ಲಹೊಸದಿಲ್ಲಿ(ಮೇ.27): ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗುತ್ತಿರುವ ವೀಡಿಯೊದಲ್ಲಿ (Video), ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಎಂದು ಗುರುತಿಸಲಾದ ಧಾರ್ಮಿಕ ಬೋಧಕರೊಬ್ಬರು (Religious Leader) ವ್ಯಕ್ತಿಯೊಬ್ಬರನ್ನು "ಅಸ್ಪೃಶ್ಯ" (Untouchable) ಎಂದು ಕರೆಯುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿ ಧರ್ಮಬೋಧಕನ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದಾಗ, ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನನ್ನನ್ನು ಮುಟ್ಟಬೇಡ, ನೀನು ಅಸ್ಪೃಶ್ಯ ಎಂದು ಹೇಳಿದ್ದು ವಿಡಿಯೋ (Video) ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ತಾರತಮ್ಯದ ವರ್ತನೆಯನ್ನು ನೋಡಿದ ನಂತರ, ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲು ಪ್ರಾರಂಭಿಸಿದರು. ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ವಿರುದ್ಧ ಎಫ್‌ಐಆರ್ ಹಾಕಬೇಕು ಎಂದು ಜನರು ಒತ್ತಾಯಿಸಿದರು. #ArrestDhirendraShastri ಕೂಡ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು.
ಬ್ರಾಹ್ಮಣ ಪುರೋಹಿತ ಮತ್ತು ಕಥೆಗಾರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಸಾರ್ವಜನಿಕವಾಗಿ ತಾರತಮ್ಯ ಮಾಡುತ್ತಾರೆ. "ನನ್ನನ್ನು ಮುಟ್ಟಬೇಡಿ ನೀವು ಅಸ್ಪೃಶ್ಯರು" ಎಂದು ಬಹಿರಂಗವಾಗಿ ಹೇಳುತ್ತಾರೆ ಎಂದು ಬಳಕೆದಾರರು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
"ಪೊಲೀಸರು ಈ ಜಾತಿವಾದಿ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸುತ್ತಾರೆಯೇ" ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆಯೂ ತಮ್ಮ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ನಿಮ್ಮ ಹಳ್ಳಿಯಲ್ಲೂ ವ್ಯಥೆ ಪಡಬೇಕಾಗುತ್ತದೆ ಎಂದು ವೇದಿಕೆಯ ಮೇಲೆ ಒಮ್ಮೆ ಹೇಳಿದ ಅವರು, ಎಲ್ಲರೂ ಒಗ್ಗಟ್ಟಾಗಿ ಕಲ್ಲು ತೂರಾಟಗಾರರ ಮನೆಗೆ ಬುಲ್ಡೋಜರ್ ಓಡಿಸಬೇಕೆಂದು ವಿನಂತಿಸಿದ್ದರು. ಅವರು ಬುಲ್ಡೋಜರ್‌ಗಳನ್ನು ಖರೀದಿಸಲು ಹೊರಟಿದ್ದಾರೆ. ಸನಾತನ ಮಹಾತ್ಮರು, ಸಂತರು ಮತ್ತು ಭಾರತೀಯ ಸನಾತನ ಹಿಂದೂಗಳ ಮೇಲೆ ಕಲ್ಲು ಎಸೆಯುವವರ ಮನೆಗೆ ಬುಲ್ಡೋಜರ್‌ಗಳನ್ನು ಓಡಿಸಬೇಕು ಎಂದಿದ್ದರು.
ಇದನ್ನೂ ಓದಿ: Leopard Burnt Alive: ಚಿರತೆಯನ್ನು ಜೀವಂತ ಸುಟ್ಟ ಮಂದಿ! 150 ಜನರ ವಿರುದ್ಧ FIR
ಸನಾತನಿಗಳ ನಾಡಿನಲ್ಲಿ ರಾಮನವಮಿಯಂದು ಯಾರಾದರೂ ಕಲ್ಲು ತೂರಾಟ ಮಾಡುತ್ತಿದ್ದರೆ, ಹಿಂದೂಗಳೇ ಎಚ್ಚೆತ್ತುಕೊಳ್ಳಿ, ಒಗ್ಗೂಡಿ, ನಿಮ್ಮ ಕೈಯಲ್ಲಿ ಆಯುಧ ಹಿಡಿದು ನಾವು ಹಿಂದೂಗಳು ಒಂದಾಗಿದ್ದೇವೆ ಎಂದು ಅವರು ಹೇಳಿದರು.
ಜೀವಂತವಾಗಿದೆ ಅನಿಷ್ಠ ಪದ್ಧತಿಗಳು
ಹಿಂದಿನ ಕಾಲದಿಂದ ಹಿರಿಯ ನಾಯಕರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ್ದೇ ಬಂತು. ಆದರೆ ಇಂದಿಗೂ ಅಸ್ಪೃಷ್ಯತೆಯ ದೃಶ್ಯ ನಾವು ಕಾಣುತ್ತಿದ್ದೇವೆ ಎಂದರೆ ನಿಜಕ್ಕೂ ವಿಪರ್ಯಾಸ. ಆದರೆ ದುರದೃಷ್ಟವಶಾತ್ ನಾವಿಂಥಾ ಘಟನೆಗಳನ್ನು ನೋಡುತ್ತಲೇ ಇರುತ್ತೇವೆ.
#Untouchability Caste Brahmin priest and storyteller Pandit Dhirendra Krishna Shastri practices untouchability in public, he is openly telling a person "Don't touch me you are untouchable"
Will the police register an FIR against this Casteist person? pic.twitter.com/jp8i3cpQk9
— Voice of Bahujan Samaj (@VOYItTeam) May 26, 2022
ಇದನ್ನೂ ಓದಿ: Bail Denied: 10 ಜನ ಯಾತ್ರಿಗಳ ಫೇಕ್ ಎನ್ಕೌಂಟರ್, 34 ಪೊಲೀಸರಿಗೆ ಜಾಮೀನು ನಿರಾಕರಣೆ!
ಅಸ್ಪೃಶ್ಯತೆ ಎನ್ನುವುದು ವೈದಿಕ ಹಿಂದೂ ಸಾಹಿತ್ಯದಲ್ಲಿ "ಉನ್ನತ ಜಾತಿ" ವ್ಯಕ್ತಿಗಳು ಜಾತಿ ವ್ಯವಸ್ಥೆಯಿಂದ ಹೊರಗಿಡಲ್ಪಟ್ಟ ವ್ಯಕ್ತಿಗಳನ್ನು "ಅಸ್ಪೃಶ್ಯರು" ಎಂದು ಪರಿಗಣಿಸುವ ಜನರ ಗುಂಪನ್ನು ಬಹಿಷ್ಕರಿಸುವ ಅಭ್ಯಾಸವಾಗಿದೆ.
ಸಾಂಪ್ರದಾಯಿಕವಾಗಿ, ಅಸ್ಪೃಶ್ಯರೆಂದು ನಿರೂಪಿಸಲ್ಪಟ್ಟ ಗುಂಪುಗಳೆಂದರೆ ಅವರ ವೃತ್ತಿಗಳು ಮತ್ತು ಜೀವನ ಪದ್ಧತಿಗಳು ಶಾಸ್ತ್ರೋಕ್ತವಾಗಿ "ಮಾಲಿನ್ಯ" ಚಟುವಟಿಕೆಗಳನ್ನು ಒಳಗೊಂಡಿರುತ್ತವೆ, ಉದಾಹರಣೆಗೆ ಮೀನುಗಾರರು, ಕೈಯಿಂದ ಕಸಿದುಕೊಳ್ಳುವವರು, ಗುಡಿಸುವವರು ಮತ್ತು ತೊಳೆಯುವವರು ಈ ರೀತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ