Buffalo: ಎಮ್ಮೆಗಾಗಿ ಜಿದ್ದಾಜಿದ್ದಿ: ಅಸಲಿ ಮಾಲೀಕನನ್ನು ಪತ್ತೆಹಚ್ಚಲು ಹೀಗೆಲ್ಲಾ ಮಾಡೋದಾ?

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಅಹ್ಮದ್ಗಢ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಕದ್ದ ಎಮ್ಮೆಯೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ನಡುವೆ ಜಟಾಪಟಿ ಉಂಟಾಗಿದೆ. ಕಳುವಾಗಿರುವ ಎಮ್ಮೆಯನ್ನು ನನ್ನದು ಎಂದು ಒಬ್ಬರು ಹೇಳಿದರೆ, ಇದು ನಮ್ಮ ಕೊಟ್ಟಿಗೆಯಲ್ಲಿಯೇ ಹುಟ್ಟಿ ಬೆಳೆದ ಕರು ಎಂದು ಇನ್ನೊಬ್ಬರು ವಾದಿಸುತ್ತಿದ್ದಾರೆ. ಈ ಎಲ್ಲಾ ವಾದ-ಪ್ರತಿವಾದಗಳಿಗೆ ನ್ಯಾಯ ಒದಗಿಸಲು ಪೊಲೀಸ್ ಅಧಿಕಾರಿಗಳು ಎಮ್ಮೆಯ ಡಿಎನ್ಎ ಪರೀಕ್ಷೆಗೆ ಆದೇಶ ನೀಡಿದ್ದಾರೆ.

ಎಮ್ಮೆ

ಎಮ್ಮೆ

  • Share this:
ಕರ್ನಾಟಕ (Karnataka) ಸೇರಿ ಹಲವೆಡೆ ಈ ರೀತಿಯ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಎಮ್ಮೆ, ಹಸು, ನಾಯಿ ಮಾಲೀಕತ್ವ (Owner) ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅದನ್ನು ಪರಿಹರಿಸಲು ಪ್ರಾಣಿಗಳ (Animal) ಡಿಎನ್ಎ ಪರೀಕ್ಷೆಗೆ ಪೊಲೀಸರು (Police) ಆದೇಶಿಸಿರುವ ಘಟನೆಗಳು ಸುಖಾಂತ್ಯ ಕಂಡಿವೆ. ಇಂಥಹದ್ದೆ ಮತ್ತೊಂದು ಘಟನೆ ಪ್ರಸ್ತುತ ಉತ್ತರ ಪ್ರದೇಶದಲ್ಲಿ (Uttar Pradesh) ಬೆಳಕಿಗೆ ಬಂದಿದೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಅಹ್ಮದ್ಗಢ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಕದ್ದ ಎಮ್ಮೆಯೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ನಡುವೆ ಜಟಾಪಟಿ ಉಂಟಾಗಿದೆ.

ಕಳುವಾಗಿರುವ ಎಮ್ಮೆಯನ್ನು ನನ್ನದು ಎಂದು ಒಬ್ಬರು ಹೇಳಿದರೆ, ಇದು ನಮ್ಮ ಕೊಟ್ಟಿಗೆಯಲ್ಲಿಯೇ ಹುಟ್ಟಿ ಬೆಳೆದ ಕರು ಎಂದು ಇನ್ನೊಬ್ಬರು ವಾದಿಸುತ್ತಿದ್ದಾರೆ. ಈ ಎಲ್ಲಾ ವಾದ-ಪ್ರತಿವಾದಗಳಿಗೆ ನ್ಯಾಯ ಒದಗಿಸಲು ಪೊಲೀಸ್ ಅಧಿಕಾರಿಗಳು ಎಮ್ಮೆಯ ಡಿಎನ್ಎ ಪರೀಕ್ಷೆಗೆ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ?
ಚಂದ್ರಪಾಲ್ ಕಶ್ಯಪ್ ಅವರು ಉತ್ತರ ಪ್ರದೇಶದ ಶಾಮಿಲ್ ಜಿಲ್ಲೆಯ ಅಹ್ಮದ್ಗಢ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 25, 2020ರಂದು, ಚಂದ್ರಪಾಲ್ ಕಶ್ಯಪ್ ಅವರು ತಮ್ಮ ಕೊಟ್ಟಿಗೆಯಿಂದ ಮೂರು ವರ್ಷದ ಎಮ್ಮೆಯನ್ನು ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದರು. ಆದರೆ ಅವರು ಅದೇ ವರ್ಷದ ನವೆಂಬರ್ನಲ್ಲಿ ಶರೋನ್ಪುರ ಜಿಲ್ಲೆಯ ಬೀನ್ಪುರ ಗ್ರಾಮದಲ್ಲಿ ತಮ್ಮ ಎಮ್ಮೆಯನ್ನು ಗುರುತಿಸಿದ್ದರು. ಆದರೆ ಅದರ ಮಾಲೀಕ ಸತ್ಬೀರ್ ಸಿಂಗ್ ಎಂಬಾತ ಅದು ತನ್ನ ಎಮ್ಮೆ ಯಾವುದಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ನಿಮಗೆ ಹಸ್ತಾಂತರಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.

ಇದನ್ನೂ ಓದಿ:  Deep Sea Fish: ಆಳ ಸಮುದ್ರದ ಮೀನಿನ ಫೋಟೋ ವೈರಲ್! ನೋಡಿ ನೆಟ್ಟಿಗರು ಹೆದರಿಕೊಂಡಿದ್ದೇಕೆ?

ಕಶ್ಯಪ್ ದೂರು ನೀಡಿದ ಬಳಿಕ ಅದೇ ಸಮಯದಲ್ಲಿ ಕೊರೋನಾ ಸಂಭವಿಸಿತು. ಹೀಗಾಗಿ ಈ ಪ್ರಕರಣವನ್ನು ಪೊಲೀಸರು ಕೈಬಿಟ್ಟಿದ್ದರು. ಆದರೆ ಇದೀಗ ಮತ್ತೆ ಜೀವ ಪಡೆದುಕೊಂಡ ಪ್ರಕರಣವನ್ನು ಶಾಮ್ಲಿ ಎಸ್ಪಿ ಸುಕೃತಿ ಮಾಧವ್ ಅವರು ಕೈಗೆತ್ತಿಕೊಂಡಿದ್ದಾರೆ. ಎಮ್ಮೆಯ ನಿಜವಾದ ಮಾಲೀಕನನ್ನು ಗುರುತಿಸಲು ಶರೋನ್ಪುರದಲ್ಲಿ ಕಶ್ಯಪ್ ಜೊತೆಗಿದೆ ಎನ್ನಲಾದ ಬರ್ರೆಕಿ (ಪತ್ತೆಯಾದ ಎಮ್ಮೆಯ ತಾಯಿ) ಮತ್ತು ಸತ್ಪೀರ್ ಸಿಂಗ್ ಅವರ ಬಳಿ ಇರುವ ದುನ್ನಪೋತು ಎಂಬ ಹೆಸರಿನ ಎಮ್ಮೆಯ ಡಿಎನ್ಎ ಪರೀಕ್ಷೆಯನ್ನು ಮಾಡಿಸುವಂತೆ ಆದೇಶಿಸಿದ್ದಾರೆ.

ನಿಜವಾದ ಮಾಲೀಕ ಯಾರೆಂದು ತಿಳಿಯುವುದು ಸವಾಲು
ಪ್ರಕರಣದ ಬಗ್ಗೆ ಮಾತನಾಡಿದ ಶಾಮ್ಲಿ ಎಸ್ಪಿ ಸುಕೃತಿ ಮಾಧವ್ "ಆ ಎಮ್ಮೆಯ ನಿಜವಾದ ಮಾಲೀಕರು ಯಾರೆಂದು ತಿಳಿಯುವುದು ನಿಜವಾಗಿಯೂ ಸವಾಲಾಗಿದೆ. ಆದರೆ ಕಶ್ಯಪ್ ತಾನು ಕರುವಿನ ತಾಯಿಯನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರಿಂದ ನಾವು ಡಿಎನ್ಎ ಪರೀಕ್ಷೆಗೆ ಹೋಗಲು ನಿರ್ಧರಿಸಿದ್ದೇವೆ" ಎಂದು ಶಾಮ್ಲಿ ಎಸ್ಪಿ ಸುಕೃತಿ ಮಾಧವ್ ತಿಳಿಸಿದರು.

ಕಶ್ಯಪ್ ಎಮ್ಮೆಯನ್ನು ಪತ್ತೆ ಹಚ್ಚಿದ್ದು ಹೇಗೆ?
ಆದಾಗ್ಯೂ, ಕಶ್ಯಪ್ ಅವರು ತಮ್ಮ ಕರುವನ್ನು ಹೇಗೆ ಗುರುತಿಸಿದರು ಎಂಬುದನ್ನು ಪೊಲೀಸರ ಬಳಿ ವಿವರಿಸಿದ್ದಾರೆ. "ಮನುಷ್ಯರಂತೆ ಪ್ರಾಣಿಗಳಿಗೂ ವಿಶೇಷ ಲಕ್ಷಣಗಳಿವೆ. ಎಮ್ಮೆಯ ಎಡಗಾಲಿನಲ್ಲಿ ಗಾಯದ ಗುರುತು ಇದೆ. ಅದರ ಬಾಲದ ತುದಿಯಲ್ಲಿ ಬಿಳಿ ತೇಪೆಯಿದೆ. ಮೂರನೆಯದು ಸ್ಮರಣೆ. ನಾನು ಅದರ ಹತ್ತಿರ ಹೋದಾಗ ನನ್ನ ಎಮ್ಮೆಯ ಕರು ನನ್ನನ್ನು ಗುರುತಿಸಿತು. ಮತ್ತು ನನ್ನ ಹತ್ತಿರ ಬಂದಿತು. ಅದರ ಗುರುತನ್ನು ಬಹಿರಂಗಪಡಿಸಲು ನಾನು ಇನ್ನೇನು ಮಾಡಬಹುದು?" ಎಂದು ಕಶ್ಯಪ್ ವಿವರಿಸಿದರು.

ಇದನ್ನೂ ಓದಿ: Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!

ಆದಾಗ್ಯೂ, ಪ್ರಕರಣದ ತನಿಖಾಧಿಕಾರಿ ಅರುಣ್ ಕುಮಾರ್, "ಜಾನುವಾರುಗಳಿಗೆ ಡಿಎನ್‌ಎ ಪರೀಕ್ಷೆ ಮಾಡುವುದು ಬಹಳ ಅಪರೂಪ. ಅಂತಹ ಪರೀಕ್ಷೆಗೆ ಉತ್ತರ ಪ್ರದೇಶದಲ್ಲಿ ಯಾವುದೇ ಲ್ಯಾಬ್ ಇಲ್ಲ. ಪಶುಸಂಗೋಪನಾ ಇಲಾಖೆಯವರು ಮತ್ತು ಪಶುವೈದ್ಯರು ತಾಯಿ ಎಮ್ಮೆ ಮತ್ತು ಕರುವಿನ ಡಿಎನ್ಎ ಮಾದರಿಗಳನ್ನು ತೆಗೆದುಕೊಂಡು ದೆಹಲಿ ಅಥವಾ ಗುಜರಾತ್ ಲ್ಯಾಬ್ಗೆ ಪರೀಕ್ಷಿಸಲು ಕಳಿಸುತ್ತೇವೆ” ಎಂದಿದ್ದಾರೆ.
Published by:Ashwini Prabhu
First published: