HOME » NEWS » National-international » DMK LAWMAKER DESCRIBES JOURNALISTS AS SCOUNDRELS SAYS MEDIA RUNS LIKE RED LIGHT AREAS IN MUMBAI MAK

ಪತ್ರಕರ್ತರೆಲ್ಲಾ ಪುಂಡರು, ಮಾಧ್ಯಮ ಮುಂಬೈ ರೆಡ್ ಲೈಟ್ ಏರಿಯಾದಂತೆ ಕೆಲಸ ಮಾಡತ್ತೆ; ಡಿಎಂಕೆ ಶಾಸಕ

ಈ ಟಿವಿ ಪತ್ರಕರ್ತರು ನಿಜಕ್ಕೂ ದುಷ್ಕರ್ಮಿಗಳು. ಇವರು ರೆಡ್ ಲೈಟ್ ಏರಿಯಾದವರಂತೆ ಕೆಲಸ ಮಾಡುತ್ತಾರೆ, ಹಣಕ್ಕಾಗಿ ಏನುಬೇಕಾದರೂ ಮಾಡಿಯಾರು. ಇದನ್ನು ನಾನು ಬಹಿರಂಗವಾಗಿ ಹೇಳುತ್ತೇನೆ ಎಂದು ಡಿಎಂಕೆ ಸಂಸದ ಆರ್​.ಎಸ್​. ಭಾರತಿ ಕಿಡಿಕಾರಿದ್ದಾರೆ.

MAshok Kumar | news18-kannada
Updated:February 17, 2020, 7:21 PM IST
ಪತ್ರಕರ್ತರೆಲ್ಲಾ ಪುಂಡರು, ಮಾಧ್ಯಮ ಮುಂಬೈ ರೆಡ್ ಲೈಟ್ ಏರಿಯಾದಂತೆ ಕೆಲಸ ಮಾಡತ್ತೆ; ಡಿಎಂಕೆ ಶಾಸಕ
ಡಿಎಂಕೆ ಸಂಸದ ಆರ್​.ಎಸ್.​ ಭಾರತಿ
  • Share this:
ಚೆನ್ನೈ; ಪತ್ರಕರ್ತರು ರೆಡ್ ಲೈಟ್ ಏರಿಯಾದಲ್ಲಿ ಕೆಲಸ ಮಾಡುವವರಂತೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಇವರು ಹಣಕ್ಕಾಗಿ ಏನು ಬೇಕಾದರೂ ಮಾಡಿಯಾರು ಎಂದು ಹೇಳಿಕೆ ನೀಡುವ ಮೂಲಕ ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷದ ಸಂಸದ ಆರ್.ಎಸ್. ಭಾರತಿ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಸಂಸದ ಆರ್.ಎಸ್. ಭಾರತಿ ಮಾತನಾಡಿರುವ ನಾಲ್ಕು ನಿಮಿಷದ ವಿಡಿಯೋ ಇದೀಗ ವೈರಲ್ ಆಗಿದ್ದು ಆ ವಿಡಿಯೋದಲ್ಲಿ, “ಈ ಪತ್ರಕರ್ತರಿಗೆ ಕೆಲಸವಿಲ್ಲ. ಅವರು ನಮ್ಮನ್ನು ಮಾತ್ರ ದೂಷಿಸುತ್ತಾರೆ. ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್ ಕಿಶೋರ್ ಅವರನ್ನು ಚುನಾವಣೆ ತಂತ್ರ ರೂಪಿಸಲು ಈ ಹಿಂದೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಳಸಿಕೊಂಡಿದ್ದರು. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಳಸಿಕೊಂಡಿತ್ತು. ಆದರೆ, ಇದೇ ಪ್ರಶಾಂತ್ ಕಿಶೋರ್ ಅವರನ್ನು ಡಿಎಂಕೆ ಬಳಸುವಾಗ ಮಾತ್ರ ಮಾಧ್ಯಮಗಳು ಈ ಕುರಿತು ಚರ್ಚೆ ನಡೆಸುತ್ತಿವೆ.

ನಾನು ಡಿಎಂಕೆ ಪಕ್ಷದ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿರುವ ಕಾರಣ ಸುಮ್ಮನಿದ್ದೇನೆ. ಆದರೆ, ಈ ಟಿವಿ ಪತ್ರಕರ್ತರು ನಿಜಕ್ಕೂ ದುಷ್ಕರ್ಮಿಗಳು. ಇವರು ರೆಡ್ ಲೈಟ್ ಏರಿಯಾದವರಂತೆ ಕೆಲಸ ಮಾಡುತ್ತಾರೆ, ಹಣಕ್ಕಾಗಿ ಏನುಬೇಕಾದರೂ ಮಾಡಿಯಾರು. ಇದನ್ನು ನಾನು ಬಹಿರಂಗವಾಗಿ ಹೇಳುತ್ತೇನೆ” ಎಂದು ಕಿಡಿಕಾರಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಹಾಗೂ ದೆಹಲಿ ಚುನಾವಣೆಯಲ್ಲಿ ಎಎಪಿ ಪರವಾಗಿ ಕೆಲಸ ಮಾಡಿದ್ದ ಆಧುನಿಕ ಚುನಾವಣಾ ತಂತ್ರಜ್ಞ ಖ್ಯಾತಿಯ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಕಡೆ ಸೆಳೆಯಲು ಕರ್ನಾಟಕದ ಜೆಡಿಎಸ್ ಪ್ರಯತ್ನ ನಡೆಸಿದ್ದ ಬೆನ್ನಿಗೆ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಡಿಎಂಕೆ ಪಕ್ಷದ ಪರ ಕೆಲಸ ಮಾಡಲಿದ್ದಾರೆ ಎಂಬ ವಿಚಾರ ಘೋಷಣೆಯಾಗಿತ್ತು.

ಈ ವಿಚಾರ ಘೋಷಣೆಯಾಗುತ್ತಿದ್ದಂತೆ ತಮಿಳುನಾಡಿನಲ್ಲಿ ದೊಡ್ಡ ಜಾತಿ ವಿವಾದವೇ ರೂಪ ತಳೆದಿದೆ. ಮೂಲತಃ ಬ್ರಾಹ್ಮಣ್ಯ ವಿರೋಧಿ ಸಿದ್ದಾಂತವನ್ನು ಪೋಷಿಸುವ ಡಿಎಂಕೆ ತನ್ನ ಪಕ್ಷದ ಗೆಲುವಿಗೆ ಸ್ವತಃ ಬ್ರಾಹ್ಮಣ ವ್ಯಕ್ತಿ ಪ್ರಶಾಂತ್ ಕಿಶೋರ್ ಹಿಂದೆ ಬಿದ್ದಿದೆ ಎಂದು ಬಿಜೆಪಿ ರಾಜ್ಯ ಘಟಕ ಟೀಕಾಪ್ರಹಾರವನ್ನೇ ನಡೆಸಿತ್ತು.

ಇದರ ಬೆನ್ನಿಗೆ ಪತ್ರಕರ್ತರ ಟೀಕೆಯ ಕುರಿತು ಡಿಎಂಕೆ ಸಂಸದ ಆರ್​.ಎಸ್​. ಮಾತನಾಡಿರುವ ನಾಲ್ಕು ನಿಮಿಷದ ವಿಡಿಯೋ ದೊಡ್ಡ ವಿವಾದದ ಕೇಂದ್ರಬಿಂದುವಾಗಿ ಬದಲಾಗಿದೆ. ಈ  ವಿಡಿಯೋವನ್ನು ಚೆನ್ನೈನಲ್ಲಿರುವ ಡಿಎಂಕೆ ಪಕ್ಷದ ಅನ್ಬಗಂ ಯುವ ಘಟಕದ ಕಚೇರಿಯಲ್ಲಿ ಚಿತ್ರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಏರ್​ಟೆಲ್​ ಬಳಿಕ ಟೆಲಿಕಾಂ ಇಲಾಖೆಗೆ ಬಾಕಿ ಹಣ ಪಾವತಿಸಿದ ವೊಡಾಫೋನ್ ಐಡಿಯಾ, ಟಾಟಾ ಗ್ರೂಪ್
Youtube Video
First published: February 17, 2020, 7:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories