'ನಿಮ್ಮ ಲಿಂಗ ತಾರತಮ್ಯವನ್ನು ನನ್ನ ಮೇಲೆ ಹೇರಬೇಡಿ'; ಸ್ತ್ರೀ ದ್ವೇಷದ ಟೀಕೆ ಸಮರ್ಥಿಸಿಕೊಂಡ ರಾಹುಲ್​

ನಿರ್ಮಲಾ ಸೀತಾರಾಮನ್​ ಜಾಗದಲ್ಲಿ ಯಾರೇ ಪುರುಷ ಸಚಿವ ಇದ್ದರೂ ನಾನು ಇದೇ ರೀತಿ ಹೇಳಿಕೆ ನೀಡುತ್ತಿದೆ. ನನ್ನ ಹೇಳಿಕೆಯಲ್ಲಿ ಲಿಂಗ ತಾರತಮ್ಯವನ್ನು ಹುಡುಕಬೇಡಿ. ಪ್ರಧಾನಿ ರಫೇಲ್​ ಕುರಿತ ಪ್ರಶ್ನೆಗೆ ಸಮರ್ಥಿಸಿಕೊಳ್ಳಬೇಕು ಎಂಬ ನಿಲುವಿಗೆ ನಾನು ಈಗಲೂ ಬದ್ದನಾಗಿದ್ದೇನೆ. ಆದರೆ ಅವರಿಗೆ ಆ ಧೈರ್ಯವಿಲ್ಲ

Seema.R | news18
Updated:January 13, 2019, 12:38 PM IST
'ನಿಮ್ಮ ಲಿಂಗ ತಾರತಮ್ಯವನ್ನು ನನ್ನ ಮೇಲೆ ಹೇರಬೇಡಿ'; ಸ್ತ್ರೀ ದ್ವೇಷದ ಟೀಕೆ ಸಮರ್ಥಿಸಿಕೊಂಡ ರಾಹುಲ್​
ನಿರ್ಮಲಾ ಸೀತಾರಾಮನ್​-ರಾಹುಲ್​ ಗಾಂಧಿ
Seema.R | news18
Updated: January 13, 2019, 12:38 PM IST
ನವದೆಹಲಿ (ಜ.13): ರಫೇಲ್​ ಪ್ರಕರಣದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದು ರಕ್ಷಣಾ ಸಚಿವರ ಹಿಂದೆ ಅಡಗಿ ಕುಳಿತಿದ್ದಾರೆ ಎಂಬ ರಾಹುಲ್​ ಗಾಂಧಿ ಮಾತಿಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ಈ ಸಂಬಂಧ ಮಹಿಳಾ ಆಯೋಗ ಕೂಡ ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ ಮಾಡಿತ್ತು.

ತಮ್ಮ ಹೇಳಿಕೆಯನ್ನು ಯಾವ ರೀತಿ ಸ್ತ್ರೀ ದ್ವೇಷಿ ಎಂದು ತಿರುಚಲಾಗಿದೆ ಎಂಬುದರ ಕುರಿತು ಈಗ ಕಾಂಗ್ರೆಸ್​ ಅಧ್ಯಕ್ಷ ಸಮಾಜಾಯಿಸಿ ನೀಡಿದ್ದಾರೆ. ನಾನು ಪ್ರಧಾನಿ ಮೋದಿ ವಿರುದ್ಧ ಮಾತನಾಡಿರುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ತೇಜೋವಧೆ ಮಾಡಿರುವುದು ಎಂಬುದಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ದುಬೈನ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್​ ಜಾಗದಲ್ಲಿ ಯಾರೇ ಪುರುಷ ಸಚಿವ ಇದ್ದರೂ ನಾನು ಇದೇ ರೀತಿ ಹೇಳಿಕೆ ನೀಡುತ್ತಿದೆ. ನನ್ನ ಹೇಳಿಕೆಯಲ್ಲಿ ಲಿಂಗ ತಾರತಮ್ಯವನ್ನು ಹುಡುಕಬೇಡಿ. ಪ್ರಧಾನಿ ರಫೇಲ್​ ಕುರಿತ ಪ್ರಶ್ನೆಗೆ ಸಮರ್ಥಿಸಿಕೊಳ್ಳಬೇಕು ಎಂಬ ನಿಲುವಿಗೆ ನಾನು ಈಗಲೂ ಬದ್ದನಾಗಿದ್ದೇನೆ. ಆದರೆ ಅವರಿಗೆ ಆ ಧೈರ್ಯವಿಲ್ಲ ಎಂದಿದ್ದಾರೆ.

ಜೈಪುರದಲ್ಲಿ ರಾಜಕೀಯ ಸಮಾವೇಶದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್​, 56 ಇಂಚಿನ ಕಾವಲುಗಾರ ರಫೇಲ್​ ವಿಷಯ ಬಂದಾಕ್ಷಣ ಓಡಿ ಹೋಗಿ ಮಹಿಳೆಗೆ ತನ್ನನ್ನು ರಕ್ಷಣೆ ಮಾಡುವಂತೆ ಕೋರಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದರು.

ಇದನ್ನು ಓದಿ: ನಿರ್ಮಲಾ ಸೀತಾರಾಮನ್​ ಹಿಂದೆ ಪ್ರಧಾನಿ ಮೋದಿ ಹೆದರಿ ಅಡಗಿ ಕುಳಿತಿದ್ದಾರೆ; ರಾಹುಲ್​ ಗಾಂಧಿ ವ್ಯಂಗ್ಯ 

ರಾಹುಲ್​ ಹೇಳಿಕೆಗೆ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ ಮೋದಿ, ಕಾಂಗ್ರೆಸ್​ ಅಧ್ಯಕ್ಷ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಇದು ದೇಶದ ಮಹಿಳೆಯರಿಗೆ ಮಾಡುವ ಅನುಮಾನ. ಸಂಸತ್ತಿನಲ್ಲಿ ನಿರ್ಮಲಾ ಸೀತಾರಮನ್​ ರಫೇಲ್​ ಕುರಿತು ಅದ್ಭುತವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ ಎಂದರು.

ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಕೂಡ ಈ ಕುರಿತು ರಾಹುಲ್​ ಗಾಂಧಿ ಕ್ಷಮೆ ಕೇಳಬೇಕು ಎಂದು ಟ್ವೀಟ್​ ಮಾಡಿದ್ದರು. ಅಲ್ಲದೇ ಮಹಿಳಾ ಆಯೋಗ ಕೂಡ ರಾಹುಲ್​ ಗಾಂಧಿ ಟೀಕೆಯನ್ನು ಖಂಡಿಸಿತ್ತು.
Loading...

First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ