• Home
 • »
 • News
 • »
 • national-international
 • »
 • ಹೋರಾಟದಿಂದ ಒಂದೇ ಒಂದು ಇಂಚು ಹಿಂದೆ ಸರಿಯಬೇಡಿ, ನಿಮ್ಮ ಜತೆ ನಾವಿದ್ದೇವೆ; ರೈತರಿಗೆ ರಾಹುಲ್ ಗಾಂಧಿ ಭರವಸೆ

ಹೋರಾಟದಿಂದ ಒಂದೇ ಒಂದು ಇಂಚು ಹಿಂದೆ ಸರಿಯಬೇಡಿ, ನಿಮ್ಮ ಜತೆ ನಾವಿದ್ದೇವೆ; ರೈತರಿಗೆ ರಾಹುಲ್ ಗಾಂಧಿ ಭರವಸೆ

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

ಕೆಂಪು ಕೋಟೆಗೆ ಗೂಂಡಾಗಳನ್ನು ಬಿಟ್ಟಿದ್ದು ಯಾರು? ಕೆಂಪು ಕೋಟೆಗೆ ಗೂಂಡಾಗಳನ್ನು ಬಿಟ್ಟಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದಕ್ಕೆ ಉತ್ತರಿಸಬೇಕು ಒಂದು ಅಮಿತ್ ಶಾಗೆ ರಾಹುಲ್ ಗಾಂಧಿ ಒತ್ತಾಯಿಸಿದರು. ರೈತರು ತಮ್ಮ ಹೋರಾಟದಿಂದ ಒಂದೇ ಒಂದು ಇಂಚು ಹಿಂದೆ ಸರಿಯಬೇಡಿ. ನಾವು ನಿಮ್ಮ ಜೊತೆಗೆ ಇದ್ದೇವೆ ರೈತರಿಗೆ ರಾಹುಲ್ ಗಾಂಧಿ ಭರವಸೆ ನೀಡಿದರು.

ಮುಂದೆ ಓದಿ ...
 • Share this:

  ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ರೈತರು ಸಿಡಿದೆದಿದ್ದಾರೆ. ಈ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಕಳೆದ ಎರಡು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜನರವರಿ 26ರ ಗಣರಾಜ್ಯೋತ್ಸವದಂದು ಕಿಸಾನ್ ಟ್ರ್ಯಾಕ್ಟರ್ ಪರೆಡ್ ನಡೆಸಿದ್ದ ರೈತರಲ್ಲಿ ಕೆಲ ಉದ್ರಿಕ್ತರ ಗುಂಪು ದೆಹಲಿಯ ಕೆಂಪುಕೋಟೆಗೆ ನುಗ್ಗಿದ್ದವು. ಈ ವೇಳೆ ಸಾಕಷ್ಟು ಹಿಂಸಾಚಾರ ನಡೆಯಿತು. ಹಿಂಸಾಚಾರದ ಬಳಿಕ ರೈತರ ಪ್ರತಿಭಟನೆಯಲ್ಲಿ ಅನಿಶ್ಚಿತ ವಾತಾವರಣ ಉಂಟಾಗಿದೆ. ಏತನ್ಮಧ್ಯೆ, ದೆಹಲಿಯ ಸಿಂಘ್ ಗಡಿಯಲ್ಲಿನ ಸ್ಥಳೀಯರು ನಿಮ್ಮ ಹೋರಾಟದಿಂದ ನಮಗೆ ತೊಂದರೆಯಾಗುತ್ತದೆ. ದಯವಿಟ್ಟು ಜಾಗ ಖಾಲಿ ಎಂದು ಪ್ರತಿಭಟನಾಕಾರರಿಗೆ ಆಗ್ರಹಿಸಿದ್ದಾರೆ. ಇದೇ ವಿಚಾರವಾಗಿ ಇಂದು ಸ್ಥಳೀಯರು ಮತ್ತು ರೈತ ಹೋರಾಟಗಾರರ ನಡುವೆ ಘರ್ಷನೆ ನಡೆದಿದೆ. ಪೊಲೀಸರು ಇಂದು ಕೂಡ ಲಾಠಿಚಾರ್ಜ್ ಮಾಡಿದ್ದು, ದೆಹಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.


  ರೈತರ ಹೋರಾಟದ ವಿಚಾರ ಹಾಗೂ ಪ್ರತಿಭಟನಾನಿರತರನ್ನು ಜಾಗ ಖಾಲಿ ಮಾಡಿಸುವ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ಪ್ರತಿಭಟನೆ ಕೈಬಿಡುತ್ತೆ ಎಂದುಕೊಂಡಿರಬಹುದು. ರೈತರು ಪ್ರತಿಭಟನಾ ಸ್ಥಳದಿಂದ ತೆರಳುವುದಿಲ್ಲ. ಸರ್ಕಾರ ರೈತರ ಮೇಲೆ‌ ದಬ್ಬಾಳಿಕೆ ನಡೆಸುತ್ತಿದೆ. ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದೇ ಸಮಸ್ಯೆಗೆ ಪರಿಹಾರ ಎಂದು ಹೇಳಿದರು.


  ಇದನ್ನು ಓದಿ: ದೆಹಲಿ ಮತ್ತೆ ಉದ್ವಿಗ್ನ; ಪ್ರತಿಭಟನಾನಿರತ ರೈತರ ವಿರುದ್ಧ ‘ಸ್ಥಳೀಯ ಜನರ’ ಆಕ್ರೋಶ; ಕಲ್ಲು ತೂರಾಟ


  ಕೆಂಪು ಕೋಟೆಗೆ ಗೂಂಡಾಗಳನ್ನು ಬಿಟ್ಟಿದ್ದು ಯಾರು? ಕೆಂಪು ಕೋಟೆಗೆ ಗೂಂಡಾಗಳನ್ನು ಬಿಟ್ಟಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದಕ್ಕೆ ಉತ್ತರಿಸಬೇಕು ಒಂದು ಅಮಿತ್ ಶಾಗೆ ರಾಹುಲ್ ಗಾಂಧಿ ಒತ್ತಾಯಿಸಿದರು. ರೈತರು ತಮ್ಮ ಹೋರಾಟದಿಂದ ಒಂದೇ ಒಂದು ಇಂಚು ಹಿಂದೆ ಸರಿಯಬೇಡಿ. ನಾವು ನಿಮ್ಮ ಜೊತೆಗೆ ಇದ್ದೇವೆ ರೈತರಿಗೆ ರಾಹುಲ್ ಗಾಂಧಿ ಭರವಸೆ ನೀಡಿದರು.

  Published by:HR Ramesh
  First published: