ವೇಲೂರು ಲೋಕಸಭಾ ಚುನಾವಣೆ: ಡಿಎಂಕೆ ಅಭ್ಯರ್ಥಿ ಕದೀರ್ ಆನಂದ್​​ಗೆ ಭರ್ಜರಿ ಜಯ 

ಆಗಸ್ಟ್ 5ರಂದು ನಡೆದಿದ್ದ ವೇಲೂರು ಉಪಚುನಾವಣೆಯಲ್ಲಿ ಒಟ್ಟು 28 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಶೇ. 71ರಷ್ಟು ಮತದಾನವಾಗಿತ್ತು.

news18
Updated:August 9, 2019, 5:05 PM IST
ವೇಲೂರು ಲೋಕಸಭಾ ಚುನಾವಣೆ: ಡಿಎಂಕೆ ಅಭ್ಯರ್ಥಿ ಕದೀರ್ ಆನಂದ್​​ಗೆ ಭರ್ಜರಿ ಜಯ 
ಡಿಎಂಕೆ ಅಭ್ಯರ್ಥಿ ಕದೀರ್ ಆನಂದ್ 
  • News18
  • Last Updated: August 9, 2019, 5:05 PM IST
  • Share this:
ಚೆನ್ನೈ(ಆ. 09): ತಮಿಳುನಾಡಿನ ವೇಲೂರು ಲೋಕಸಭಾ ಮತಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಎ.ಸಿ. ಷಣ್ಮುಗಮ್ ವಿರುದ್ಧ ಡಿಎಂಕೆ ಅಭ್ಯರ್ಥಿ ಕದೀರ್ ಆನಂದ್ 8,141 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಇವತ್ತು ಬೆಳಗ್ಗೆ ಶುರವಾದ ಮತ ಎಣಿಕೆಯಲ್ಲಿ ಷಣ್ಮುಗಂ ಮೊದಲ ಸುತ್ತಿನಲ್ಲಿ 913 ಮತಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎಂಕೆ ಅಭ್ಯರ್ಥಿ ಕದೀರ್ ಆನಂದ್ ದ್ವಿತೀಯ ಸ್ಥಾನದಲ್ಲಿದ್ದರು. ಕೊನೆಯ ಸುತ್ತಿನ ಮತ ಎಣಿಕೆ ವೇಳೆಗೆ ಮುನ್ನಡೆ ಸಾಧಿಸಿದ ಡಿಎಂಕೆ ಅಭ್ಯರ್ಥಿ ಕದೀರ್ ಆನಂದ್ ಭರ್ಜರಿ ಗೆಲುವು ಕಂಡಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಕಾರಣದಿಂದ ವೇಲೂರು ಮತಕ್ಷೇತ್ರ ಉಪಚುನಾವಣೆಯನ್ನು ಮುಂದೂಡಲಾಗಿತ್ತು. ಇದೇ ಆಗಸ್ಟ್ 5ರಂದು ಇಲ್ಲಿ ಮತದಾನ ನಡೆಸಲಾಗಿತ್ತು. ಆರು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿರುವ ವೇಲೂರು ಮತಕ್ಷೇತ್ರದಲ್ಲಿ ಒಟ್ಟು 14.32 ಲಕ್ಷ ಮತದಾರರಿದ್ದು, ಶೇ. 71.51 ಮಂದಿ ಮತ ಚಲಾಯಿಸಿದ್ದರು.

ಇದನ್ನೂ ಓದಿ: ಪ್ರಣಬ್​ ಮುಖರ್ಜಿಗೆ ಭಾರತ ರತ್ನ ಗೌರವ; ಕಾರ್ಯಕ್ರಮಕ್ಕೆ ಬರಲೇ ಇಲ್ಲ ಗಾಂಧಿ ಕುಟುಂಬ

ಎಐಎಡಿಎಂಕೆ, ಡಿಎಂಕೆ ಪಕ್ಷದವರೂ ಸೇರಿ ಈ ಉಪಚುನಾವಣೆಯಲ್ಲಿ ಒಟ್ಟು 28 ಅಭ್ಯರ್ಥಿಗಳು ಕಣದಲ್ಲಿದ್ದರು.

ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನ 38 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷ ಕೇವಲ 1 ಸ್ಥಾನ ಮಾತ್ರ ಗೆದ್ದಿತ್ತು. ಡಿಎಂಕೆ-ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಕೂಟ ಬರೋಬ್ಬರಿ 37 ಸ್ಥಾನ ಜಯಿಸಿ ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ವೇಲೂರು ಉಪಚುನಾವಣೆಯು ಎಐಎಡಿಎಂಕೆ ಪಕ್ಷಕ್ಕೆ ಪ್ರತಿಷ್ಠೆ ಪ್ರಶ್ನೆಯಾಗಿತ್ತು.

ಸಾರ್ವತ್ರಿಕ ಚುನಾವಣೆಯ ವೇಳೆ ಡಿಎಂಕೆ ಪಕ್ಷ ಪೊಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ಏಮಾರಿಸಿತ್ತು. ವೇಲೂರು ಚುನಾವಣೆಯಲ್ಲಿ ಇಂಥದ್ದಕ್ಕೆ ಜನರು ಮಾರು ಹೋಗುವುದಿಲ್ಲ. ಜನರು ಎಐಎಡಿಎಂಕೆಯ ಕೈಹಿಡಿಯುವ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading