ನಮ್ಮ ದೇಶದಲ್ಲಿ ಒಬ್ಬ ಕೈಗಾರಿಕೋದ್ಯಮಿಯಾಗಿ (industrialist) ಹೆಸರು ಮಾಡುವುದು ಎಂದರೆ ಅಷ್ಟೊಂದು ಸುಲಭದ ಮಾತಲ್ಲ. ಹೌದು.. ಹೆಜ್ಜೆ ಹೆಜ್ಜೆಗೂ ಕಾಲೆಳೆಯುವ ಜನರ ಮಧ್ಯೆ ಇದ್ದುಕೊಂಡು ಸ್ವಂತ ಉದ್ದಿಮೆಯನ್ನು(Own Business) ಶುರು ಮಾಡಿ ತುಂಬಾನೇ ಸ್ಪರ್ಧೆಯ (Competitive) ನಡುವೆ ದೊಡ್ಡದಾಗಿ ಬೆಳೆದು ನಿಲ್ಲುವುದು ಎಂದರೆ ನಿಜಕ್ಕೂ ಸಾಧಾರಣವಾದ ಮಾತಂತೂ ಅಲ್ಲವೇ ಅಲ್ಲ ಬಿಡಿ. ಅನೇಕ ಜನಪ್ರಿಯ ಉದ್ದಿಮೆದಾರರ ಜೀವನದ (Life) ಘಟನೆಗಳು (Events) ಅನೇಕ ಯುವಕರಿಗೆ ಒಂದು ಸ್ಪೂರ್ತಿಯಾಗುತ್ತವೆ (Inspiration) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಸದಾ ಯುವಕರಿಗೆ ಸ್ಪೂರ್ತಿ ತುಂಬುವಂತಹ ಒಬ್ಬ ದೊಡ್ಡ ಕೈಗಾರಿಕೋದ್ಯಮಿಯ ಬಗ್ಗೆ ಇಲ್ಲಿ ನಾವು ಹೇಳಲಿದ್ದೇವೆ.
ನಿನ್ನೆ ತಾನೇ ತಮ್ಮ 85ನೇ ವರ್ಷಕ್ಕೆ ಕಾಲಿಟ್ಟ ರತನ್ ಟಾಟಾ..
ಭಾರತದಲ್ಲಿ ಅಷ್ಟೇ ಅಲ್ಲದೆ, ಇಡೀ ಜಗತ್ತಿನಾದ್ಯಂತ ಚಿರಪರಿಚಿತರಾದ ರತನ್ ಟಾಟಾ ಅವರ ವ್ಯಕ್ತಿತ್ವದ ಬಗ್ಗೆ ಕೇಳುವುದೇ ಒಂದು ಸ್ಫೂರ್ತಿ ನೀಡುತ್ತದೆ ಅಂತ ಹೇಳಬಹುದು.
ಇಂತಹ ಪ್ರಭಾವಿ ವ್ಯಕ್ತಿಗಳ ಜೀವನದ ಕಥೆಗಳನ್ನು ಕೇಳುವುದು ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತದೆ. ಈ ಬಿಸಿನೆಸ್ ಐಕಾನ್ ಬುಧವಾರ ತಮ್ಮ 85ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಭಾರತದ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಮತ್ತು ಸಾಮಾನ್ಯ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ವೆಂಚರ್ ಕ್ಯಾಪಿಟಲ್ ಕಂಪನಿಯಾದ ಕಲಾರಿ ಕ್ಯಾಪಿಟಲ್ ನ ವ್ಯವಸ್ಥಾಪಕ ನಿರ್ದೇಶಕಿಯಾದ ವಾಣಿ ಕೋಲಾ ಅವರು ಟಾಟಾ ಸನ್ಸ್ ನ ಅಧ್ಯಕ್ಷರನ್ನು ಭೇಟಿಯಾದಾಗಲೆಲ್ಲಾ ಅವರಿಂದ ತುಂಬಾನೇ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ.
ಟಾಟಾ ಸನ್ಸ್ ನ ಅಧ್ಯಕ್ಷರು ಮೀಟಿಂಗ್ ಗಳಿಗೆ ಹೇಗೆ ಸಿದ್ದರಾಗ್ತಾರೆ ಗೊತ್ತೇ?
ಕಲಾರಿ ಕ್ಯಾಪಿಟಲ್ ನ ವ್ಯವಸ್ಥಾಪಕ ನಿರ್ದೇಶಕಿಯಾದ ವಾಣಿ ಕೋಲಾ ಅವರು "ರತನ್ ಟಾಟಾ ಅವರು ಯಾವಾಗಲೂ ಮೀಟಿಂಗ್ ಗೆ ಬರುವಾಗ ಒಂದು ಕುತೂಹಲವನ್ನು ತರುತ್ತಾರೆ ಮತ್ತು ಸ್ಥಾಪಕ ಸಂವಹನಗಳಿಗೆ ಸಂಪೂರ್ಣವಾಗಿ ಸಿದ್ಧರಾಗಿರುತ್ತಾರೆ" ಎಂದು, ಅವರು ಲಿಂಕ್ಡ್ಇನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕೋಲಾ ಅವರು ರತನ್ ಟಾಟಾ ಅವರಿಂದ ಕಲೆತ ನಾಲ್ಕು ಪ್ರಮುಖ ಅಂಶಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ನೋಡಿ.
ಇದನ್ನೂ ಓದಿ:Ratan Tata: ಯುವ ತಂಡದ ಬೆನ್ನಿಗೆ ನಿಂತ ರತನ್ ಟಾಟಾ! ಈ ಕಂಪೆನಿಯಲ್ಲಿ ಇನ್ವೆಸ್ಟ್ ಮಾಡ್ತಾರಂತೆ ದಿಗ್ಗಜ ಉದ್ಯಮಿ
ಟಾಟಾ ಅವರ ಈ ಗುಣಗಳು ಕೋಲಾ ಅವರಿಗೆ ಸ್ಪೂರ್ತಿಯಂತೆ.
ಕೋಲಾ ಅವರನ್ನು ಪ್ರೇರೇಪಿಸಿದ ಮೊದಲ ವಿಷಯವೆಂದರೆ ಮೀಟಿಂಗ್ ಗಳಿಗೆ ರತನ್ ಟಾಟಾ ಅವರು ಮಾಡಿಕೊಳ್ಳುವ ಸಿದ್ಧತೆ. "ಸ್ಥಾಪಕರ ಸಭೆಗಳಿಗೆ ಅವರು ಯಾವಾಗಲೂ ಒಳನೋಟವುಳ್ಳ ಪ್ರಶ್ನೆಗಳೊಂದಿಗೆ ಬರುತ್ತಿದ್ದರು.
ವಿವರ, ಕುತೂಹಲ ಮತ್ತು ಶಾಂತತೆಯ ಕಡೆಗೆ ಅವರ ಗಮನ, ಹಾಗೆಯೇ ಅವರ ಬುದ್ಧಿವಂತಿಕೆ ಮತ್ತು ತರ್ಕಬದ್ಧವಾಗಿ ಯೋಚಿಸುವ ಸಾಮರ್ಥ್ಯವು ನನಗೆ ತುಂಬಾನೇ ಇಷ್ಟವಾಗುತ್ತದೆ” ಎಂದು ಅವರು ಹೇಳಿದರು.
ಪ್ರತಿಯೊಬ್ಬರ ಪ್ರತಿಕ್ರಿಯೆಗೆ ಅವರು ನೀಡುವ ಸಹಾನುಭೂತಿಯ ವಿಧಾನವು ವಾಣಿ ಕೋಲಾ ಅವರಿಗೆ ಇಷ್ಟವಾಗುವ ಇವರ ಎರಡನೇ ಕಲಿಕೆಯಾಗಿದೆ.
"ಅವರು ಯಾವಾಗಲೂ ಎದುರಿಗಿರುವವರ ಆಲೋಚನೆಗಳನ್ನು ಆಲಿಸಲು ಮತ್ತು ಯುವ ಉದ್ಯಮಿಗಳೊಂದಿಗೆ ತೊಡಗಿಸಿಕೊಳ್ಳಲು ತುಂಬಾ ಉತ್ಸುಕರಾಗಿರುತ್ತಾರೆ" ಎಂದು ಹೇಳಿದರು.
ಟಾಟಾ ಅವರಿಂದ ಕಲಿತ ಮೂರನೇ ಅಂಶವೆಂದರೆ ದಯೆ, ನಮ್ರತೆ ಮತ್ತು ಆಡಂಬರವಿಲ್ಲದ ಸರಳ ಜೀವನಶೈಲಿ ಎಂದು ಅವರು ಹೇಳಿದರು. "ನಿಜವಾದ ನಾಯಕ ಹೇಗಿರಬೇಕು ಎಂಬುದರ ಬಗ್ಗೆ ಅವರನ್ನು ನೋಡಿ ತಿಳಿದುಕೊಳ್ಳಬಹುದು" ಎಂದು ಕೋಲಾ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಕೊಡುಗೆ ನೀಡಲು ರತನ್ ಟಾಟಾ ಅವರ ಉತ್ಸುಕತೆಯು ಕೋಲಾ ಅವರಿಗೆ ಇಷ್ಟವಾದ ನಾಲ್ಕನೇ ಗುಣವಾಗಿದೆ.
"ಸಕಾರಾತ್ಮಕ ವ್ಯತ್ಯಾಸವನ್ನು ಉಂಟು ಮಾಡುವ ಅವರ ವಿಚಾರಗಳು ನಿಜವಾಗಿಯೂ ಉತ್ತೇಜಿಸುತ್ತವೆ. ಅವರು ದೊಡ್ಡ ಸ್ಟಾರ್ಟ್ಅಪ್ ಗಳನ್ನು ಮುನ್ನಡೆಸುತ್ತಿರುವ ಉದ್ಯಮಿಗಳಿಗೆ ಆದರ್ಶಪ್ರಾಯರಾಗಿದ್ದಾರೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ