HOME » NEWS » National-international » DNA EXPLAINER WHAT IS THE SOUTH INDIAN N440K COVID 19 VARIANT AND WHY IS IT 15 TIMES MORE LETHAL STG LG

Explainer: ದಕ್ಷಿಣ ಭಾರತದ ಎನ್ 440 ಕೆ ಕೋವಿಡ್ -19 ರೂಪಾಂತರ ಯಾವುದು..? ಅದು 15 ಪಟ್ಟು ಹೆಚ್ಚು ಮಾರಕವೇಕೆ ಗೊತ್ತಾ..?

ಜ್ವರ, ಸ್ನಾಯುಗಳಲ್ಲಿನ ನೋವು, ಡ್ರೈ ಹಾಗೂ ನಿರಂತರ ಕೆಮ್ಮು ಮತ್ತು ವಾಸನೆ, ರುಚಿಯ ನಷ್ಟದಂತಹ ರೋಗಿಗಳಲ್ಲಿ ಕೆಲವು ಹೊಸ ಲಕ್ಷಣಗಳು ಕಂಡುಬರುತ್ತವೆ. ಕಾಂಜಂಕ್ಟಿವಿಟಿಸ್ ಜೊತೆಗೆ, ನೋಯುತ್ತಿರುವ ಗಂಟಲು, ತಲೆನೋವು, ರ‍್ಯಾಷಸ್, ಹೊಟ್ಟೆ ಉಬ್ಬರ, ಮತ್ತು ಬೆರಳುಗಳು ಹಾಗೂ ಕಾಲ್ಬೆರಳುಗಳಲ್ಲಿ ಬಣ್ಣಗೆಡಿಸುವಿಕೆಯಂತಹ ಲಕ್ಷಣಗಳು ಸಹ ಕಂಡುಬರುತ್ತಿವೆ.

news18-kannada
Updated:May 5, 2021, 2:24 PM IST
Explainer: ದಕ್ಷಿಣ ಭಾರತದ ಎನ್ 440 ಕೆ ಕೋವಿಡ್ -19 ರೂಪಾಂತರ ಯಾವುದು..? ಅದು 15 ಪಟ್ಟು ಹೆಚ್ಚು ಮಾರಕವೇಕೆ ಗೊತ್ತಾ..?
ಸಾಂದರ್ಭಿಕ ಚಿತ್ರ
  • Share this:
ಭಾರತದಲ್ಲಿ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗುತ್ತಲೇ ಇದ್ದು, ಪ್ರತಿ ದಿನ 3 - 4 ಲಕ್ಷ ಸೋಂಕಿತರಲ್ಲಿ ಹೊಸದಾಗಿ ವೈರಸ್‌ ಕಾಣಿಸಿಕೊಳ್ಳುತ್ತಿದ್ದು, ಸಾವಿರಾರು ಜನರು ಬಲಿಯಾಗುತ್ತಿದ್ದಾರೆ. ಈಗ ದೇಶದಲ್ಲಿ ಇರುವುದು ಕೊರೊನಾ ವೈರಸ್‌ ಎರಡನೇ ಅಲೆ ಎಂದು ಹೇಳಲಾಗುತ್ತಿದ್ದು, ಅಲ್ಲದೇ ಅದು ಸಾಕಷ್ಟು ರೂಪಾಂತರಗಳನ್ನು ಪಡೆದುಕೊಂಡಿದೆ. ಈಗಾಗಲೇ B.1617 ಎಂದು ಕರೆಯಲ್ಪಡುವ SARS-CoV-2 ನ ಭಾರತೀಯ ರೂಪಾಂತರವು ದೇಶದಲ್ಲಿ ಹೆಚ್ಚು ಹಾನಿಗೊಳಿಸುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತದ ಕೆಲ ಭಾಗಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಆಂಧ್ರ ಪ್ರದೇಶದಲ್ಲಿ ಹೊಸ ರೂಪಾಂತರವನ್ನು ಹೈದರಾಬಾದ್‌ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದು ನಮ್ಮ ನೆರೆಯ ಆಂಧ್ರ ಮಾತ್ರವಲ್ಲ ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲೂ ಕಾಣಿಸಿಕೊಂಡಿದ್ದು, ಇದು ಈ ಹಿಂದಿನ ತಳಿಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಎಚ್ಚರಿಸಲಾಗಿದೆ ಎಂದು ಡಿಎನ್‌ಎ ವರದಿ ಮಾಡಿದೆ.

ಹೌದು, SARS-CoV-2 ನ ಭಾರತೀಯ ರೂಪಾಂತರ B.1617 ಈಗಾಗಲೇ ಭಾರತದಲ್ಲಿ ಸದ್ದು ಮಾಡುತ್ತಿದ್ದು, ಈ ನಡುವೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಮಹಾಮಾರಿ ವೈರಾಣುವಿನ ಹೊಸ ರೂಪಾಂತರ ಪತ್ತೆಯಾಗಿದೆ. ಹೈದರಾಬಾದ್‌ನ ಸಂಶೋಧಕರು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮತ್ತು ಹೆಚ್ಚು ನಿರ್ದಿಷ್ಟವಾಗಿ ಆಂಧ್ರಪ್ರದೇಶದಲ್ಲಿ ಹೊಸ ರೂಪಾಂತರವನ್ನು ಕಂಡುಕೊಂಡಿದ್ದಾರೆ. ಇದನ್ನು ಕೊರೊನಾ ವೈರಸ್‌ನ N440K ರೂಪಾಂತರ ಎಂದು ಹೇಳಲಾಗುತ್ತಿದ್ದು, ಈ ಹಿಂದಿನ ಸ್ಟ್ರೈನ್‌ಗಳಿಗಿಂತ 15 ಪಟ್ಟು ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ಈ ರೂಪಾಂತರ ಮುಖ್ಯವಾಗಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದ ಕೆಲವು ಭಾಗಗಳು ಮತ್ತು ಛತ್ತೀಸ್‌ಗಢದಲ್ಲಿ ನೋಡಲಾಗುತ್ತಿದೆ.

ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ)ಯ ವಿಜ್ಞಾನಿಗಳು ಹೊಸ ಕೊರೊನಾವೈರಸ್‌ನ ರೂಪಾಂತರ N440K ಅನ್ನು ಪತ್ತೆ ಹಚ್ಚಿದರು. ಈ ರೂಪಾಂತರ ಮೊದಲು ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಪತ್ತೆಯಾಗಿದ್ದು, ಇದು ಕನಿಷ್ಠ 10 ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ಹೇಳಲಾಗುತ್ತದೆ.

ಕೇವಲ 5 ದಿನದಲ್ಲಿ ನಿರ್ಮಾಣವಾದ 3D ಪ್ರಿಂಟೆಡ್​ ಮನೆಗೆ ಈ ದಂಪತಿ ನೀಡಿದ ಬಾಡಿಗೆ ಎಷ್ಟು ಗೊತ್ತಾ?

ಆಂಧ್ರ ಪ್ರದೇಶದ ಕರ್ನೂಲ್‌ನ ಜಿಲ್ಲಾ ಕೋವಿಡ್‌ ವಿಶೇಷ ಅಧಿಕಾರಿ ಮತ್ತು ಆಂಧ್ರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪಿ.ವಿ. ಸುಧಾಕರ್ ಅವರು ವೈರಸ್‌ನ ವರ್ಧಿತ ಶಕ್ತಿಯನ್ನು ದೃಢಪಡಿಸಿದರು. “ಹೊಸ ರೂಪಾಂತರವು ಕಡಿಮೆ ಇನ್ಕ್ಯುಬೇಷನ್‌ ಅವಧಿಯನ್ನು ಹೊಂದಿದೆ ಮತ್ತು ರೋಗದ ಪ್ರಗತಿಯು ಹೆಚ್ಚು ವೇಗವಾಗಿದೆ ಎಂದು ನಾವು ಗಮನಿಸಿದ್ದೇವೆ. ಹಿಂದಿನ ಸಂದರ್ಭಗಳಲ್ಲಿ, ವೈರಸ್ ಪೀಡಿತ ರೋಗಿಯು ಹೈಪೋಕ್ಸಿಯಾ ಅಥವಾ ಡಿಸ್ಪ್ನಿಯಾ ಹಂತವನ್ನು ತಲುಪಲು ಕನಿಷ್ಠ ಒಂದು ವಾರ ತೆಗೆದುಕೊಳ್ಳುತ್ತಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ, ರೋಗಿಗಳು ಮೂರು ಅಥವಾ ನಾಲ್ಕು ದಿನಗಳಲ್ಲಿ ಗಂಭೀರ ಸ್ಥಿತಿ-ಹಂತವನ್ನು ತಲುಪುತ್ತಿದ್ದಾರೆ. ಅದಕ್ಕಾಗಿಯೇ ಆಮ್ಲಜನಕ ಅಥವಾ ಐಸಿಯು ಬೆಡ್‌ಗಳ ಮೇಲೆ ಭಾರೀ ಒತ್ತಡವಿದೆ. ” ಎಂದು ದಿ ಹಿಂದೂ ಮಾಧ್ಯಮಕ್ಕೆ ಪಿ.ವಿ. ಸುಧಾಕರ್ ಹೇಳಿಕೆ ನೀಡಿದ್ದಾರೆ.

ಇನ್ನು, ಹೊಸ ರೂಪಾಂತರವು ಕಡಿಮೆ ಇನ್ಕ್ಯುಬೇಷನ್‌ ಅವಧಿಯನ್ನು ಹೊಂದಿದೆ ಮತ್ತು ರೋಗದ ಪ್ರಗತಿಯು ಹೆಚ್ಚು ವೇಗವಾಗಿರುತ್ತದೆ. ಆದ್ದರಿಂದ, ವೈರಸ್ ನ್ಮಮ ದೇಹವನ್ನು ಹೊಕ್ಕಲು ಕಡಿಮೆ ಎಕ್ಸ್‌ಪೋಷರ್‌ ಸಾಕು. ಇದು ಸೋಂಕಿತ ವ್ಯಕ್ತಿಗೆ ಕಡಿಮೆ ಅವಧಿಯಲ್ಲಿ ನಾಲ್ಕರಿಂದ ಐದು ವ್ಯಕ್ತಿಗಳಿಗೆ ಸೋಂಕು ತಗಲುವಂತೆ ಮಾಡುತ್ತದೆ ಎಂದೂ ವರದಿಗಳು ಹೇಳಿವೆ.

B.1617ಹೆಚ್ಚಳದ ಸಮಯವು ಆಯಾ ರಾಜ್ಯಗಳಲ್ಲಿ ಕಂಡುಬರುವ ಕೊರೊನಾ ಎರಡನೇ ಅಲೆಯೊಂದಿಗೆ ಹೊಂದಿಕೆಯಾಗುತ್ತದೆ" ಎಂದು ಸಿಸಿಎಂಬಿಯ ದಿವ್ಯಾ ತೇಜ್ ಸೌಪತಿ ಇಂಡಿಯಾ ಟುಡೆಗೆ ಹೇಳಿಕೆ ನೀಡಿದ್ದಾರೆ."ಕೇರಳದಲ್ಲಿ, GISAIDಯ ಬಗ್ಗೆ ಹೆಚ್ಚಿನ ಡೇಟಾ ಲಭ್ಯವಿಲ್ಲದಿದ್ದರೂ, ಪ್ರಸ್ತುತ B.1.1.7 ಹೆಚ್ಚುತ್ತಿದೆ ಎಂದು ನಾವು gencov2.genomes.in ಮೂಲಕ ನೋಡಬಹುದು. ಆದರೆ N440K ಶೇಕಡಾ 20 ಕ್ಕಿಂತ ಕಡಿಮೆ ಜೀನೋಮ್‌ಗಳಲ್ಲಿದೆ" ಎಂದು ಅವರು ಹೇಳಿದ್ದಾರೆ.

N440K ನಿಜಕ್ಕೂ ದಕ್ಷಿಣ ಭಾರತದಲ್ಲಿ ಆತಂಕಕಾರಿ ರೂಪಾಂತರವಾಗಿದ್ದರೂ, ಹೊಸ ದತ್ತಾಂಶಗಳು ಅದನ್ನು ನಿಧಾನವಾಗಿ B.1617 (ಡಬಲ್-ರೂಪಾಂತರಿತ ರೂಪಾಂತರ ಎಂದು ಕರೆಯಲಾಗುತ್ತದೆ) ಮತ್ತು B.1.1.7 (ಯುಕೆನಲ್ಲಿ ಗುರುತಿಸಲಾಗಿರುವ ರೂಪಾಂತರ) ದಂತಹ ಹೊಸ ಆತಂಕಕಾರಿ ರೂಪಾಂತರಿಯಾಗಿ ಬದಲಾಗುತ್ತಿದೆ ಎಂದು ತೋರಿಸುತ್ತದೆ. ಈ ಹಿನ್ನೆಲೆ ಕೋವಿಡ್ -19ನ N440K ರೂಪಾಂತರದ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ, ಏಕೆಂದರೆ ಮುಂಬರುವ ವಾರಗಳಲ್ಲಿ ಈ ಸ್ಟ್ರೈನ್‌ ಮರೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
Youtube Video

ಕೊರೊನಾ ಹೊಸ ತಳಿಯ ಲಕ್ಷಣಗಳು

"ನಾವು ಹೊಸ ಕೋವಿಡ್ ಸ್ಟ್ರೈನ್ ಅನ್ನು ನೋಡುತ್ತಿದ್ದೇವೆ. ಜ್ವರ, ಸ್ನಾಯುಗಳಲ್ಲಿನ ನೋವು, ಡ್ರೈ ಹಾಗೂ ನಿರಂತರ ಕೆಮ್ಮು ಮತ್ತು ವಾಸನೆ, ರುಚಿಯ ನಷ್ಟದಂತಹ ರೋಗಿಗಳಲ್ಲಿ ಕೆಲವು ಹೊಸ ಲಕ್ಷಣಗಳು ಕಂಡುಬರುತ್ತವೆ. ಕಾಂಜಂಕ್ಟಿವಿಟಿಸ್ ಜೊತೆಗೆ, ನೋಯುತ್ತಿರುವ ಗಂಟಲು, ತಲೆನೋವು, ರ‍್ಯಾಷಸ್, ಹೊಟ್ಟೆ ಉಬ್ಬರ, ಮತ್ತು ಬೆರಳುಗಳು ಹಾಗೂ ಕಾಲ್ಬೆರಳುಗಳಲ್ಲಿ ಬಣ್ಣಗೆಡಿಸುವಿಕೆಯಂತಹ ಲಕ್ಷಣಗಳು ಸಹ ಕಂಡುಬರುತ್ತಿವೆ.
Published by: Latha CG
First published: May 5, 2021, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories