ಜೆಎನ್​ಯು ಕ್ಯಾಂಪಸ್ ರಸ್ತೆಗೆ ವಿಡಿ ಸಾವರ್ಕರ್ ಹೆಸರು ನಾಚಿಕೆಗೇಡಿನ ಕೆಲಸ ಎಂದ ವಿದ್ಯಾರ್ಥಿಗಳು

ಕಳೆದ ವರ್ಷ ನವೆಂಬರ್ 13 ರಂದು ಕ್ಯಾಂಪಸ್​ನಿಂದ ಹೊರಗೆ ವಿವಿ ಕಾರ್ಯಕಾರಿ ಮಂಡಳಿ ನಡೆಸಿದ ಸಭೆಯಲ್ಲಿ ರಸ್ತೆಗೆ ಸಾವರ್ಕರ್ ಅವರ ಹೆಸರನ್ನು ಇಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕವನ್ನು ಹೆಚ್ಚಿಸುವ ನಿರ್ಧಾರವನ್ನು ಸಹ ಅದೇ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು.

ರಸ್ತೆಗೆ ಸಾವರ್ಕರ್ ಹೆಸರಿಟ್ಟಿರುವ ನಾಮಫಲಕ.

ರಸ್ತೆಗೆ ಸಾವರ್ಕರ್ ಹೆಸರಿಟ್ಟಿರುವ ನಾಮಫಲಕ.

  • Share this:
ನವದೆಹಲಿ: ಹಿಂದುತ್ವದ ಹರಿಕಾರ ಎಂದೇ ಹೆಸರುವಾಸಿಯಾದ ಹಿಂದೂ ರಾಷ್ಟ್ರೀಯವಾದಿ ನಾಯಕ ವಿ.ಡಿ.ಸಾವರ್ಕರ್ ಅವರ ಹೆಸರನ್ನು ಜೆಎನ್​ಯು  ಕ್ಯಾಂಪಸ್​ನಲ್ಲಿರುವ ಒಂದು ರಸ್ತೆಗೆ ಇಡುವ ನಿರ್ಧಾರಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸಭೆಗಳಲ್ಲಿ ಅಲ್ಲಿನ ರಸ್ತೆಗಳಿಗೆ ಹೆಸರನ್ನು ಇಡುವ ಅಭ್ಯಾಸ ಸ್ವಲ್ಪ ಸಮಯದ ಹಿಂದೆ ಪ್ರಾರಂಭವಾಗಿದೆ. ಅದರಂತೆ ಮಂಡಳಿ ಸಭೆಯಲ್ಲಿ ಕ್ಯಾಂಪಸ್​ನ ಒಂದು ರಸ್ತೆಗೆ ಸಾವರ್ಕರ್ ಹೆಸರು ಇಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಸಾವರ್ಕರ್ ಹೆಸರಿಡುವ ನಿರ್ಧಾರ ವಿದ್ಯಾರ್ಥಿಗಳನ್ನು ಕೆರಳಿಸಿದೆ.

ಕಾಲೇಜಿನ ರಸ್ತೆಗೆ 'ವಿಡಿ ಸಾವರ್ಕರ್ ಮಾರ್ಗ' ಎಂದು ಹೆಸರಿಸುವ ನಿರ್ಧಾರವನ್ನು ಕಳೆದ ವರ್ಷ ನವೆಂಬರ್ 13 ರಂದು ಕ್ಯಾಂಪಸ್ ಹೊರಗೆ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಅದೇ ಸಭೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕ ಹೆಚ್ಚಿಸಲು ಸಹ ನಿರ್ಧರಿಸಲಾಗಿತ್ತು.

ರವಿದಾಸ್ ಮಾರ್ಗ, ರಾಣಿ ಅಬ್ಬಕಾ ಮಾರ್ಗ, ಅಬ್ದುಲ್ ಹಮೀದ್ ಮಾರ್ಗ, ಮಹರ್ಷಿ ವಾಲ್ಮೀಕಿ ಮಾರ್ಗ, ರಾಣಿ ಝಾನ್ಸಿ ಮಾರ್ಗ, ವೀರ್ ಶಿವಾಜಿ ಮಾರ್ಗ, ಮಹಾರಾಣಾ ಪ್ರತಾಪ್ ಮಾರ್ಗ ಮತ್ತು ಸರ್ದಾರ್ ಪಟೇಲ್ ಮಾರ್ಗಗಳು ಎಂದು ಆ ಸಭೆಯಲ್ಲಿ ಖ್ಯಾತನಾಮರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಲೋಕಮಾನ್ಯ ತಿಲಕ್ ಮಾರ್ಗ, ದಯಾನಂದ ಸರಸ್ವತಿ ಮಾರ್ಗ, ಗೋಪಿನಾಥ್ ಬೋರ್ಡೋಲಾಯ್ ಮಾರ್ಗ, ಗಾರ್ಗಿ ವಚನ ಕವಿ ಮಾರ್ಗ ಮತ್ತು ದಾರಾ ಶಿಕೋಹ್ ಮಾರ್ಗ ಎಂಬ ಹೆಸರುಗಳನ್ನು ಸೂಚಿಸಲಾಗಿತ್ತು.

ಜೆಎನ್​ಯು ವಿದ್ಯಾರ್ಥಿ ಸಂಘದ ನಾಯಕಿ ಆಯಿಷೆ ಘೋಷ್ ಅವರು ವಿ.ಡಿ.ಸಾವರ್ಕರ್ ಹೆಸರಿಟ್ಟಿರುವ ರಸ್ತೆಯ ನಾಮಫಲಕ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ “ಈ ವಿಶ್ವವಿದ್ಯಾಲಯದಲ್ಲಿ ಈ ಮನುಷ್ಯನ ಹೆಸರನ್ನು ಇಟ್ಟಿರುವುದು ಜೆಎನ್​ಯು ಪರಂಪರೆಗೆ ಮಸಿ ಬಳಿದಂತೆ. ವಿಶ್ವವಿದ್ಯಾನಿಲಯವು ಸಾವರ್ಕರ್ ಮತ್ತು ಅವರ ಆಲೋಚನೆಗಳಿಗೆ ಎಂದಿಗೂ ಜಾಗವನ್ನು ಹೊಂದಿರಲಿಲ್ಲ ಮತ್ತು ಅದು ಎಂದಿಗೂ ಅದಕ್ಕೆ ಆಸ್ಪದ ನೀಡುವುದಿಲ್ಲ, ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕ್ಯಾಂಪಸ್​ನಲ್ಲಿರುವ ಸುಬನ್ಸಿರ್ ಹಾಸ್ಟೆಲ್​ಗೆ ಹೋಗುವ ದಾರಿಯನ್ನು ತೋರಿಸುವ ಸಂಕೇತ ಫಲಕದ ಪಕ್ಕದಲ್ಲಿ ಈ ಬೋರ್ಡ್ ಸ್ಥಾಪಿಸಲಾಗಿದೆ.

ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಯಾದವ್ ಇದು ಜೆಎನ್​ಯು ಇತಿಹಾಸಕ್ಕೆ ದಕ್ಕೆ ತರುವ ಪ್ರಯತ್ನ ಎಂದು ಹೇಳಿದ್ದಾರೆ. “ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಸೇರಿಕೊಂಡ ಜನರಿಗೆ ಜೆಎನ್​ಯುನಲ್ಲಿ ಈ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ನಾವು ಅದನ್ನು ಸ್ವೀಕರಿಸುವುದಿಲ್ಲ, ” ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಪ್ರತಿ 3 ದಿನಗಳಿಗೊಮ್ಮೆ ಫ್ರಾನ್ಸ್ ನಲ್ಲಿ ದ್ವಿಗುಣವಾಗುತ್ತಿದೆ ಕೊರೋನಾ ವೈರಸ್ ಪ್ರಕರಣSas

ಈ ಸಂಬಂಧ ಪ್ರತಿಕ್ರಿಯೆ ಕೇಳಲು ಜೆಎನ್​ಯು ರಿಜಿಸ್ಟ್ರಾರ್ ಪ್ರಮೋದ್ ಕುಮಾರ್ ಕರೆ ಮಾಡಿದಾಗಲೂ ಅವರು ಕರೆ ಸ್ವೀಕರಿಸಲಿಲ್ಲ.

ಕಳೆದ ವರ್ಷ ಆಗಸ್ಟ್​ನಲ್ಲಿ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಗೂ ಮುನ್ನ, ಡಿಯುಎಸ್​ಯು ಅಧ್ಯಕ್ಷೆ ಶಕ್ತಿ ಸಿಂಗ್ ಅವರು ವೀರ್ ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರ ಪ್ರತಿಮೆಗಳನ್ನು ಉತ್ತರ ಕ್ಯಾಂಪಸ್​ನ ವಾರ್ಸಿಟಿ ಆರ್ಟ್ಸ್ ಫ್ಯಾಕಲ್ಟಿ ಗೇಟ್​ನ ಹೊರಗೆ ಯಾವುದೇ ಅನುಮತಿ ಪಡೆಯದೆ ಸ್ಥಾಪಿಸಿದ್ದರು.

  • ವರದಿ: ಸಂಧ್ಯಾ ಎಂ


First published: