• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Scam: ಆರ್ಡರ್ ಮಾಡದೆ ಪಾರ್ಸೆಲ್ ಬಂದ್ರೆ ತೆಗೆದುಕೊಳ್ಳಬೇಡಿ, ಇದೊಂದು ಹೊಸ ಸ್ಕ್ಯಾಮ್ ಅಂತೆ! ಎಚ್ಚರ

Scam: ಆರ್ಡರ್ ಮಾಡದೆ ಪಾರ್ಸೆಲ್ ಬಂದ್ರೆ ತೆಗೆದುಕೊಳ್ಳಬೇಡಿ, ಇದೊಂದು ಹೊಸ ಸ್ಕ್ಯಾಮ್ ಅಂತೆ! ಎಚ್ಚರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸೈಬರ್ ಕಳ್ಳರಿಂದ ತಮ್ಮ ಹಣವನ್ನು ಕಳೆದುಕೊಳ್ಳದೆ ಜೋಪಾನವಾಗಿ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆಯವರು ‘ಎಚ್ಚರವಾಗಿರಿ’ ಅಂತ ಅನೇಕ ರೀತಿಯ ಜಾಹಿರಾತುಗಳನ್ನು ಎಲ್ಲಾ ಮಾಧ್ಯಮಗಳಲ್ಲಿ ನೀಡುತ್ತಿದ್ದಾರೆ. ಆದರೂ ಸಹ ಈ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕಿ ಹಣವನ್ನು ದೋಚುತ್ತಿದ್ದಾರೆ ಮತ್ತು ಜನರು ಸಹ ಇಷ್ಟೊಂದು ಎಚ್ಚರಿಕೆಗಳನ್ನು ನೀಡಿದರೂ ಸಹ ಎರಡು ಬಾರಿ ಯೋಚನೆ ಮಾಡದೆ ಈ ವಂಚಕರ ಬಲೆಗೆ ಬೀಳುತ್ತಿದ್ದಾರೆ.

ಮುಂದೆ ಓದಿ ...
  • Share this:

ಈಗಂತೂ ಈ ಕಳ್ಳರು (Thieves), ವಂಚಕರು ಮುಗ್ಧ ಜನರನ್ನು ಹೇಗೆಲ್ಲಾ ಮೋಸ ಮಾಡುತ್ತಾರೆ ಅಂತ ಊಹಿಸುವುದಕ್ಕೂ ಸಹ ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ನಲ್ಲಿ (Internet) ನಾವು ನಮ್ಮ ಬ್ಯಾಂಕ್ ಮಾಹಿತಿಯನ್ನು ನಮೂದಿಸುವುದು ಮತ್ತು ನಮ್ಮ ಮೊಬೈಲ್ ಗೆ ಬರುವಂತಹ ಒಟಿಪಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಹೀಗೆ ಒಂದೇ, ಎರಡೇ ಅನೇಕ ರೀತಿಯಲ್ಲಿ ಜನರಿಗೆ ಮೋಸ ಮಾಡಿ ಹಣ (Money) ದೋಚುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಲ್ಲದೆ ಇಂತಹ ಸೈಬರ್ ಕಳ್ಳರಿಂದ ತಮ್ಮ ಹಣವನ್ನು ಕಳೆದುಕೊಳ್ಳದೆ ಜೋಪಾನವಾಗಿ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆಯವರು (Police Department) ‘ಎಚ್ಚರವಾಗಿರಿ’ ಅಂತ ಅನೇಕ ರೀತಿಯ ಜಾಹಿರಾತುಗಳನ್ನು ಎಲ್ಲಾ ಮಾಧ್ಯಮಗಳಲ್ಲಿ ನೀಡುತ್ತಿದ್ದಾರೆ.


ಆದರೂ ಸಹ ಈ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕಿ ಹಣವನ್ನು ದೋಚುತ್ತಿದ್ದಾರೆ ಮತ್ತು ಜನರು ಸಹ ಇಷ್ಟೊಂದು ಎಚ್ಚರಿಕೆಗಳನ್ನು ನೀಡಿದರೂ ಸಹ ಎರಡು ಬಾರಿ ಯೋಚನೆ ಮಾಡದೆ ಈ ವಂಚಕರ ಬಲೆಗೆ ಬೀಳುತ್ತಿದ್ದಾರೆ.


ಹೈದರಾಬಾದ್ ನಲ್ಲಿ ಹೊಸ ರೀತಿಯ ಸ್ಕ್ಯಾಮ್
ಈಗ ಹೈದರಾಬಾದ್ ನಗರದಲ್ಲಿ ಹೊಸ ರೀತಿಯ ಒಂದು ಸ್ಕ್ಯಾಮ್ ಶುರುವಾಗಿದೆಯಂತೆ, ಅದನ್ನು ಹೇಗಿದೆ ಅಂತ ನೀವು ತಿಳಿದುಕೊಂಡರೆ ಒಂದು ಕ್ಷಣ ಬೆಚ್ಚಿ ಬೀಳುವುದು ಗ್ಯಾರೆಂಟಿ. ಈಗ ಹೈದರಾಬಾದ್ ನಗರದಲ್ಲಿ ಹೊಸ ವಂಚನೆಯೊಂದು ಬೆಳಕಿಗೆ ಬಂದಿದ್ದು, ಇದರ ಬಗ್ಗೆ ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ನೀವು ಇತ್ತೀಚೆಗೆ ಹೇರ್ ಕ್ಲಿಪ್ ಗಳು, ಕ್ರೀಮ್ ಗಳು ಮತ್ತು ಸನ್ ಗ್ಲಾಸ್ ಗಳಂತಹ ವಸ್ತುಗಳನ್ನು ಹೊಂದಿರುವ ಪ್ಯಾಕೇಜ್ ನೀವು ಆರ್ಡರ್ ಮಾಡದೆ ಇದ್ದರೂ ನಿಮ್ಮ ಮನೆಗೆ ಡೆಲಿವರಿ ಹುಡುಗನೊಬ್ಬ ತೆಗೆದುಕೊಂಡು ಬಂದರೆ, ನೀವು ಅದನ್ನು ಸ್ವೀಕರಿಸಬೇಡಿ.


ಕೊರಿಯರ್ ಬರುವ ಮುಂಚೆ ನಕಲಿ ಸಂದೇಶ ಕೂಡ ಬರುತ್ತೆ ಎಚ್ಚರ
ಈ ರೀತಿಯ ಪ್ಯಾಕೇಜ್ ಗಳು ನಿಮ್ಮ ಮನೆಯ ಬಾಗಿಲಿಗೆ ಬರುವ ಮುಂಚೆ ನೀವು ಕೊರಿಯರ್ ಕಂಪನಿಗಳಿಂದ ನಕಲಿ ಸಂದೇಶಗಳನ್ನು ಸಹ ಪಡೆಯಬಹುದು, ಹಣವನ್ನು ಕೈಗೆಟುಕುವಂತೆ ಇರಿಸಿಕೊಳ್ಳಿ ಮತ್ತು ಆನ್ಲೈನ್ ಆರ್ಡರ್ ತಲುಪಿಸಲು ಡೆಲಿವರಿ ಎಕ್ಸಿಕ್ಯೂಟೀವ್ ನಿಮ್ಮ ಮನೆಯ ಬಾಗಿಲಿಗೆ ಬಂದ ತಕ್ಷಣವೇ ಆ ಪಾರ್ಸಲ್ ಅನ್ನು ತೆಗೆದುಕೊಂಡು ಅವರಿಗೆ ಹಣ ಪಾವತಿಸುವಂತೆ ಕೇಳಬಹುದು.


ಇದನ್ನೂ ಓದಿ: Snake Bite: ಹಾವು ಕಡಿದು ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನೂ ಸರ್ಪ ಕಚ್ಚಿ ಸಾವು


ಸೈಬರಾಬಾದ್ ಪೊಲೀಸರ ಸೈಬರ್ ಅಪರಾಧ ವಿಭಾಗವು ಮಂಗಳವಾರ ಇಂತಹ ಡೆಲಿವರಿಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ, ಇದು ಹೊಸ ಹಗರಣದ ಭಾಗವಾಗಿದೆ ಎಂದು ಹೇಳಿದೆ. ಈ ಸ್ಕ್ಯಾಮ್ ನಲ್ಲಿ ಡೆಲಿವರಿ ಏಜೆಂಟ್ ನಂತೆ ನಟಿಸುವ ಮತ್ತು ಹಣವನ್ನು ಒತ್ತಾಯಿಸುವಾಗ ಕೆಲವು ಯಾದೃಚ್ಛಿಕ ಪಾರ್ಸೆಲ್ ಅನ್ನು ನಿಮಗೆ ಹಸ್ತಾಂತರಿಸುವುದನ್ನು ಒಳಗೊಂಡಿದೆ. ನೀವು ಪ್ಯಾಕೇಜ್ ಅನ್ನು ನಿರಾಕರಿಸಿದರೆ, ರೇಟಿಂಗ್ ಉದ್ದೇಶಗಳಿಗಾಗಿ ನೀವು ಸ್ವೀಕರಿಸಿದ ಒಟಿಪಿಯನ್ನು ತಮಗೆ ತಿಳಿಸುವಂತೆ ಅವರು ನಿಮ್ಮನ್ನು ಕೇಳುತ್ತಾರೆ. ಒಟಿಪಿಯನ್ನು ನೀವು ಅವರಿಗೆ ಹೇಳಿದ ನಂತರ, ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳು ಅವರು ಕಳುವು ಮಾಡುತ್ತಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ ಎಂದು ಪೊಲೀಸರು ಜನರನ್ನು ಎಚ್ಚರಿಸಿದ್ದಾರೆ.


ಇದ್ರಿಂದಲೂ ಹೇಗೆ ಹಣ ದೋಚುತ್ತಾರೆ ನೋಡಿ 
ನೀವು ಆ ಪ್ಯಾಕೇಜ್ ಅನ್ನು ಸ್ವೀಕರಿಸಿದರೆ ಮತ್ತು ಕನಿಷ್ಠ ಶುಲ್ಕವನ್ನು ಸಹ ಪಾವತಿಸಲು ಸಿದ್ಧರಿದ್ದರೆ, ಸ್ಕ್ಯಾಮರ್ ಗಳು ಡೆಲಿವರಿ ಪಾವತಿ ಮಾಡುವಂತೆ ಕೋರಿ ಲಿಂಕ್ ಅನ್ನು ಕಳುಹಿಸುತ್ತಾರೆ. ಒಮ್ಮೆ ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳಿಗೆ ನೀವು ಅವರಿಗೆ ಪ್ರವೇಶವನ್ನು ನೀಡುತ್ತೀರಿ ಎಂದರ್ಥ.


ಇದನ್ನೂ ಓದಿ:  Lottery Results: ಅಮ್ಮನ ಮಾತು ಕೇಳಿ ಕೋಟ್ಯಾಧಿಪತಿಯಾದ! 6 ರೂ.ನಿಂದ ಕೋಟಿ ಒಡೆಯ


ನೀವು ಅನಪೇಕ್ಷಿತ ಪ್ಯಾಕೇಜ್ ಅನ್ನು ಸ್ವೀಕರಿಸಿದ್ದರೆ ಮತ್ತು ನಿಮಗೆ ತಿಳಿದಿರುವ ಯಾರೂ ನಿಮಗೆ ಉಡುಗೊರೆಯನ್ನು ಕಳುಹಿಸಿಲ್ಲ ಎಂಬುದನ್ನು ದೃಢಪಡಿಸಿಕೊಂಡ ನಂತರ ನೀವು ಸಹಾಯಕ್ಕಾಗಿ dcp-dd-hyd@tspolice.gov.in ಗೆ ಮೇಲ್ ಕಳುಹಿಸುವ ಮೂಲಕ ಅಥವಾ 040-27852412 ಗೆ ಕರೆ ಮಾಡುವ ಮೂಲಕ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

Published by:Ashwini Prabhu
First published: