"Vote ಕೊಡಿ" ಅಂತ ಕೇಳುವಾಗಲೇ ಕೈಕೊಟ್ಟ Heart! ಹೃದಯಾಘಾತಕ್ಕೆ ಚುನಾವಣೆ ಅಭ್ಯರ್ಥಿ ಸಾವು

ಮನೆ ಮನೆ ಪ್ರಚಾರದ ವೇಳೆ ಡಿಎಂಕೆ ಅಭ್ಯರ್ಥಿ ಅನುಸೂಯಾ ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮತ್ತೊಂದೆಡೆ ಡಿಎಂಕೆ ಅಭ್ಯರ್ಥಿ ಸಿತುರೆಡ್ಡಿ ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟಿದ್ದರು. ಇನ್ನು ಕಳೆದ ಮಂಗಳವಾರವೂ ಇಂಥದ್ದೇ ಘಟನೆ ನಡೆದಿತ್ತು.

ಮತ ಅಭ್ಯರ್ಥಿ ಅನುಸೂಯ

ಮತ ಅಭ್ಯರ್ಥಿ ಅನುಸೂಯ

  • Share this:
ಚೆನ್ನೈ: ಪಕ್ಕದ ತಮಿಳುನಾಡು ರಾಜ್ಯದಲ್ಲಿ (Tamil Nadu State) ಸ್ಥಳೀಯ ಸಂಸ್ಥೆಗಳ ಚುನಾವಣಾ (Local body Election) ರಣಕಣ ರಂಗೇರಿದೆ. ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಫೆಬ್ರವರಿ 22ರಂದು ಫಲಿತಾಂಶ (Result) ಹೊರಬೀಳಲಿದೆ.  ಡಿಎಂಕೆ (DMK), ಎಐಎಡಿಎಂಕೆ (AIADMK) ಸೇರಿದಂತೆ ಎಲ್ಲಾ ಪಕ್ಷಗಳ (Party) ಅಭ್ಯರ್ಥಿಗಳು (Candidates) ಅಬ್ಬರದ ಪ್ರಚಾರ (Campaign) ಮುಗಿಸಿದ್ದಾರೆ. ಇದೀಗ ಮನೆ ಮನೆ ಪ್ರಚಾರ ನಡೆಯುತ್ತಿದೆ. ಈ ವೇಳೆಯಲ್ಲೇ ತಂಜಾವೂರಿನಲ್ಲಿ ಅಭ್ಯರ್ಥಿಯೊಬ್ಬರು ತಮ್ಮ ಪ್ರಚಾರದ ಮಧ್ಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಯ್ಯಂಪೇಟ್ಟೈ 9ನೇ ವಾರ್ಡ್‌ನ ಡಿಎಂಕೆ ಪಕ್ಷದ ಅಭ್ಯರ್ಥಿ ಅನುಸೂಟಾ ಎಂಬುವವರು ತಂಜಾವೂರಿನಲ್ಲಿ ಪ್ರಚಾರದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

 ನಿನ್ನೆಯೂ ಬಿಡುವಿಲ್ಲದಂತೆ ಪ್ರಚಾರ ಮಾಡಿದ್ದ ಅನುಸೂಯಾ

ಡಿಎಂಕೆ ಅಭ್ಯರ್ಥಿ ಡಿ.ಎಂ. ಅನುಸೂಯ ಎನ್ನುವವರು ಅಯ್ಯಂಪೇಟೆಯ 9ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಚುನಾವಣೆ ಘೋಷಣೆಯಾಗುವ ಮೊದಲಿನಿಂದಲೇ ಅನುಸೂಯ ಅಬ್ಬರದ ಪ್ರಚಾರ ನಡೆಸಿದ್ದರು. ನಿನ್ನೆಯೂ ಕೊನೆಯ ದಿನದ ಪ್ರಯುಕ್ತ ಬೆಳಗ್ಗೆಯಿಂದ ರಾತ್ರಿವರೆಗೂ ಚುನಾವಣೆ ಪ್ರಚಾರದಲ್ಲಿ ಅನುಯೂಸ ಭಾಗಿಯಾಗಿದ್ದರು.

ಮನೆ ಮನೆ ಪ್ರಚಾರದ ವೇಳೆಯೇ ಹೃದಯಾಘಾತ

ನಾಳೆ ಅಂದರೆ ಫೆಬ್ರವರಿ 19ರಂದು ಚುನಾವಣೆ ನಡೆಯುವುದರಿಂದ ನಿನ್ನೆ ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿತ್ತು. ಇಂದು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಆಯೋಗ ಅವಕಾಶ ನೀಡಿತ್ತು. ಹೀಗಾಗಿ ಅನುಸೂಯಾ ಇಂದು ತಮ್ಮ ವಾರ್ಡ್‌ನ ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದರು. ಇದೀಗ ಪ್ರಚಾರದ ವೇಳೆಯೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: Viral Video: ಮಗನ ಮದುವೆಯಲ್ಲಿ ಕುಣಿಯುತ್ತಲೇ ಪ್ರಾಣಬಿಟ್ಟ ಅಮ್ಮ! ಕಣ್ಣಲ್ಲಿ ನೀರು ತರಿಸೋ ದೃಶ್ಯ ಇಲ್ಲಿದೆ

ಆಸ್ಪತ್ರೆಗೆ ಕರೆದೊಯ್ದರು ಬದುಕದ ಅನುಸೂಯಾ

ಮನೆಯೊಂದರಲ್ಲಿ ವೋಟು ಕೊಡುವಂತೆ ಕೇಳಿ ಹೊರ ಬರುತ್ತಾ ಇದ್ದ ಅನುಸೂಯಾ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಅಲ್ಲೇ ಕುಳಿತು ಸುಧಾರಿಸಿಕೊಂಡಿದ್ದಾರೆ. ಆದರೆ ಮತ್ತೆ ನೋವು ಜಾಸ್ತಿಯಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಪಕ್ಷದ ಕಾರ್ಯಕರ್ತರು, ಕುಟುಂಬಸ್ಥರೆಲ್ಲ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಅನುಸೂಯಾ ಮೃತಪಟ್ಟಿದ್ದಾರೆ ಅಂತ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಅಭ್ಯರ್ಥಿಯ ಕುಟುಂಬಸ್ಥರಿಗೆ ನಾಯಕರಿಂದ ಸಾಂತ್ವನ

ಅನುಸೂಯಾ ಸಾವಿನಿಂದ ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ. ಜೊತೆಗೆ ಪಕ್ಷದ ಕಾರ್ಯಕರ್ತರು, ಅವರ ಬೆಂಬಲಿಗರೂ ಸಹ ಕಂಗಾಲಾಗಿದ್ದಾರೆ. ಇದೀಗ ಡಿಎಂಕೆ ಸ್ಥಳೀಯ ನಾಯಕರು ಅನುಸೂಯ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರಿಗೂ ಧೈರ್ಯ ತುಂಬಿದ್ದಾರೆ.

ಮತ್ತೋರ್ವ ಅಭ್ಯರ್ಥಿಗೂ ಹೃದಯಾಘಾತ

ಮತ್ತೊಂದೆಡೆ ಕೂಡ ಡಿಎಂಕೆ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಮ್ಮಾಪೇಟ್ಟೈ ಪಟ್ಟಣ ಪಂಚಾಯಿತಿಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಂಜಾನೆ ಟೀ ಕುಡಿಯುವಾಗಲೇ ಹೃದಯಾಘಾತ

ಪಟ್ಟಣ ಪಂಚಾಯಿತಿಯ 2ನೇ ವಾರ್ಡ್‌ಗೆ ಅಂತಿಯೂರು ತಾಲೂಕಿನ ಸುಂದರಂಪಾಳ್ಯದ 64 ವರ್ಷದ  ಜಿ. ಸಿತುರೆಡ್ಡಿ ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಸೀತುರೆಡ್ಡಿ ಮುಂಜಾನೆ 5.30ಕ್ಕೆ ಅಂಗಡಿಯೊಂದರಲ್ಲಿ ಟೀ ಕುಡಿದು ಮನೆಗೆ ಹಿಂತಿರುಗಿದ್ದರು. ಆ ವೇಳೆ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಕುಟುಂಬಸ್ಥರು ಅವರನ್ನು ಬೂತಪಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಅವರನ್ನು ಅಂತಿಯೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಇದನ್ನೂ ಓದಿ: BREAKING NEWS: ಅಹಮದಾಬಾದ್ Blasts Caseನಲ್ಲಿ 38 ಅಪರಾಧಿಗಳಿಗೆ ಮರಣದಂಡನೆ! ಕೋರ್ಟ್ ಆದೇಶದಲ್ಲಿ ಏನಿದೆ?

ಕಳೆದ ಮಂಗಳವಾರವೂ ಅಭ್ಯರ್ಥಿ ಸಾವು

ಮತ್ತೊಂದೆಡೆ ತಮಿಳುನಾಡಿನ ಅಥಣಿ ಪಟ್ಟಣ ಪಂಚಾಯಿತಿಯ 3ನೇ ವಾರ್ಡ್‌ನಲ್ಲೂ ಕೂಡ ಇಂಥದ್ದೇ ಘಟನೆ ನಡೆದಿದೆ. ಅಲ್ಲಿನ ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿದ್ದ 51 ವರ್ಷದ ಎಂ.ಅಯ್ಯಪ್ಪನ್ ಎಂಬುವರು ಕಳೆದ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದರು.
Published by:Annappa Achari
First published: