ ಅಂತ ನೀವು ಭಾವಿಸಿದ್ದಾರೆ, ಅದು ತಪ್ಪು ಅಂತೆ. ಹೀಗಂತ ನಾವು ಹೇಳುತ್ತಿಲ್ಲ, ಒಬ್ಬ ಸಚಿವರೇ ಹೇಳುತ್ತಿದ್ದಾರೆ ನೋಡಿ.


ಇದನ್ನೂ ಓದಿ: Pothole Party: ಗುಂಡಿ ಮುಚ್ಚಲ್ವಾ? ಸರಿ ಬಿಡಿ ಪಾರ್ಟಿ ಮಾಡ್ತೀವಿ ಎಂದ ಜನ! ರಸ್ತೆಹೊಂಡದ ಪಾರ್ಟಿ ವೈರಲ್


ಈ ಬಗ್ಗೆ ಸಚಿವರು ಏನು ಹೇಳಿದ್ದಾರೆ ನೋಡಿ
ವೈವಾಹಿಕತೆಯ ಮಾರುಕಟ್ಟೆಯಲ್ಲಿ, ನಾಗರಿಕ ಸೇವಕನಾಗಿರುವುದು ಅಥವಾ ಉನ್ನತ ಸಂಸ್ಥೆಯಿಂದ ಪದವೀಧರರಾಗಿರುವುದು ಸಾಮಾಜಿಕ ಕರೆನ್ಸಿ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಅದು ಇನ್ನು ಮುಂದೆ ಹಾಗಿಲ್ಲ ಎಂದು ತೋರುತ್ತದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಶಾದಿ ಡಾಟ್ ಕಾಮ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್ ಎಂದರೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಲ್ಲದ ವರ ಅಂತ ವ್ಯಂಗ್ಯವಾಡಿದ್ದಾರೆ.


ಸಚಿವರು ಡಿಜಿಟಲ್ ಇಂಡಿಯಾ ಸಪ್ತಾಹದಲ್ಲಿ ಮಾತನಾಡುತ್ತಿದ್ದಾಗ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. "ಸ್ಟಾರ್ಟ್ ಅಪ್ ಉದ್ಯೋಗಿ" ಮತ್ತು "ಸ್ಟಾರ್ಟ್ ಅಪ್ ಸ್ಥಾಪಕರು" ಈಗ ಶಾದಿ ಡಾಟ್ ಕಾಮ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ನೀಡಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಅವರು ಬಹಿರಂಗಪಡಿಸಿದ್ದಾರೆ.


ಶಾದಿ ಡಾಟ್ ಕಾಮ್ ನಲ್ಲಿ ಈಗ ಹೆಚ್ಚಾಗಿ ಹುಡುಕಲ್ಪಡುವ ಕೀವರ್ಡ್
ಡಿಜಿಟಲ್ ಇಂಡಿಯಾ ಸಪ್ತಾಹದಲ್ಲಿ ತಮ್ಮ ಸಮಾರೋಪ ಭಾಷಣದಲ್ಲಿ ಚಂದ್ರಶೇಖರ್ ಅವರು ಇತ್ತೀಚೆಗೆ ಯಾರೋ ನನಗೆ ಹೇಳಿದ ಒಂದು ವಿಷಯವನ್ನು ನಿಮ್ಮ ಜೊತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಮತ್ತು ಇದನ್ನು ಹೇಳುವುದರ ಮೂಲಕ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ ಅಂತ ಹೇಳಿ "ಶಾದಿ ಡಾಟ್ ಕಾಮ್ ನಲ್ಲಿ ಈಗ ಹೆಚ್ಚಾಗಿ ಹುಡುಕಲ್ಪಡುವ ಕೀವರ್ಡ್ ಐಎಎಸ್ ಅಲ್ಲ, ಐಪಿಎಸ್ ಅಲ್ಲ, ಟಾಟಾ ಕಂಪನಿ ಅಥವಾ ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ವರನಲ್ಲ, ಅದು ಸ್ಟಾರ್ಟ್ ಅಪ್ ಉದ್ಯೋಗಿ ಅಥವಾ ಸ್ಟಾರ್ಟ್ ಅಪ್ ಸ್ಥಾಪಕ ಎಂದು ನನಗೆ ವಿಶ್ವಾಸಾರ್ಹವಾಗಿ ತಿಳಿಸಲಾಗಿದೆ” ಎಂದು ಹೇಳಿದರು.


ಇದನ್ನೂ ಓದಿ: Rare Birds: ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕ ಅಪರೂಪದ ಪಕ್ಷಿಗಳಿವು! ನೀವೂ ಒಮ್ಮೆ ನೋಡಿ


ಸಚಿವರು ತಮಾಷೆ ಮಾಡುತ್ತಿದ್ದಾರೋ ಅಥವಾ ಪ್ರಾಮಾಣಿಕವಾಗಿ ಮಾತನಾಡುತ್ತಿದ್ದರೋ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ ಟ್ವಿಟ್ಟರ್ ನಲ್ಲಿ ಮಾಡಿದ ಪೋಸ್ಟ್ ಗೆ ಅವರ ಪ್ರತಿಕ್ರಿಯೆ ಇದು ಮೊದಲಿನದು ಎಂದು ಸೂಚಿಸುತ್ತದೆ. "ಕೇವಲ ನಗುವುದಕ್ಕಾಗಿ" ಎಂದು ಚಂದ್ರಶೇಖರ್ ಅವರು ತಮ್ಮ ಕಾಮೆಂಟ್ ಗಳ ಬಗ್ಗೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಗುಜರಾತ್ ನ ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಡಿಜಿಟಲ್ ಇಂಡಿಯಾವು ಬಡವರಿಗೆ ಭ್ರಷ್ಟಾಚಾರದಿಂದ ಪರಿಹಾರವನ್ನು ನೀಡಿದೆ ಮತ್ತು ಅದು ಎಲ್ಲಾ ಕ್ಷೇತ್ರಗಳಲ್ಲಿ ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿದೆ ಎಂದು ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಹೇಳಿದರು.

Published by:Ashwini Prabhu
First published: