ಅಶ್ರಫ್ ಘಾನಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳೆವಣಿಗೆ ಸಂಬಂಧ ಸಿಎನ್ಎನ್- ನ್ಯೂಸ್ 18 ಜೊತೆಗೆ ಎಕ್ಸ್ಕ್ಲೂಸಿವ್ ಸಂವಾದ ನಡೆಸಿದ್ದು, ಘಟನೆಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮತ್ತು ಭವಿಷ್ಯದಲ್ಲಿ ನಾವು ಬದುಕುತ್ತೇವೆ ಎಂಬ ಭರವಸೆ ಕೂಡ ಇಲ್ಲದಂತಾಗಿದೆ ಎಂದು ಅವಲತ್ತುಕೊಂಡಿದ್ದಾರೆ.
ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ಬದುಕುತ್ತೇವೆಯೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ವಿಮಾನ ನಿಲ್ದಾಣ ಜನರಿಂದ ತುಂಬಿ ತುಳುಕುತ್ತಿದೆ. ವಿಮಾನ ನಿಲ್ದಾಣಕ್ಕೆ ಹಾನಿಯಾಗಿದೆ. ತಾಲಿಬಾನಿಗಳು ಗುಂಡುಗಳನ್ನು ಹಾರಿಸುತ್ತಿದ್ದಾರೆ, ಮತ್ತು ಜನರನ್ನು ಬಂಧಿಸುತ್ತಿದ್ದಾರೆ. ಇದರಿಂದಾಗಿ ಹಲವು ಜನ ಗಂಭೀರ ಗಾಯಗೊಂಡಿದ್ದಾರೆ. ಇನ್ನು ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕನ್ನರು ಸಹ ಗುಂಡು ಹಾರಿಸುತ್ತಿದ್ದಾರೆ. ಆಫ್ಘಾನ್ ಮತ್ತು ತಾಲಿಬಾನಿಗಳ ನಡುವೆ ನಡೆಯುತ್ತಿರುವ ಗುಂಡಿನ ಕಾಳಗದ ನಡುವೆ ಸಿಲುಕಿರುವ ಆಕೆ ಭಾರತದ ವಿಮಾನಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಆಕೆಯ ಗಂಡ ಮತ್ತು ಮಗನ ಬಳಿ ಭಾರತೀಯ ಪಾಸ್ಪೋರ್ಟ್ಗಳು ಇವೆ. ಆದರೆ, ಈಕೆಗೆ ಇನ್ನೂ ವೀಸಾ ಸಿಕ್ಕಿಲ್ಲ.
ಯಾರೊಬ್ಬರು ಕೂಡ ಇಲ್ಲಿ ಸುರಕ್ಷಿತವಲ್ಲ. ವಿಮಾನ ನಿಲ್ದಾಣದಲ್ಲಿ ಸಾಕಷ್ಟು ರಾಜತಾಂತ್ರಿಕ ಸಿ್ಬ್ಬಂದಿಗಳು ಇದ್ದಾರೆ. ತಾಲಿಬಾನ್ ಬಂಡುಕೋರರು ಬಂದು ಎಲ್ಲಾ ಅಫ್ಘಾನಿಸ್ತಾನಿಗಳನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅವರು ಭಾರತೀಯರನ್ನು ಮಾತ್ರ ವಿಮಾನ ನಿಲ್ದಾಣದಲ್ಲಿ ಉಳಿಯಲು ಅನುಮತಿ ನೀಡುತ್ತಿದ್ದಾರೆ,” ಎಂದು ಅವರು ಹೇಳಿದರು.
ತಾಲಿಬಾನ್ ಬಂಡುಕೋರರು ಭಾನುವಾರ ಕಾಬೂಲ್ ಪ್ರವೇಶಿಸಿ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. ಅಘ್ಘಾನ್ನಲ್ಲಿ ಎದ್ದಿರುವ ಆಂತರಿಕ ಗಲಭೆಯಿಂದಾಗಿ ಅಲ್ಲಿ ನೆಲೆಸಿರುವ ಭಾರತೀಯ ರಾಯಭಾರ ಸಿಬ್ಬಂದಿಯನ್ನು ಮತ್ತು ನಾಗರಿಕರನ್ನು ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಆರಂಭಿಸಿದೆ. ಮುಂದಿನ 48 ಗಂಟೆಗಳಲ್ಲಿ ಎಲ್ಲರನ್ನು ಭಾರತಕ್ಕೆ ವಾಪಸ್ ಕರೆತರುವ ಕೆಲಸ ಪೂರ್ಣಗೊಳ್ಳಲಿದೆ.
ಪೊಲೀಸರು ಮತ್ತು ಇತರ ಸರ್ಕಾರಿ ಪಡೆಗಳು ಭಾನುವಾರ ಕಾಬೂಲ್‌ನಲ್ಲಿ ತಮ್ಮ ಹುದ್ದೆಗಳನ್ನು ಬಿಟ್ಟುಕೊಟ್ಟ ನಂತರ, ತಾಲಿಬಾನ್ ಬಂಡುಕೋರರು ನಗರದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ವಶಪಡಿಸಿಕೊಂಡರು ಮತ್ತು ಅಧ್ಯಕ್ಷರ ಅರಮನೆಗೆ ಪ್ರವೇಶಿಸಿದರು.
ಅಂತಾರಾಷ್ಟ್ರೀಯ ಸಂಸ್ಥೆಗಳು, ಹಾಗೂ ಅತಿಹೆಚ್ಚು ರಾಯಭಾರ ಕಚೇರಿಗಳಿದ್ದ ಜಿಲ್ಲೆಯ ಹಸಿರು ವಲಯದಲ್ಲಿ ತಾಲಿಬಾನಿಗಳು ಸೋಮವಾರ ರೈಫಲ್ಗಳನ್ನು ಹೆಗಲ ಮೇಲೆ ಏರಿಸಿಕೊಂಡು ಸಂಚಾರ ಮಾಡುತ್ತಿರುವುದು ಕಂಡು ಬಂದಿದೆ.
ಅಘ್ಘನ್ನರು ಭಯಪಡಬಾರದು ಮತ್ತು ಅಮೆರಿಕ ಬೆಂಬಲಿತ ಮೈತ್ರಿಕೂಟವನ್ನು ಬೆಂಬಲಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ತಾಲಿಬಾನಿಗಳು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.
ಇದನ್ನು ಓದಿ: Afghanistan Crisis; ಕಾಬೂಲ್ ಪ್ರವೇಶಿಸಿದ ತಾಲಿಬಾನಿಗಳು, ಅಧಿಕಾರದಿಂದ ಕೆಳಗಿಳಿದ ಅಶ್ರಫ್ ಘಾನಿ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ತಾಲಿಬಾನ್ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ತನ್ನ ಹೋರಾಟಗಾರರಿಗೆ ನಗರದ ಮೇಲೆ ಹಿಡಿತ ಸಾಧಿಸಿದ ನಂತರ ಶಿಸ್ತಿನಿಂದ ಇರಬೇಕೆಂದು ಕರೆ ನೀಡಿದರು. "ಈಗ ಪರೀಕ್ಷಿಸಲು ಮತ್ತು ಸಾಬೀತು ಮಾಡಲು ಸಮಯ ಬಂದಿದೆ. ಈಗ ನಾವು ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಬಹುದು ಮತ್ತು ಸುರಕ್ಷತೆ ಮತ್ತು ಜೀವನದ ಸೌಕರ್ಯವನ್ನು ಖಾತ್ರಿಪಡಿಸಿಕೊಳ್ಳಬಹುದು" ಎಂದು ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ